ಆತ್ಮಹತ್ಯೆಯ ಪರಿಣಾಮ?

0
252

ಅಬ್ದುಲ್ ಖಾದರ್, ಮಡಿಕೇರಿ
? ನಮಾಝ್, ಉಪವಾಸ ಮುಂತಾದ ಆರಾಧನೆಗಳನ್ನೂ ಇತರ ಸತ್ಕರ್ಮ ಗಳನ್ನೂ ಚಾಚೂತಪ್ಪದೆ ನಿರ್ವಹಿಸುವ ಓರ್ವರು  ಒಂದು ದುರ್ಬಲ ನಿಮಿಷದಲ್ಲಿ ಆತ್ಮಹತ್ಯೆ ಮಾಡಿದರೆ ಪರಲೋಕದಲ್ಲಿ ಅವರ ಸ್ಥಿತಿಯು ಏನಾಗಿರುತ್ತದೆ? ಆತ್ಮಹತ್ಯೆ ಮಾಡಿದವರಿಗಾಗಿ  ಪ್ರಾರ್ಥಿಸಬಹುದೇ?

√ ಆತ್ಮಹತ್ಯೆಯು ಒಂದು ಮಹಾ ಪಾಪವಾಗಿದೆ. ಸ್ವತಃ ಜನಿಸಲು ಅಧಿಕಾರ ಅಥವಾ ಸಾಮಥ್ರ್ಯ ಇಲ್ಲದ ಮನುಷ್ಯ ನಿಗೆ ಸ್ವತಃ ಮರಣ  ಹೊಂದಲು ಸಾಧ್ಯವಿದ್ದರೂ ಅದಕ್ಕಿರುವ ಅಧಿಕಾರ ಅಥವಾ ಹಕ್ಕು ಇಲ್ಲ. ಸ್ವತಃ ಜೀವಹರಣ ಮಾಡುವುದು ಅಲ್ಲಾಹನ ಹಕ್ಕಿನ ಮೇಲಿನ ಹ¸ ಸ್ತಕ್ಷೇಪವಾಗಿದೆ. ಈ ಹಿನ್ನೆಲೆ ಯಲ್ಲಿ ಆತ್ಮಹತ್ಯೆಯು ಶಿರ್ಕ್ ಪರವಾದ ಪಾಪವಾಗಿದೆ. ದೇವನು ಮನುಷ್ಯನನ್ನು ಭೂಮಿಗೆ ಕಳುಹಿಸಿರುವುದು  ಪರೀಕ್ಷಿಸಲಿ ಕ್ಕಾಗಿದೆ. ಜೀವನದಲ್ಲಿ ಸುಖ-ದುಃಖ ಗಳೂ ಸಂಕಷ್ಟಗಳೂ ಸಮಸ್ಯೆಗಳೂ ದೇವನ ಪರೀಕ್ಷೆಗಳಾಗಿವೆ.

ಜೀವನದಲ್ಲಿ ಎದುರಾಗುವ  ಸ್ಥಿತಿಗತಿಗಳನ್ನು ದೇವನು ಇಷ್ಟಪಡುವ ರೀತಿಯಲ್ಲಿ ನಿರ್ವಹಣೆ ಮಾಡುವುದು ಮಾನವ ಧರ್ಮವಾಗಿದೆ. ಆ ಧರ್ಮದ ಪಾಲನೆಯನ್ನು  ಮನು ಷ್ಯನು ಮಾಡುತ್ತಾನೋ ಎಂದು ದೇವನು ಪರೀಕ್ಷಿಸುತ್ತಾನೆ. ಮನುಷ್ಯನು ಜೀವನದಲ್ಲಿ ಎದುರಾಗುವ ಸಮಸ್ಯೆ ಗಳನ್ನು ಎದುರಿಸುವ ಸಂದರ್ಭವೊದಗಿದಾಗ ಆತ್ಮಹತ್ಯೆ ಮಾಡುವುದು ಉತ್ತರ ಬರೆಯಲು ಕಷ್ಟಕರವಾದ ಪ್ರಶ್ನೆಯನ್ನು ಕಂಡ ವಿದ್ಯಾರ್ಥಿಯು ಪರೀಕ್ಷೆಯ  ಕೊಠಡಿಯಿಂದ ಹೊರ ಓಡಿದಂತಾಗಿದೆ. ಈ ಹಿನ್ನೆಲೆಯಲ್ಲೂ ಆತ್ಮಹತ್ಯೆಯು ಮಹಾಪಾತಕವಾಗಿದೆ.

ಆದರೆ, ಹೆಚ್ಚಿನ ಆತ್ಮಹತ್ಯೆಗಳು ಅದರಲ್ಲಿ ಒಳಗೊಂಡಿರುವ ಗಂಭೀರವೂ ವಿನಾಶಕಾರಿಯೂ ಆದ ಧರ್ಮಭ್ರಷ್ಟತೆಗೆ ಸಂಬಂಧಿಸಿದ  ಪ್ರಜ್ಞೆಯೊಂದಿಗೆ ನಡೆಯು ತ್ತಿಲ್ಲ. ಕೆಲವರು ತೀವ್ರ ಸೋಲಿನಿಂದ ಆಘಾತಕ್ಕೊಳಗಾಗಿ ಅತ್ಯಂತ ನಿರಾಶರೂ ಖಿನ್ನರೂ ಆಗುತ್ತಾರೆ. ಆ ಸೋಲನ್ನು ಹೊರತುಪಡಿಸಿದರೆ ತಮಗೆ ದೊರೆತಿ ರುವ ದೇವಾನುಗ್ರಹಗಳನ್ನೆಲ್ಲಾ ಆಗ ಅವರು ಮರೆತು ಬಿಡುತ್ತಾರೆ.

ತಾವು ಅಲ್ಲಿಯ ವರೆಗೆ  ಹೊಂದಿದ್ದ ವಿಶ್ವಾಸ ಗಳೂ ಧರ್ಮಗಳೆಲ್ಲವೂ ನಿರರ್ಥಕ ವಾಗಿದೆಯೆಂದೂ ಜೀವನವೇ ಒಂದು ಅರ್ಥ ಶೂನ್ಯವಾದ ಭಾರವಾಗಿದೆ ಯೆಂದೂ  ಭಾವಿಸಿ ಕೊನೆಗೆ ಆ ಅನ ಗತ್ಯ ಭಾರವನ್ನು ತೊರೆಯುವ ತೀರ್ಮಾನ ಮಾಡುತ್ತಾರೆ. ಇಂತಹ ಆತ್ಮಹತ್ಯೆಯು ಸ್ಪಷ್ಟವಾದ ಕುಫ್ರ್ ಆಗಿದೆ.  ಇನ್ನು ಕೆಲವರು ಆರ್ಥಿಕ, ಶಾರೀರಿಕ ಅಥವಾ ದಾಂಪತ್ಯ ಪರವಾದ ಹೊಡೆತ ಗಳು ಬೀಳುವಾಗ ತೀವ್ರ ನಿರಾಶರಾಗಿ ದೇವನಲ್ಲೂ  ಧರ್ಮದಲ್ಲೂ ಇರುವ ವಿಶ್ವಾಸದೊಂದಿಗೇ ಆ ವಿಶ್ವಾಸದ ಬೇಡಿಕೆಯನುಸಾರ ಜೀವನವನ್ನು ಕ್ರಮ ಬದ್ಧಗೊಳಿಸಲಾಗಿದೆ.

ತಾತ್ಕಾಲಿಕ ವಿಶ್ರಾಂತಿಯಿಂದ ಪಾರಾಗಲಿಕ್ಕಾಗಿ ಆತ್ಮಹತ್ಯೆ ಮಾಡುತ್ತಾರೆ. ಭಾವನೆಗಳ ತೊಳಲಾಟದಲ್ಲಿ ವಿಚಾರವೂ ವಿಶ್ವಾಸವೂ ಮೂಲೆಗುಂಪಾಗುವಾಗ ಹೀಗೆ  ಸಂಭವಿ ಸುತ್ತದೆ. ಇಂತಹ ಆತ್ಮಹತ್ಯೆಗಳು ಮಹಾ ಪಾತಕವಾಗಿದ್ದರೂ ಮನಃಪೂರ್ವಕವಾದ ಕುಫ್ರ್ ಆಗುವುದಿಲ್ಲ. ಇನ್ನು ಕೆಲವರು  ಆತ್ಮಹತ್ಯೆಗೆ ಮುಂದಾಗುವುದು ಮನೋ ರೋಗ ಅಥವಾ ಹಠಾತ್ತನೆ ಉಂಟಾ ಗುವ ಚಿತ್ತ ಭ್ರಮಣೆಯ ಕಾರಣದಿಂದಾ ಗಿದೆ. ಓರ್ವನು  ಮನಃಪೂರ್ವಕವಲ್ಲದೆ ಮಾಡುವ ತಪ್ಪುಗಳನ್ನು ಮನಃಪೂರ್ವಕ ವಾಗಿ ಮಾಡುವ ತಪ್ಪುಗಳಂತೆ ಪರ ಲೋಕದಲ್ಲಿ ವಿಚಾರಣೆ ಮಾಡಲಾಗುವು  ದಿಲ್ಲ ಎಂದು ಹದೀಸ್‍ಗಳಿಂದ ತಿಳಿದು ಬರುತ್ತದೆ.

ಒಟ್ಟಿನಲ್ಲಿ, ಓರ್ವನ ಆತ್ಮಹತ್ಯೆಯು ಇವುಗಳಲ್ಲಿ ಯಾವ ವಿಭಾಗಕ್ಕೆ ಸೇರುತ್ತದೆ ಎಂಬುದನ್ನು ಆಶ್ರಯಿಸಿ ಆತನ ಪರ ಲೋಕದ ತೀರ್ಪು ಹೊರ  ಬೀಳುತ್ತದೆ. ಆತ್ಮಹತ್ಯೆಯು ಕುಫ್ರ್, ಮಹಾಪಾತಕ ಅಥವಾ ಶಿಕ್ಷಾರ್ಹವಲ್ಲದ ಪಾಪವಾಗು ವುದು ಆತ್ಮಹತ್ಯೆ ಮಾಡುವಾತನ ಮನೋಭಾವದ  ಹಿನ್ನೆಲೆಯಿಂದಾಗಿದೆ. ಅದು ಆತನಿಗೂ ಅಲ್ಲಾಹನಿಗೂ ಅಲ್ಲದೆ ಬೇರೆ ಯಾರಿಗೂ ತಿಳಿದಿಲ್ಲವಷ್ಟೇ. ಆದ್ದರಿಂದ ಮುಸ್ಲಿಮ್ ಆತ ಓರ್ವನು  ಆತ್ಮಹತ್ಯೆ ಮಾಡಿದರೆ ಆತನನ್ನು ಮುಸ್ಲಿಮ್ ಎಂದೇ ಪರಿಗಣಿಸಿ ಮುಸ್ಲಿಮರ ಮೃತದೇಹವನ್ನು ಸಂಸ್ಕರಣೆ ಮಾಡುವ ರೀತಿಯಲ್ಲೇ ಸಂಸ್ಕರಿಸಬೇಕು. ಆತನಿಗಾಗಿ ಮಯ್ಯತ್ ನಮಾಝ್ ಮಾಡಬೇಕೆಂದು ಹೆಚ್ಚಿನ ವಿದ್ವಾಂಸರ ಅಭಿಪ್ರಾಯವಾಗಿದೆ. ಮಯ್ಯತ್ ನಮಾಝ್ ಒಂದು  ಪ್ರಾರ್ಥನೆಯಾಗಿದೆ ಯಷ್ಟೇ. ಅದು ಅನುವದನೀಯವೆಂದಾದರೆ ಬೇರೆ ರೀತಿಯಲ್ಲಿರುವ ಪ್ರಾರ್ಥನೆಗಳೂ ಅನುವದನೀಯ ವಾಗುತ್ತದೆ.