ನ್ಯೂಝಿಲೆಂಡ್ ಭಯೋತ್ಪಾದನಾ ದಾಳಿ: ಆರೋಪಿಗೆ ಎಪ್ರಿಲ್ 5 ರವರೆಗೆ ರಿಮಾಂಡ್

0
365

ಕ್ರೈಸ್ಟ್‌ಚರ್ಚ್: ನ್ಯೂಝಿಲೆಂಡಿನ ಮಸೀದಿಯಲ್ಲಿ ಗುಂಡುಹಾರಾಟ ನಡೆಸಿ ನಲ್ವತ್ತಕ್ಕೂ ಹೆಚ್ಚು ಮಂದಿಯ ಹತ್ಯೆ ಮಾಡಿದ ಆರೋಪಿಯನ್ನು ಎಪ್ರಿಲ್ ಐದರವರೆಗೆ ರಿಮಾಂಡ್‍ಗೆ ಕಳುಹಿಸಲಾಗಿದೆ. 28 ವರ್ಷದ ಬ್ರೆಂಡನ್ ಟಾಂಟರ್‌ನನ್ನು ನಿನ್ನೆಯೇ ಕೋರ್ಟಿಗೆ ಹಾಜರು ಪಡಿಸಲಾಗಿತ್ತು. ಆರೋಪ ಪಟ್ಟಿ ಓದಿದಾಗ ಸ್ಥಿರತೆಯಲ್ಲಿ ನಿಂತೇ ಇದ್ದ. ಬ್ರೆಂಡನ್ ಕೋರ್ಟಿನಲ್ಲಿ ಜಾಮೀನು ಕೇಳಲಿಲ್ಲ. ನಂತರ ಪ್ರಕರಣದ ವಿಚಾರಣೆಯನ್ನು ಎಪ್ರಿಲ್ ಐದಕ್ಕೆ ನ್ಯಾಯಾಧೀಶರು ಮುಂದೂಡಿದರು. ಈಗ ಕೊಲೆ ಆರೋಪವನ್ನು ಮಾತ್ರ ಅವನ ವಿರುದ್ಧ ಹೊರಿಸಲಾಗಿದೆ. ಮುಂಬರುವ ದಿನಗಳಲ್ಲಿ ಈತನ ವಿರುದ್ಧ ಇತರ ಆರೋಪಗಳನ್ನು ಹೊರಿಸಲಾಗುವುದು ಎನ್ನಲಾಗಿದೆ.