ಮಗುವಿನ ಶಸ್ತ್ರ ಕ್ರಿಯೆ ಮುಗಿಯಿತು; ಮುಂದಿನ 48 ಗಂಟೆ ನಿರ್ಣಾಯಕ

0
1933

ಕೊಚ್ಚಿ,ಎ.18: ಮಂಗಳೂರಿನಿಂದ ಕೊಚ್ಚಿ ಅಮೃತಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದ ನವಜಾತ ಶಿಶುವಿನ ಹೃದಯ ಶಸ್ತ್ರಕ್ರಿಯೆ ನಡೆದಿದ್ದು ಮುಂದಿ ನಲ್ವತ್ತೆಂಟು ಗಂಟೆಗಳು ನಿರ್ಣಾಯಕವಾಗಿದೆ ಎಂದು ವೈದ್ಯರು ತಿಳಿಸಿದರು. ಮಗುವಿನ ಆರೋಗ್ಯ ಸ್ಥಿತಿಯ ಬಗ್ಗೆ ಸೂಕ್ಷ್ಮ ನಿಗಾವಹಿಸಲಾಗುತ್ತಿದೆ.

ಅಂತಿಮ ರಕ್ತಪರೀಕ್ಷೆ ಫಲಿತಾಂಶ ನಿನ್ನೆ ರಾತ್ರೆ ಎಂಟು ಗಂಟೆಗೆ ಬಂತು. ಬೆಳಗ್ಗೆ ಎಂಟೂವರೆಗೆ ಮಗುವಿನ ಶಸ್ತ್ರಕ್ರಿಯೆ ಆರಂಭವಾಯಿತು.ಗಂಟೆಗಳ ಕಾಲ ಶಸ್ತ್ರಕ್ರಿಯೆ ತಡವಾಗಿಯೇ ಕೊನೆಗೊಂಡಿದೆ. ಅಮೃತಾ ಆಸ್ಪತ್ರೆಯ ತಜ್ಞರ ತಂಡ ಶಸ್ತ್ರಕ್ರಿಯೆಯನ್ನು ನಡೆಸಿದೆ. ಹೃದಯದ ಸ್ಥಿತಿ ತುಂಬ ಸಂಕೀರ್ಣವಾಗಿದ್ದುದರಿಂದ ತೀರ ಅಪಾಯ ಸಾಧ್ಯತೆಯಿದ್ದ ಶಸ್ತ್ರ ಕ್ರಿಯೆ ಇದು ಎಂದು ವೈದ್ಯರು ಹೇಳಿದ್ದಾರೆ.

ಕಾಸರಗೋಡಿನ ವಿದ್ಯಾನಗರದ ಪಾರಕಟ್ಟ ಎಂಬಲ್ಲಿನ ಶಾನಿಯಾ-ಮಿತ್ತಾಹ್ ದಂಪತಿಯ ಪುತ್ರನಿಗೆ ಕೇರಳ ಸರಕಾರದ ಖರ್ಚಿನಲ್ಲಿ ಶಸ್ತ್ರಕ್ರಿಯೆ ನಡೆಸಲಾಗಿದೆ. ಶರೀರದ ವಿವಿಧ ಭಾಗಗಳಿಗೆ ರಕ್ತಪಂಪ್ ಮಾಡುವ ಧಮಿನಿಯಲ್ಲಿ ತಕರಾರು ಕಂಡು ಬಂದಿತ್ತು. ಈ ಸ್ಥಿತಿ ಇತರ ಅವಯವಗಳಿಗೂ ಅಡಚಣೆಯುಂಟು ಮಾಡಿತ್ತು. ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆತರುವಾಗ ಎರಡು ಸಲ ಫಿಟ್ಸ್ ಮತ್ತು ಕಿಡ್ನಿ ತೊಂದರೆ ಮಗುವಿಗೆ ಕಾಣಸಿಕೊಂಡಿತ್ತು. ಹುಟ್ಟಿ ಹನ್ನೆರಡು ದಿವಸ ಮೆಕಾನಿಕಲ್ ವೆಂಟಿಲೇಟರ್‍ನಲ್ಲಿ ಮಗುವನ್ನು ಇರಿಸಿದ್ದರಿಂದ ಭವಿಷ್ಯದಲ್ಲಿಯೂ ಮಗುವಿನ ಆರೋಗ್ಯಕ್ಕೆ ಬಾಧಕವಾಗಬಹುದು ಎಂದು ವೈದ್ಯಕೀಯ ತಂಡ ತಿಳಿಸಿದೆ. ಶಸ್ತ್ರಕ್ರಿಯೆಯ ಬಳಿಕ ಮಗುವನ್ನು ಐಸಿಯುವಿನಲ್ಲಿ ಇರಿಸಲಾಗಿದೆ.