ನೋಟ್‌ಬಂದಿ: ನೋಟು ನಿಷೇಧಕ್ಕೆ ಸಂಬಂಧಿಸಿದ ಸಾವುಗಳ ಬಗ್ಗೆ ಮಾಹಿತಿ ಇಲ್ಲ ಎಂದ ಪ್ರಧಾನಮಂತ್ರಿ ಕಛೇರಿ!

0
706

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2016 ರ ನವೆಂಬರ್ 8 ರಂದು ಘೋಷಿಸಿದ್ದ ನೋಟು ರದ್ದತಿಯ ನಂತರದ ಸಾವುಗಳ ಸಂಖ್ಯೆಯ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಪ್ರಧಾನ ಮಂತ್ರಿ ಕಛೇರಿ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.

2017 ರ ಅಕ್ಟೋಬರ್ನಲ್ಲಿ ಮಾಹಿತಿ ಹಕ್ಕು ಅರ್ಜಿದಾರರಾದ ನೀರಜ್ ಶರ್ಮಾ ಅವರು ಅಪನಗದೀಕರಣದಿಂದ ಸಂಭವಿಸಿದ ಸಾವುಗಳ ಸಂಖ್ಯೆ ಮತ್ತು ಮೃತಪಟ್ಟವರ ಹೆಸರುಗಳು ಮತ್ತು ವಿವರಗಳ ಪಟ್ಟಿಯ ಕುರಿತು ಪ್ರಧಾನ ಮಂತ್ರಿ ಕಛೇರಿಯಿಂದ ಮಾಹಿತಿ ಬೇಕೆಂದು ಕೋರಿದ್ದರು. ಅರ್ಜಿಯನ್ನು ಸಲ್ಲಿಸಿದ ದಿನಾಂಕದಿಂದ 30 ದಿನಗಳ ಕಡ್ಡಾಯ ಅವಧಿಯೊಳಗೆ ಪ್ರಧಾನ ಮಂತ್ರಿ ಕಛೇರಿ ಮಾಹಿತಿಯನ್ನು ಬಹಿರಂಗಪಡಿಸಲು ವಿಫಲವಾದಾಗ, ಶರ್ಮಾ ಕೇಂದ್ರ ಮಾಹಿತಿ ಆಯೋಗವನ್ನು ಸಂಪರ್ಕಿಸಿದರು. ಮಾಹಿತಿ ಅಧಿಕಾರಿಗಳಿಗೆ ದಂಡನೆಯನ್ನು ವಿಧಿಸಬೇಕೆಂದು ಸಹ ಅವರು ಮನವಿ ಮಾಡಿದ್ದರು,ಅವರು ಫೆಬ್ರವರಿ 2018 ರಲ್ಲಿ ಪ್ರತಿಕ್ರಿಯೆ ನೀಡಿದ್ದರು.

ಕೇಂದ್ರ ಮಾಹಿತಿ ಆಯುಕ್ತ ಸುಧೀರ್ ಭಾರ್ಗವ ನಡೆಸಿದ ವಿಚಾರಣೆಯಲ್ಲಿ,ಪ್ರಧಾನ ಮಂತ್ರಿ ಕಛೇರಿಯ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರವೀಣ್ ಕುಮಾರ್ ಅರ್ಜಿ ಪ್ರತಿಕ್ರಿಯೆಯ ವಿಳಂಬಕ್ಕಾಗಿ ಕ್ಷಮೆ ಯಾಚಿಸಿದ್ದಾರೆ. ಶರ್ಮರವರು ಕೋರಿದ್ದ ಮಾಹಿತಿಯು, ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 2(ಎಫ್) ಪ್ರಕಾರ “ಮಾಹಿತಿಯ” ವ್ಯಾಖ್ಯಾನದಲ್ಲಿ ಬರುವುದಿಲ್ಲವಾದ ಕಾರಣ ಪ್ರಧಾನ ಮಂತ್ರಿ ಕಛೇರಿಗೆ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ ಎಂದು ಕುಮಾರ್ ಹೇಳಿದ್ದಾರೆ.

ಕುಮಾರ್ ಅವರ ಪ್ರಕಾರ, “ಅಪನಗದೀಕರಣದ ಕಾರಣದಿಂದ ಉಂಟಾದ ಸಾವುಗಳು” ಸಂಬಂಧಿಸಿದ ಶರ್ಮಾ ಅವರ ಪ್ರಶ್ನೆ ಸ್ಪಷ್ಟವಾಗಿಲ್ಲ ಮತ್ತು ಅದನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ದಿ ವೈರ್ ವರದಿ ಮಾಡಿದೆ.” ಅಪನಗದೀಕರಣವು ಸಾವಿಗೆ ಕಾರಣವಾಗಬಹುದು ಕಲ್ಪನೆ/ಊಹೆಯ ಆಧಾರದ ಮೇಲೆ” ಪ್ರಶ್ನೆ ಕೇಳಲಾಗಿತ್ತು ಎಂದು ಕುಮಾರ್ ಆರೋಪಿಸಿದ್ದಾರೆ.

“ಅಪನಗದೀಕರನದಿಂದ ಉಂಟಾದ ಸಾವುಗಳಿಗೆ ಪ್ರಧಾನ ಮಂತ್ರಿ ಕಛೇರಿ ಬಳಿ ಯಾವುದೇ ದಾಖಲೆಗಳಿಲ್ಲ” ಎಂದು ಕುಮಾರ್ ಹೇಳಿದರು. ಯಾವುದೇ ದುರುದ್ದೇಶ ಗೋಚರಿಸದ ಕಾರಣ ಭಾರ್ಗವರು ಯಾವುದೇ ದಂಡ ವಿಧಿಸಲಿಲ್ಲ. ”ಆದರೂ , ಆಯೋಗವು , ನವ ದೆಹಲಿಯ ಪ್ರಧಾನ ಮಂತ್ರಿ ಕಚೇರಿಯ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಸಲಹೆ ನೀಡಲು ಬಯಸುತ್ತದೆ, ಭವಿಷ್ಯದಲ್ಲಿ ಹೆಚ್ಚು ಜಾಗ್ರತೆಯಿಂದಿರಲು ಹಾಗಾಗಿ ಅಂತಹ ದೋಷಗಳು ಪುನರಾವರ್ತಿಸುವುದಿಲ್ಲ, ಮತ್ತು ಮಾಹಿತಿ ಕೋರಿರುವವರಿಗೆ ನಿಗದಿಪಡಿಸಿದ ಸಮಯದೊಳಗೆ ಮಾಹಿತಿ ನೀಡಬೇಕು” ಎಂದು ಅವರು ಹೇಳಿದರು.

2018 ರ ಡಿಸೆಂಬರ್ 18 ರಂದು ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು “ಅಪನಗದೀಕರಣದ ಸಮಯದಲ್ಲಿ “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂವರು ಅಧಿಕಾರಿಗಳು ಮತ್ತು ಒಬ್ಬ ಗ್ರಾಹಕ ಸಾವನಪ್ಪಿದ್ದಾರೆಂದು ರಾಜ್ಯಸಭೆಗೆ ತಿಳಿಸಿದ್ದರು. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್ ವಾದಿ) ಸಂಸದ ಎಲಾರಾಮಂ ಕರೀಂರವರು, ನೋಟು ವಿನಿಮಯ ಮಾಡಿಕೊಳ್ಳುವ ಸಲುವಾಗಿ ಕ್ಯೂಗಳಲ್ಲಿ ನಿಂತಿರುವ ಕಾರಣಕ್ಕೆ ಮತ್ತು ಆಘಾತದಿಂದಾಗಿ, ಕೆಲಸದ ಒತ್ತಡ, ಇತರ ಅಂಶಗಳಿಂದಾಗಿ ಮೃತಪಟ್ಟ ಬ್ಯಾಂಕ್ ಉದ್ಯೋಗಿಗಳು ಸೇರಿದಂತೆ ವ್ಯಕ್ತಿಗಳ ಸಂಖ್ಯೆಯನ್ನು ವಿಚಾರಿಸಿದ್ದರು. ಅವರ ಪ್ರಶ್ನೆಗೆ ಜೇಟ್ಲಿ ಈ ರೀತಿ ಪ್ರತಿಕ್ರಿಯಿಸಿದ್ದರು.

ಕನ್ನಡಕ್ಕೆ: ಆಯಿಷತುಲ್ ಅಫೀಫ
ಕೃಪೆ: ಸ್ಕ್ರೋಲ್.ಇನ್