ಶಾಪಿಂಗ್ ಮಾಲ್‌ನಲ್ಲಿ ವಿವಾಹ ಪ್ರಸ್ತಾಪ: ಇರಾನಿಯನ್ ಜೋಡಿಗಳ ಬಂಧನ, ಬಿಡುಗಡೆ

0
815

ಅರಕ್,ಮಾ.13: ಸಾರ್ವಜನಿಕ ಸ್ಥಳದಲ್ಲಿ ಮದುವೆ ಪ್ರಸ್ತಾಪವನ್ನು ಹಸ್ತಾಂತರಿಸಿದ್ದಕ್ಕಾಗಿ ಇರಾನಿಯನ್ ಯುವಕ, ಯುವತಿಯನ್ನು ಬಂಧಿಸಲಾಗಿದೆ. ಅವರು ಪರಸ್ಪರ ಉಂಗುರ ಬದಲಾಯಿಸುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸ್ಥಳೀಯ ಪೊಲೀಸರು ಯುವ ಜೋಡಿ ಇಸ್ಲಾಮಿಕ್ ಶಿಷ್ಟಾಚಾರ ಮತ್ತು ಸಾರ್ವಜನಿಕ ಶಿಸ್ತನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಯಿತು ಎಂದು ತಿಳಿಸಿದ್ದಾರೆ. ನಂತರ ಜಾಮೀನು ಮೇರೆಗೆ ಇಬ್ಬರನ್ನು ಬಿಡುಗಡೆಗೊಳಿಸಿದೆ.

ಕಳೆದ ಶುಕ್ರವಾರ ಪರಸ್ಪರ ಉಂಗುರ ಬದಲಾಯಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಾಲೊಂದರಲ್ಲಿ ಹೂವಿನಿಂದ ನಿರ್ಮಿಸಲಾದ ಹೃದಯ ಆಕಾರದಲ್ಲಿ ಯುವಕನು ನಿಂತು ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ. ಅಲ್ಲಿ ನೆರೆದವರು ಶುಭಕೋರುತ್ತಿದ್ದರು. ವೀಡಿಯೊ ಪ್ರಸಾರಗೊಂಡ ನಂತರ ಪೊಲೀಸರು ಗುರುತಿಸಿ ಬಂಧಿಸಿದರು.

ಇಬ್ಬರು ಯುವಜೋಡಿಯ ವರ್ತನೆ ಅಸ್ವೀಕಾರಾರ್ಹವಾದುದು. ಇದು ಪಾಶ್ಚಾತ್ಯರಲ್ಲಿ ಸಾಮಾನ್ಯವಾದ ಮನೋಭಾವವಾಗಿದೆ. ಇದು ಇಸ್ಲಾಮ್ ಧರ್ಮ ಮತ್ತು ಸಂಸ್ಕೃತಿಗೆ ವಿರುದ್ಧವಾದುದು ಎಂದು ಅರಕ್ ಪೊಲೀಸಧಿಕಾರಿ ಮುಸ್ತಫಾ ನರೌಝಿ ಹೇಳಿದ್ದಾರೆ.