ಕೇರಳದಲ್ಲಿ ಹೆಚ್ಚುತ್ತಿರುವ ಬಿಸಿಲ ಧಗೆ; ಪಾಲಕ್ಕಾಡಿನಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲು

0
1392

ಪಾಲಕ್ಕಾಡ್,ಮಾ.15: ಕೇರಳಾದ್ಯಂತ ಸೂರ್ಯನ ತಾಪ ಹೆಚ್ಚುತ್ತಿದ್ದು ಕೇರಳೀಯರು ತೀವ್ರ ಸೆಖೆಯನ್ನು ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ. ಕೇರಳದ ವಿವಿಧ ಜಿಲ್ಲೆಯಲ್ಲಿ ಬೇಸಗೆಯ ಉಷ್ಣತೆಯಲ್ಲಿ ತೀವ್ರಳ ಹೆಚ್ಚಳವಾಗಿದ್ದು ಪಾಲಕ್ಕಾಡಿನಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಏರಿಕೆಯಾಗಿತ್ತು . ಇಂಟರ್ ಗ್ರೇಟಡ್ ರೂರಲ್ ಟೆಕ್ನಾಲಜಿ ಸೆಂಟರ್ ಮುಂಡೂರ್ (ಐಆರ್‍ಟಿಸಿ) ಉಷ್ಣತಾ ಮಾಪನದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಬೇಸಿಗೆ ಆರಂಭಗೊಂಡ ನಂತರ ಏಳನೆ ಸಲ 40 ಡಿಗ್ರಿಯವರೆಗೆ ತಾಪಮಾನ ಬಂದಿದೆ. ಮಾರ್ಚ್ ತಿಂಗಳಲ್ಲಿ ಮೂರು ಬಾರಿ ಸಲ ಹೀಗಾಗಿದೆ. ಮಲಂಬುಯ ನೀರಾರವರಿ ಇಲಾಖೆಯ ಉಷ್ಣತಾಮಾನದಲ್ಲಿ ಕೂಡ ಕಳೆದ ಬುಧವಾರ 37.7 ಡಿಗ್ರಿ ದಾಖಲಾಗಿತ್ತು. ಪಟ್ಟಾಂಬಿಯಲ್ಲಿ 39.4 ಡಿಗ್ರಿಸೆಲ್ಸಿಯಸ್ ದಾಖಲಾಗಿದೆ. ಸೂರ್ಯತಾಪವನ್ನು ತಡೆಯಲು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ತೃಶೂರಿನಲ್ಲಿ 39.2 ಡಿಗ್ರಿಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ.

ಫೆಬ್ರುವರಿ 24ಕ್ಕೆ 38.07 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇಲ್ಲಿ ದಾಖಲಾಗಿದೆ. ಮುಂಬರುವ ಎರಡು ದಿವಸಗಳಲ್ಲಿ ಇದೇ ರೀತಿ ಉಷ್ಣತೆಯಿರಲಿದೆ ಎಂದು ಹೇಳಲಾಗಿದೆ. ಈ ಹಿಂದೆ 38 ಡಿಗ್ರಿಸೆಲ್ಸಿಯಸ್ ಉಷ್ಣತೆ ಸ್ಥಿರವಾಗಿತ್ತು. ಬೇಸಗೆ ಮಳೆಯ ಸಾಧ್ಯತೆಯಿಂದಾಗಿ ಅದು 35ರಿಂದ 36 ಡಿಗ್ರಿಸೆಲ್ಸಿಯಸ್‍ಯಾಗಿತ್ತು.