ನಾಲ್ಕು ಸೀಟುಗಳು ಎಎಪಿಗೆ ನೀಡಲು ಸಿದ್ಧ; ಸಖ್ಯ ಸಾಧ್ಯತೆಗೆ ತೆರೆಬಿದ್ದಿಲ್ಲ- ರಾಹುಲ್ ಗಾಂಧಿ

0
299

ಹೊಸದಿಲ್ಲಿ,ಎ.15: ದಿಲ್ಲಿಯಲ್ಲಿ ನಾಲ್ಕು ಸೀಟುಗಳು ಎಎಪಿಗೆ ನೀಡಲು ಸಿದ್ಧ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ -ಆಮ್ ಆದ್ಮಿ ಪಾರ್ಟಿ ಸಖ್ಯ ಸಾಧ್ಯತೆಗೆ ಅಂತಿಮ ತೆರೆಬಿದ್ದಿಲ್ಲ ಎಂದು ಅವರು ಹೇಳಿದರು. ಚರ್ಚೆಗೆ ಇನ್ನೂ ಸಮಯ ಇದೆ ಎಂದು ಟ್ವೀಟ್ ಮಾಡಿದ್ದಾರೆ.

ಹಲವು ಸಲ ಚರ್ಚೆ ನಡೆದರೂ ಆಮ್ ಆದ್ಮಿ-ಕಾಂಗ್ರೆಸ್ ಸಖ್ಯ ಮಾಡಿಕೊಳ್ಳಲು ವಿಫಲಗೊಂಡಿದ್ದವು. ನಾಲ್ಕು ಸೀಟು ನೀಡಲು ಸಿದ್ಧವಾದರೂ ಕೇಜ್ರಿವಾಲ್‍ರಿಗೆ ಸಮ್ಮತವಾಗಿಲ್ಲ ಎಂದು ರಾಹುಲ್ ಆರೋಪಿಸಿದರು. ನಮ್ಮ ಬಾಗಿಲು ಈಗಲೂ ತೆರೆದಿದೆ. ಆದರೆ ಸಮಯ ಮೀರುತ್ತಿದೆ ಎಂದು ರಾಹುಲ್ ಹೇಳಿದರು. ಈ ನಡುವೆ ಎಪ್ರಿಲ್ 18ಕ್ಕೆ ಎರಡನೆ ಹಂತದ ಚುನಾವಣೆ ನಡೆಯುವ 97 ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದೆ. ರಫೇಲ್, ನೋಟು ನಿಷೇಧವನ್ನು ರಾಹುಲ್ ಪ್ರಸ್ತಾಪಿಸಿ ಬಿಜೆಪಿಯನ್ನು ತರಾಟೆಗೆತ್ತಿಕೊಳ್ಳುತ್ತಿದ್ದಾರೆ. ಇದೇ ವೇಳೆ ಕಾಂಗ್ರೆಸ್‍ನ ನ್ಯಾಯ್ ಯೋಜನೆಯನ್ನು ಮುಂದಿಟ್ಟು ಅಲಿಗಡದಲ್ಲಿ ಕಾಂಗ್ರೆಸ್ ಬಿರುಸಿನ ಚುನಾವಣಾ ಪ್ರಚಾರ ನಡೆಸುತ್ತಿದೆ.