ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧೆ

0
357

ಹೊಸದಿಲ್ಲಿ,ಎ.13: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸಲು ತಾನು ಸಿದ್ಧ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಇದಕ್ಕೆ ಸಂಬಂಧಿ ವರದಿ ಪ್ರಕಟವಾಗಿದೆ. ಆದರೆ, ಈ ವಿಷಯದಲ್ಲಿ ಅಂತಿಮ ತೀರ್ಮಾನವಾಗಿಲ್ಲ. ಪ್ರಿಯಾಂಕಾ ಸ್ಪರ್ಧಿಸಬೇಕೆಂದು ಪಾರ್ಟಿಯ ಉತ್ತರಪ್ರದೇಶ ಘಟಕ ಈ ಹಿಂದೆ ಆಗ್ರಹಿಸಿತ್ತು. ಆದರೆ, ಅಧಿಕೃತವಾಗಿ ಕಾಂಗ್ರೆಸ್ ನಾಯಕರು ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ. ಈಗ ಪ್ರಿಯಾಂಕರೇ ಸ್ಪರ್ಧಿಸಲು ತಾನು ಸಿದ್ಧ ಎಂದಿದ್ದಾರೆ. ಈ ಕುರಿತು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತೀರ್ಮಾನ ತಳೆಯ ಬೇಕಾಗಿದೆ. ಕಾಂಗ್ರೆಸ್ ಮತ್ತು ಬಿಎಸ್ಪಿ-ಎಸ್ಪಿ ಸಖ್ಯ ವಾರಣಾಸಿಯಲ್ಲಿ ಅಭ್ಯರ್ಥಿಯನ್ನು ಈವರೆಗೂ ಘೋಷಿಸಿಲ್ಲ. ಆದರೆ, ಪ್ರಬಲ ಅಭ್ಯರ್ಥಿಯನ್ನೇ ಇಲ್ಲಿಂದ ಕಣಕ್ಕಿಳಿಸಲಾಗುವುದು ಎಂದು ಅವು ಹೇಳಿಕೆ ನೀಡಿದ್ದವು.