ಅಯೋಧ್ಯೆಯ ಹೆಚ್ಚುವರಿ ಸ್ಥಳ ರಾಮಜನ್ಮಭೂಮಿ ನ್ಯಾಸ್ ಕೊಡಬಾರದು- ನಿರ್ಮೋಹಿ ಅಖಾಡದಿಂದ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ

0
870

ಹೊಸದಿಲ್ಲಿ,ಎ.9: ಬಾಬರಿ ಮಸೀದಿ ಸಹಿತ ಅಯೋಧ್ಯೆಯ ಹೆಚ್ಚುವರಿ ಜಮೀನನ್ನು ರಾಮ ಜನ್ಮಭೂಮಿ ನ್ಯಾಸ್ ಸಹಿತ ಅದರ ನೈಜ ಮಾಲಕರಿಗೆ ನೀಡುವ ಕೇಂದ್ರ ಸರಕಾರದ ಕ್ರಮದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ನಿರ್ಮೋಹಿ ಅಖಾಡ ಅರ್ಜಿಸಲ್ಲಿಸಿದೆ. ನಿರ್ಮೋಹಿ ಅಖಾಡ ಬಾಬರಿ ಜಮೀನು ವಿವಾದ ಪ್ರಕರಣದಲ್ಲಿ ಕಕ್ಷಿಯಾಗಿದೆ.

ಅಯೋಧ್ಯೆಯ ಹೆಚ್ಚುವರಿ ಸ್ಥಳವನ್ನು ರಾಮಜನ್ಮಭೂಮಿ ನ್ಯಾಸ್‍ಗೆ ಹಸ್ತಾಂತರಿಸಬಾರದು.ಕೇಂದ್ರ ಸರಕಾರ ಜಮೀನು ವಶಪಡಿಸಿಕೊಂಡಿದ್ದರಿಂದ ನಿರ್ಮೋಹಿಅಖಾಡದ ನಿರ್ವಹಣೆಯಲ್ಲಿದ್ದ ಹಲವು ದೇವಾಲಯಗಳು ಕೈ ತಪ್ಪಿ ಹೋಗಿವೆಂದು ಅಖಾಡದ ವಕೀಲರು ಅರ್ಜಿಯಲ್ಲಿ ಬೆಟ್ಟು ಮಾಡಿದ್ದಾರೆ. ಬಾಬರಿ ಮಸೀದಿ ಇದ್ದ ಸ್ಥಳ ಸಹಿತ ಅಯೋಧ್ಯೆಯ ಜಮೀನನ್ನು ಕೇಂದ್ರ ಸರಕಾರ 1994ರಲ್ಲಿ ವಶಪಡಿಸಿಕೊಂಡಿತ್ತು. ಇದರಲ್ಲಿ ಹೆಚ್ಚುವರಿ ಸ್ಥಳವನ್ನು ರಾಮ ಜನ್ಮಭೂಮಿ ನ್ಯಾಸ್‍ಗೆ ನೀಡಲು ಅನುಮತಿ ಯಾಚಿಸಿ ಕೇಂದ್ರ ಸರಕಾರ ಕಳೆದ ಜನುವರಿಯಲ್ಲಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ. ಇದು ವಿವಾದವಿಲ್ಲದ ಜಮೀನು ಆಗಿದೆ.

1992ರಲ್ಲಿ ಬಿಜೆಪಿ ನಾಯಕರ ನೇತೃತ್ವದಲ್ಲಿ ಕರಸೇವಕರು ಕೆಡವಿದ ಬಾಬರಿ ಮಸೀದಿ ಸಹಿತ 2.77 ಎಕರೆ ಜಮೀನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ, ರಾಮಲ್ಲಾಗೆ ಮೂರು ಭಾಗವಾಗಿ ಅಲಾಹಾಬಾದ್ ಹೈಕೋರ್ಟು 2010ರಲ್ಲಿ ಹಂಚಿಕೆ ಮಾಡಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ 14 ಅರ್ಜಿಗಳು ಸುಪ್ರೀಂಕೋರ್ಟಿನ ವಿಚಾರಣೆಯಲ್ಲಿದೆ. ವಿವಾದಿತ ಅಲ್ಲದ 67.703 ಎಕರೆ ಜಮೀನು ಯಥಾರ್ಥ ಮಾಲಕರಿಗೆ ಒಪ್ಪಿಸಲು ಅನುಮತಿ ಯಾಚಿಸಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟಿನಲ್ಲಿ ಅರ್ಜಿಸಲ್ಲಿಸಿದೆ.