ಮಸೀದಿಗಳಲ್ಲಿ ಮುಸ್ಲಿಂ ಮಹಿಳೆಗೆ ಪ್ರವೇಶ: ಸುಪ್ರೀಂಕೋರ್ಟಿನಿಂದ ನೋಟಿಸು

0
689

ಹೊಸದಿಲ್ಲಿ,ಎ.16: ಮಸೀದಿಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ನಿಯಂತ್ರಣ ರಹಿತವಾಗಿ ಪ್ರವೇಶಾನುಮತಿ ನೀಡಬೇಕೆಂದು ಸಲ್ಲಿಸಲಾದ ಅರ್ಜಿಯಲ್ಲಿ ಸುಪ್ರೀಂಕೋರ್ಟು ಇದಿರು ಕಕ್ಷಿಗಳಾದ ಕೇಂದ್ರ ಸರಕಾರ, ಸುನ್ನಿ ವಕ್ಫ್ ಬೋರ್ಡ್, ಆಲ್‍ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡು ಮುಂತಾದ ಏಳು ಕಕ್ಷಿಗಳಿಗೆ ನೋಟಿಸು ಜಾರಿಗೊಳಿಸಿದೆ.

ಶಬರಿಮಲೆ ಪ್ರಕರಣದಲ್ಲಿ ತೀರ್ಪು ಜಾರಿಯಲ್ಲಿರುವುದರಿಂದ ಈ ಪ್ರಕರಣವನ್ನು ವಿಚಾರಣೆಗೆತ್ತಿಕೊಳ್ಳಲಾಗಿದೆ ಎಂದು ಕೋರ್ಟು ತಿಳಿಸಿತು. ಮಹಾರಾಷ್ಟ್ರದ ದಂಪತಿಗಳು ಮಹಿಳಾ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರು. ಪುಣೆಯ ಒಂದು ಮಸೀದಿಯಲ್ಲಿ ಆರಾಧನೆಗೆ ಯತ್ನಿಸಿದಾಗ ತಡೆಯಲಾಯಿತು.ಪೊಲೀಸರಿಗೆ ದೂರು ನೀಡಿದರೂ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಿಲ್ಲ ಎಂದು ದಂಪತಿ ಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ವಿವರಿಸಿದ್ದಾರೆ.

ಮೂಲಭೂತ ಹಕ್ಕಿನ ಉಲ್ಲಂಘನೆ ಮತ್ತು ಸಂವಿಧಾನ ವಿರೋಧಿ ಕ್ರಮ ಇದು ಎಂದು ಇವರು ಅರ್ಜಿಯಲ್ಲಿ ಬೆಟ್ಟು ಮಾಡಿದ್ದಾರೆ ದಂಪತಿಗಳಿಗೆ ಆದ ಕಷ್ಟಗಳನ್ನು ವಕೀಲರು ಕೋರ್ಟಿಗೆ ವಿವರಿಸಿದಾಗ ಅನ್ಯರ ಮನೆಗೆ ಪ್ರವೇಶಿಸಲು ಅನುಮತಿ ನಿಷೇಧಿಸಿದರೆ ಅದಕ್ಕೆ ಪೊಲೀಸ್ ಸಂರಕ್ಷಣೆ ಕೇಳಲು ಸಾಧ್ಯವೇ ಎಂದು ಕೇಸು ಪರಿಗಣಿಸಿದ ಜಸ್ಟಿಸ್ ಎಸ್‍ಐ ಬೋಬ್ಡೆ ಅರ್ಜಿದಾರರನ್ನು ಪ್ರಶ್ನಿಸಿದರು. ಸರಕಾರೇತರ ವ್ಯವಸ್ಥೆಯಲ್ಲಿ ಸಮಾನತೆಯನ್ನು ಪ್ರತಿಪಾದಿಸಲು ಸಾಧ್ಯವೇ ಎಂದು ಕೋರ್ಟು ಪ್ರಶ್ನಿಸಿದೆ. ಮುಂದಿನ ವಿಚಾರಣೆ ಯಾವಾಗ ಎಂದು ಕೋರ್ಟು ತಿಳಿಸಿಲ್ಲ.