ನ್ಯೂಝಿಲೆಂಡಿನ ಮಸೀದಿಯಲ್ಲಿ ಗುಂಡು ಹಾರಿಸಿದಾತ ಆಸ್ಟ್ರೇಲಿಯದ ಬಲಪಂಥೀಯ ಭಯೋತ್ಪಾದಕ!

0
472

ಸಿಡ್ನಿ,ಮಾ. 15: ನ್ಯೂಝಿಲೆಂಡಿನ ಮಸೀದಿಯಲ್ಲಿ ನಲ್ವತ್ತಕ್ಕೂ ಹೆಚ್ಚು ಮಂದಿ ಪ್ರಾರ್ಥನೆಗೆ ನಿರತರನ್ನು ಹತ್ಯೆ ಮಾಡಿದ ವ್ಯಕ್ತಿ ಆಸ್ಟ್ರೇಲಿಯದ ಪ್ರಜೆಯಾಗಿದ್ದು ಬಲಪಂಥೀಯ ಭಯೋತ್ಪಾದಕ ಸಂಘಟನೆಯ ಸದಸ್ಯ ಎಂದು ಆಸ್ಟ್ರೇಲಿಯದ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ.

“ನಾನು ಈ ಘಟನೆಯನ್ನು ಖಂಡಿಸುತ್ತೇನೆ. ಖಂಡಿತ ಇಂದಿನ ಗುಂಡು ಹಾರಾಟ ಉಗ್ರವಾದಿ ಬಲಪಂಥೀಯ ಹಿಂಸಾತ್ಮಕ ಭಯೋತ್ಪಾದಕರಿಂದ ನಡೆದಿದೆ ಎಂದು ಮಾರಿಸನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದದಾರೆ.

ಮಸೀದಿಯಲ್ಲಿ ಪ್ರಾರ್ಥನೆಗೆ ಬಾಗಿದಾಗ ಅವರ ವಿರುದ್ಧ ಗುಂಡಿನ ಮಳೆಗೆರೆದ ವ್ಯಕ್ತಿ ಆಸ್ಟ್ರೇಲಿಯ ಹುಟ್ಟಿದ ಪ್ರಜೆಯಾಗಿದ್ದಾನೆ ಎಂದು  ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು. ಆಸ್ಟ್ರೇಲಿಯದ ಭದ್ರತಾ ಅಧಿಕಾರಿಗಳು ಗುಂಡು ಹಾರಾಟ ನಡೆಸಿದ ವ್ಯಕ್ತಿಯ ಕೊಂಡಿ  ಆಸ್ಟ್ರೇಲಿಯದಲ್ಲಿ ಯಾರೊಂದಿಗೆ ಇದೆ ಎಂಬ ಕುರಿತು ತನಿಖೆ ನಡೆಸುತ್ತಿದ್ದಾರೆ. ಆದರೆ ಬಂದೂಕು ಧಾರಿಯ ಕುರಿತು ಹೆಚ್ಚಿನ ವಿವರ ನೀಡಲು ಅವರು ನಿರಾಕರಿಸಿದರು.

ನ್ಯೂಝಿಲೆಂಡ್ ಜನರಿಗೆ ತನ್ನ ಸಹತಾಪವನ್ನು ಪ್ರಧಾನಿ ವ್ಯಕ್ತಪಡಿಸಿದರು. ನಾವು ಕೇವಲ ಮಿತ್ರರಲ್ಲ, ಪಾಲುದಾರರಲ್ಲ, ಬದಲಾಗಿ; ನಾವು ಕುಟುಂಬದವರಾಗಿದ್ದೇವೆ ಎಂದು ಮಾರಿಸನ್ ಹೇಳಿದರು. ಕ್ರೈಸ್ಟ್‌ಚರ್ಚ್ ಮಸೀದಿಯಲ್ಲಿ ಗುಂಡು ಹಾರಾಟ ಘಟನೆಗೆ ಸಂಬಂಧಿಸಿ ನ್ಯೂಝಿಲೆಂಡ್ ಪೊಲೀಸರು ಓರ್ವ ಮಹಿಳೆ ಸಹಿತ ನಾಲ್ವರನ್ನು ಬಂಧಿಸಿದ್ದಾರೆ.