ಮೆದುಳು ನಿಷ್ಕ್ರಿಯಗೊಂಡ 2 ವರ್ಷದ ಮಗು 6 ಮಂದಿಯ ಜೀವ ಉಳಿಸಿತು!

0
1190

ಮುಂಬೈ: ಬ್ರೈನ್ ಟ್ಯೂಮರ್‍ನಿಂದ ಬಳಲುತ್ತಿದ್ದ 2 ವರ್ಷ ಮಗುವಿಗೆ ಚಿಕಿತ್ಸೆ ಕೊಡಿಸಲು ಮುಂಬೈಗೆ ಕರೆತಂದ ದಂಪತಿಗಳು ಅಪೂರ್ವ ಉದಾಹರಣೆಗೆ ಕಾರಣರಾಗಿದ್ದಾರೆ. ವೈದ್ಯರು ರವಿವಾರ ಮೆದುಳು ನಿಷ್ಕ್ರಿಯವಾದ ಮಗುವನ್ನು ಮೃತ ಎಂದು ಘೋಷಿಸಿದರು. ನಂತರ ತಂದೆತಾಯಿ ಮಗುವಿನ ಅವಯವಗಳನ್ನು ದಾನಗೈಯ್ಯಲು ನಿರ್ಧರಿಸಿದರು. ಇವಾನ್ ಪ್ರಭು ಎಂಬ ಹೆಸರಿನ ಮಗು ಕಳೆದ ಇಪ್ಪತ್ತು ವರ್ಷಗಳಲ್ಲಿ ನಗರದ ಅತಿಕಡಿಮೆ ವಯೋಮಾನದ ಅವಯವ ದಾನಿ ಎನಿಸಿಕೊಂಡಿದ್ದಾನೆ.

ಇವಾನ್‍ನ ಅವಯವ ದಾನದ ನಿರ್ಣಯವನ್ನು ಅವರ ತಂದೆ-ತಾಯಿ ನಿರ್ಧರಿಸಿದ್ದರಿಂದ ಆರು ಮಂದಿಯ ಜೀವ ಉಳಿದಿದೆ. ಇವರಲ್ಲಿ 4 ವರ್ಷದ ಮಗು ಕೂಡ ಸೇರಿದ್ದು ಅದಕ್ಕೆ ಥಾಣೆಯ ಜ್ಯೂಪಿಟರ್ ಹಾಸ್ಪಿಟಲ್‍ನಲ್ಲಿ ಲಿವರ್ ಟ್ರಾನ್ಸ್ ಪ್ಲಾಂಟ್ ಮಾಡಲಾಯಿತು.

ಇವಾನ್‍ನ ಹೃದಯ, ಕಿಡ್ನಿ, ಲಿವರ್ ಮತ್ತು ಕಣ್ಣುಗಳನ್ನು ಆತನ ಹೆತ್ತವರು ದಾನ ಮಾಡಿದ್ದಾರೆ. ಮಗುವಿನ ಕಿಡ್ನಿಯನ್ನು ಗ್ಲೋಬಲ್ ಮತ್ತು ಲೀಲಾವತಿ ಆಸ್ಪತ್ರೆಗೆ ನೀಡಲಾಯಿತು. ಚೆನ್ನೈಯ ಪೋಟಿಸ್ ಆಸ್ಪತ್ರೆಗೆ ಮಗುವಿನ ಹೃದಯವನ್ನು ಕೊಂಡು ಹೋಗಲು ಮರಿನ್ ಲೈನ್ಸ್ ನ ಬಾಂಬೆ ಹಾಸ್ಪಿಟಲ್‍ನಿಂದ ವಿಮಾನ ನಿಲ್ದಾಣದವರೆಗೆ ಗ್ರೀನ್ ಕಾರಿಡಾರ್ ಕೂಡ ಮಾಡಲಾಗಿತ್ತು. ಮಗುವಿನ ಕಣ್ಣು ಉಪನಗರ ವಿಲೆಪಾರ್ಲೆಯ ಐ ಬ್ಯಾಂಕ್‍ನ ಆರ್ಡಿನೇಶನ್ ಆಂಡ್ ರಿಸರ್ಚ್ ಸೆಂಟರ್‍ಗೆ ಕೊಡಲಾಯಿತು.