ಕಾಶ್ಮೀರದಲ್ಲಿ ಜನರು ಬಿಜೆಪಿ ಕಾರ್ಯಕ್ರಮಕ್ಕೆ ಬಂದರು: ಕ್ಯಾಮರಾ ನೋಡಿದಾಗ ಮುಖ ಮುಚ್ಚಿದರು..!

0
664

ಶ್ರೀನಗರ,ಮಾ. 16: ಶ್ರೀನಗರದ ಶರಿಯಾ ಕಾಶ್ಮೀರ್ ಪಾರ್ಕಿನಲ್ಲಿ ಗುರುವಾರ ನಡೆದ ಕಾರ್ಯಕ್ರಮಕ್ಕೆ ನೂರಾರು ಬಿಜೆಪಿ ಕಾರ್ಯಕರ್ತರು ಹರಿದು ಬಂದಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಮೊದಲ ಬಾರಿ ನಡೆದ ಪಾರ್ಟಿ ಸಭೆಯಲ್ಲಿ ಇವರು ಭಾಗವಹಿಸಿದ್ದಾರೆ.
ಜಮ್ಮು-ಕಾಶ್ಮೀರ ಹೊಣೆಯಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅವಿನಾಶ್ ರಾಯ್ ಖನ್ನಾ , ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕೌಲ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆಯುತ್ತಿತ್ತು. ಖನ್ನಾ ಮಾತಾಡುವಾಗ ಛಾಯಾಚಿತ್ರ ಗ್ರಾಹಕರು ಫೋಟೊ ತೆಗೆಯಲು ಬಂದಾಗ ಎಲ್ಲ ಬುಡಮೇಲಾಯಿತು.

ಕ್ಯಾಮರದಿಂದ ಮುಖ ಅಡಿಗಿಸಲು ಕಾರ್ಯಕರ್ತರು ತಲೆ ತಗ್ಗಿಸಿದರು. ಕೆಲವರು ನೋಟಿಸನ್ನು ಮುಖಕ್ಕೆ ಅಡ್ಡ ಇಟ್ಟುಕೊಂಡರು. ಹಲವರು ಪಾರ್ಕಿನಿಂದ ಓಡಿದರು. ಇದು ಅಲ್ಲಿದ್ದವರಲ್ಲಿ ನಗು ತರಿಸಿತು. ಜಮ್ಮುವಿನಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಜನರಿರುತ್ತಾರೆ. ಕಾಶ್ಮೀರದಲ್ಲಿ ಪಾರ್ಟಿಗೆ ಜನಬೆಂಬಲವಿಲ್ಲ. ಅಲ್ಲಿ ಬಿಜೆಪಿಯನ್ನು ಬೆಂಬಲಿಸುವ ವಿಚಾರ ಯಾರೂ ಬಹಿರಂಗಗೊಳಿಸಲು ಇಚ್ಛಿಸುವುದಿಲ್ಲ.

ಇದು ಕಾಶ್ಮೀರ ಪಾರ್ಕಿಗೆ ಬಂದ ಕಾರ್ಯಕರ್ತರು ಮುಖ ಮುಚ್ಚಿಕೊಳ್ಳುವುದಕ್ಕೆ ಕಾರಣವಾಗಿದೆ. ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಬಂದರೆ ತಮಗೆ ಸಾಮಾಜಿಕ ಬಹಿಷ್ಕಾರ ಬೀಳಬಹುದು ಎಂದು ಬಿಜೆಪಿ ಸಭೆಯಲ್ಲಿ ಭಾಗವಹಿಸಿದ ಯುವಕ ಮನ್ಸೂರ್ ಹೇಳಿದ್ದಾರೆ. ಬಿಜೆಪಿ ವಿರುದ್ಧ ಕಾಶ್ಮೀರದಲ್ಲಿ ತೀವ್ರ ಅಸಮಾಧಾನ ಇರುವ ಸಮಯ ಇದು. ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಜೀವಕ್ಕೂ ಅಪಾಯವಿದೆ ಎಂದು ಆತನ ಹೇಳಿದ್ದಾನೆ.