ಪಿ.ಎಚ್.ಡಿ ಪದವಿ ಪಡೆದ ಯಶು ಕುಮಾರ್‌ರವರಿಗೆ ಎಸ್‌.ಐ.ಓ ವತಿಯಿಂದ ಸನ್ಮಾನ

0
69

ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ, ಪ್ರೊ.ಅಭಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ‘ತುಳುನಾಡಿನ ಅವಳಿ ವೀರರ ಆರಾಧನೆ’ ಎಂಬ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದ ಡಾ.ಯಶು ಕುಮಾರ್ ರವರಿಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ಪಾಣೆಮಂಗಳೂರು ಶಾಖೆಯ ವತಿಯಿಂದ ಬಂಟ್ವಾಳ ಅಮ್ಟೂರು ಬಳಿಯಿರುವ ಕೃಷ್ಣಾಪುರದ ಅವರ ಮನೆಗೆ ತೆರಳಿ ಸನ್ಮಾನಿಸಿ, ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ, ಇಂದಿನ ಯುವ ವಿದ್ಯಾರ್ಥಿಗಳಿಗೆ ವಿವಿಗಳಲ್ಲಿ ಇತಿಹಾಸ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ಸಾಕಷ್ಟು ಅವಕಾಶಗಳಿವೆ. ಅದನ್ನು ಉಪಯೋಗಿಸುವ ಬಗ್ಗೆ ಜಾಗೃತಿ ಮೂಡಿಸಬೇಕು. ಅಧ್ಯಯನದ ಮಹತ್ವದ ಬಗ್ಗೆ ಇಂದಿನ ಯುವಜನತೆ ಕಡೆಗಣಿಸುತ್ತಿದೆ. ಆದ್ದರಿಂದ ನಾವು ಸದಾ ಅಧ್ಯಯನಶೀಲರಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್ ಐ ಓ ಜಿಲ್ಲಾಧ್ಯಕ್ಷ ರಿಝ್ವಾನ್ ಅಝ್ಹರಿ, ಎಸ್.ಐ.ಓ ಪಾಣೆಮಂಗಳೂರು ಶಾಖೆಯ ಅಧ್ಯಕ್ಷ ತಮೀಝ್ ಅಲಿ, ಮುಝಮ್ಮಿಲ್ ಮೆಲ್ಕಾರ್, ಸುನೈಫ್ ಮೆಲ್ಕಾರ್, ಮುಬಾರಿಶ್ ಚೆಂಡಾಡಿ ಮಾಹಿರ್ ಬೋಳಂಗಡಿ ಹಾಗೂ ಸೋಲಿಡಾರಿಟಿ ಯೂತ್ ಮೂಮೆಂಟ್ ನ ಶಂಶೀರ್ ಮೆಲ್ಕಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here