ಹಿಜಾಬ್ ಮೇಲಿನ 18 ವರ್ಷದ ನಿಷೇಧಕ್ಕೆ ಅಮೆರಿಕದ ಇಲ್ಹಾನ್ ಒಮರ್ ರಿಂದ ತೆರೆ

0
1425

ಅಮೇರಿಕನ್  ಸದನದಲ್ಲಿ  ಶಿರವಸ್ತ್ರವನ್ನು  ಧರಿಸುವುದನ್ನು ನಿಷೇಧಿಸುವ ದೀರ್ಘಾವಧಿ ನಿಯಮದ  ಬದಲಾವಣೆಗೆ  ಚುನಾಯಿತ ಮುಸ್ಲಿಂ ಮಹಿಳೆಯೊಬ್ಬರು ಆಗ್ರಹಿಸಿದ್ದಾರೆ. ರಾಷ್ಟ್ರದ ಅತಿದೊಡ್ಡ ಮುಸ್ಲಿಂ ಹಕ್ಕುಗಳ ಗುಂಪು ಈ ಪ್ರಯತ್ನಕ್ಕೆ ಬೆಂಬಲ ನೀಡುತ್ತಿದೆ.

ಈ ತಿಂಗಳ ಆರಂಭದಲ್ಲಿ ಅಮೇರಿಕನ್ ಪಾರ್ಲಿಮೆಂಟ್ ಗೆ ಆಯ್ಕೆಯಾದ ಮೊದಲ ಇಬ್ಬರು ಮುಸ್ಲಿಮ್ ಮಹಿಳೆಯರಲ್ಲಿ ಒಬ್ಬರಾದ  ಸೋಮಾಲಿಯ  ನಿರಾಶ್ರಿತರಾಗಿರುವ  ಇಲ್ಹಾನ್ ಒಮರ್, ಮುಸ್ಲಿಮ್ ಹಿಜಾಬ್, ಯಹೂದಿ ಯರ್ಮುಲಕ್  ಮತ್ತು  ಸಿಖ್ ಪೇಟ  ಮುಂತಾದ ಶಿರಾ ಹೊದಿಕೆಗಳಿಗೆ ಧಾರ್ಮಿಕ ವಿನಾಯಿತಿಯನ್ನು ಅನುಮತಿಸಲು 181 ವರ್ಷ ಹಳೆಯ  ನಿಯಮಕ್ಕೆ ತಿದ್ದುಪಡಿಯನ್ನು ಕೋರಿ  ಡೆಮಾಕ್ರಟಿಕ್ ನಾಯಕರನ್ನು ಸಮೀಪಿಸಿದ್ದಾರೆ.

“ಯಾರೂ ನನ್ನ ತಲೆಯ ಮೇಲೆ ಶಿರವಸ್ತ್ರವನ್ನು ಹಾಕುವುದಿಲ್ಲ, ಅದು ನನ್ನ ಆಯ್ಕೆಯಾಗಿದೆ – ಎಂದು  ಒಮರ್ Twitter ನಲ್ಲಿ  ಪೋಸ್ಟ್ ಮಾಡಿದ್ದಾರೆ.

 

ಅವರ ಪ್ರಸ್ತಾಪವನ್ನು  ಅಮೆರಿಕನ್-ಇಸ್ಲಾಮಿಕ್ ಸಂಬಂಧ ಸಮಿತಿಯು ಬೆಂಬಲಿಸಿದೆ.