“ನಮಗೆ ಒಂದು ತಿಂಗಳ ಸಂಬಳವಾದರೂ ಕೊಡಿ”; ಜೇಟ್ಲಿಯ ಮೊರೆಹೋದ ಜೆಟ್ ಏರ್‍ವೇಸ್ ಪ್ರತಿನಿಧಿಗಳು

0
574

ಹೊಸದಿಲ್ಲಿ,ಎ.21: ಆರ್ಥಿಕ ಬಿಕ್ಕಟ್ಟಿನಿಂದ ಸರ್ವಿಸ್ ನಿಲುಗಡೆಯಾದ ಜೆಟ್ ಏರ್‍ವೇಸ್ ಪ್ರತಿನಿಧಿಗಳು ಕೇಂದ್ರ ವಿತ್ತ ಸಚಿವ ಅರುಣ್ ಜೈಟ್ಲಿಯವರನ್ನು ಸಂದರ್ಶಿಸಿದ್ದಾರೆ. ಸಿಬ್ಬಂದಿಗಳ ಬಾಕಿ ಸಂಬಳ ನೀಡಲು ಏರ್‍ಲೈನ್ಸನ್ನು ಏಲಂ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕೆಂದು ಪ್ರತಿನಿಧಿಗಳು ಆಗ್ರಹಿಸಿದರು. ಒಂದು ತಿಂಗಳ ಸಂಬಳವಾದರೂ ಸಿಬ್ಬಂದಿಗಳಿಗೆ ನೀಡಬೇಕೆಂದು ಅವರಲ್ಲಿ ನಿರೀಕ್ಷೆಯನ್ನು ಉಳಿಯುವಂತೆ ಮಾಡಬೇಕೆಂದು ಏರ್‍ಲೈನ್ಸ್ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ವಿನಯ್ ದುಬೆ ಹೇಳಿದ್ದಾರೆ.

ಸರ್ವಿಸ್‍ನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದೆಂದು ಬುಧವಾರ ಜೆಟ್ ಏರ್‍ವೇಸ್ ಅಧಿಕೃತವಾಗಿ ತಿಳಿಸಿತು. ಸಾಲದಾತರಿಂದ ಕೇಳಲಾದ ಹಣ ಸಿಗದಿರುವುದರಿಂದ ತಾತ್ಕಾಲಿಕವಾಗಿ ವಿಮಾನ ಸರ್ವಿಸ್ ನಿಲ್ಲಿಸಲು ನಿರ್ಧರಿಸಲಾಗಿತ್ತು.

ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ಸಮಾಧಾನಪಡಿಸಲು ಮತ್ತು ಅವರಲ್ಲಿ ನಿರೀಕ್ಷೆ ಉಳಿಯುವಂತೆ ಮಾಡಲು ಒಂದು ತಿಂಗಳ ಸಂಬಳವನ್ನು ಅವರಿಗೆ ಕೊಡಬೇಕು. ಇದಕ್ಕೆ 170 ಕೋಟಿ ರೂಪಾಯಿ ಲಭ್ಯಗೊಳಿಸಬೇಕು ಜೆಟ್ ಏರ್‍ವೇಸ್ ಪ್ರತಿನಿಧಿಗಳು ಆಗ್ರಹಿಸಿದ್ದಾರೆ. ಈ ವಿಚಾರವನ್ನು ಪರಿಶೀಲಿಸಲಾಗುವುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ ಎಂದು ವಿನಯ್ ದುಬೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.