‘ಮಹಿಳಾ ಹಕ್ಕುಗಳ’ ಕುರಿತು ಕಾದಂಬರಿ ಬರೆದ ಹದಿಮೂರರ ಪೋರಿ ಆಯೇಷಾ ರವೂಫ್

0
247

ಮುಲ್ತಾನ್,ಮಾ.15: ಎಂಟನೆ ತರಗತಿಯ ಹುಡುಗಿ ಮಹಿಳಾ ಹಕ್ಕುಗಳ ಕುರಿತು ಲೇಖನ ಬರೆದಿದ್ದಾಳೆ ಪಾಕಿಸ್ತಾನದ ಮುಲ್ತಾನಿನ 13 ವರ್ಷ ಬಾಲಕಿ ಆಯೇಷಾ ರವೂಫ್ ಮಹಿಳಾ ಹಕ್ಕು ಹೋರಾಟದಲ್ಲಿ ತನ್ನ ಧ್ವನಿಯನ್ನು ರೀತಿ ಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಮುಂದೆ ಬೆಳೆದು ದೊಡ್ಡ ಕಾದಂಬರಿಗಾರ್ತಿಯಾಗುವುದು ಅವಳ ಕನಸ್ಸಾಗಿದೆ. ಆಯೇಷಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು ಕ್ರೀಡೆಯಲ್ಲಿ ಬಹಳ ಆಸಕ್ತಿ ಹೊಂದಿದ್ದಾಳೆ ಎಂದು ಅವಳ ತಂದೆ ಹೇಳಿದರು. ಅವಳು ಯಾವಾಗಲೂ ತನ್ನ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಾ ಬಂದಿದ್ದಾಳೆ.

ಅವಳ ಕಾದಂಬರಿ ‘ಆನ್ ಎಕ್ಸಿಪಿರಿಯನ್ಸ್’ ಸಾಮಾಜದಲ್ಲಿ ಹುಡುಗಿಯೊಬ್ಬಳು ನಡೆಸುವ ಹೋರಾಟದ ಕಥೆಯನ್ನು ಹೊಂದಿದೆ. ಮಹಿಳೆಯರಿಗೆ ಅವರ ಹಕ್ಕುಗಳನ್ನು ಸಮಾಜ ನೀಡುವುದಿಲ್ಲ. ಸವಾಲುಗಳನ್ನು ಹೇಗೆ ಎದುರಿಸಿ ತಮ್ಮ ಹಕ್ಕುಗಳನ್ನು ಮಹಿಳೆಯರು ಹೇಗೆ ಪಡೆಯಬೇಕೆಂದು ಅವಳು ಕಾದಂಬರಿಯಲ್ಲಿ ಬರೆದಿದ್ದಾಳೆ. “ತನ್ನ ಮಗಳು ಕಾದಂಬರಿ ಬರೆಯುವೆ ಎಂದು ಸಣ್ಣವಳಿದ್ದಾಗಲೇ ಹೇಳುತ್ತಿದ್ದಳು ಎಂದು ಆಯೇಷಾಳ ತಂದೆ ಹೇಳಿದರು. ಬಾಲಕಿಯ ಕುಟುಂಬ ಅವಳ ಭವಿಷ್ಯದ ಕುರಿತು ಹೆಚ್ಚಿನ ನಿರೀಕ್ಷೆಯಿಟ್ಟುಕೊಂಡಿದ್ದು ಬಾಲಕಿ ಸಾಹಿತ್ಯ ಲೋಕದಲ್ಲಿ ಯಶಸ್ವಿಯಾಗುವ ಭರವಸೆಯನ್ನು ಹೊಂದಿದೆ.