ಉತ್ತರ ಪ್ರದೇಶದಲ್ಲಿ ಕಳ್ಳಭಟ್ಟಿ ದುರಂತ: ಸತ್ತವರ ಸಂಖ್ಯೆ 108ಕ್ಕೆ

0
166

ಸಹರಾನಪುರ/ರೂಡ್ಕಿ: ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕಳ್ಳಭಟ್ಟಿ ಸಾರಾಯಿ ಕುಡಿದು ಮೃತಪಟ್ಟವರ ಸಂಖ್ಯೆ ದಿನಂದಿನಕ್ಕೆ ಹೆಚ್ಚಳವಾಗುತ್ತಿದ್ದು ಈವರೆಗೆ ಒಟ್ಟು ಮೃತಪಟ್ಟವರ ಸಂಖೆಯ 108ಕ್ಕೇರಿಕೆಯಾಗಿದೆ. ಸಹರಾನಪುರದಲ್ಲಿ ಮೂರು ಪೊಲೀಸ್ ಠಾಣೆ ವ್ಯಾಪ್ತಿಯ 17 ಗ್ರಾಮಗಳಲ್ಲಿ ಸತ್ತವರ ಸಂಖ್ಯೆ 73ಕ್ಕೆ ತಲುಪಿದ್ದು ಇಷ್ಟು ದೊಡ್ಡ ಸಾರಾಯಿ ದುರಂತ ಪೂರ್ವ ಉತ್ತರ ಪ್ರದೇಶದಲ್ಲಿ ಈ ಹಿಂದೆಂದೂ ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ. ಕಳ್ಳ ಭಟ್ಟಿ ಯಿಂದ ಅನಾರೋಗ್ಯಕ್ಕೀಡಾದ 50ಕ್ಕೂ ಹೆಚ್ಚು ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಜಿಲ್ಲಾಡಳಿತ ಈವರೆಗೆ 60ಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆ ನಡೆಸಿದ್ದು ಇವರಲ್ಲಿ ವಿಷಯುಕ್ತ ಶರಾಬಿನಿಂದ 36 ಮಂದಿ ಸತ್ತಿದ್ದಾರೆ ಎಂದು ತಿಳಿಸಿದು ಬಂದಿದೆ.

ವರದಿಯಾಗಿರುವ ಪ್ರಕಾರ ಉತ್ತರಾಖಂಡ ಹರಿದ್ವಾರ ಠಾಣೆ ಝಬರೆಡಾ ಗ್ರಾಮ ಬಾಲ್‍ಪುರದಲ್ಲಿ ಜ್ಞಾನ್ ಸಿಂಗ್ ಎಂಬವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾದ ಶರಾಬಿನಿಂದಾಗಿ 108 ಮಂದಿ ಮೃತಪಟ್ಟು 90ಕ್ಕೂ ಹೆಚ್ಚು ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಸಹರನಾಪುರ ಗ್ರಾಮಸ್ಥ ಪಿಂಟೂ ಎಂಬಾತನಿಗೆ ಶರಾಬು ತರುವಂತೆ ಹೇಳಲಾಗಿತ್ತು. ಅವನು ಕೂಡ ಶರಾಬು ಕುಡಿದು ಮೃತಪಟ್ಟಿದ್ದಾನೆ. ಕಳೆದ ಶನಿವಾರ ಸಂಜೆಯ ವೇಳೆಗೆ 28 ಮಂದಿ ಮೃತಪಟ್ಟಿದ್ದರು. ಇದಲ್ಲದೇ ತಡರಾತ್ರೆ 4 ಮಂದಿ ಮೃತಪಟ್ಟಿದ್ದರು. ಇಂದು 3 ಜನರು ಹತರಾಗಿದ್ದುದರಿಂದ ಮೃತರ ಸಂಖ್ಯೆ 35ಕ್ಕೆ ತಲುಪಿದೆ. ಇವರಲ್ಲಿ 21 ಮೃತದೇಹಗಳನ್ನು ರೂಡ್ಕಿಯ ಆಸ್ಪತ್ರೆಯಲ್ಲಿ ಪೋಸ್ಟ್ ಮಾಟಂ ನಡೆಸಲಾಯಿತು.

ಇದೇ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಇದೊಂದು ಸಂಚು ಎಂದು ಶಂಕಿಸಿದ್ದಾರೆ. ಇಂತಹ ಘಟನೆಗಳು ಇದಕ್ಕಿಂತ ಮೊದಲು ಕೂಡ ಬಾರಬಂಕಿ, ಹರದೊಯಿ, ಆಝಂಗಡ, ಕಾನ್‍ಪುರದಲ್ಲಿ ನಡೆದಿತ್ತು. ತನಿಖೆಯ ವೇಳೆ ಸಂಚು ಬಹಿರಂಗವಾಗಿತ್ತು. ಈಗ ಸಹರನಾಪುರ ಠಾಣೆವ್ಯಾಪ್ತಿಯ ದೇವಬಂದ್,ನಾಗಲ್, ಗಾಗಲ್‍ಹೆಡಿ ಪ್ರದೇಶದಲ್ಲಿ ಕೋಲಾಹಲ ಸೃಷ್ಟಿಸಿದೆ.ಸರಕಾರ ಈ ಸಲದ ಕಳ್ಳಭಟ್ಟಿ ದುರಂತದಲ್ಲಿ ಇಷ್ಟು ಹೆಚ್ಚು ಸಾವು ಸಂಭವಿಸಿದೆ ಎಂಬುದನ್ನು ಸರಕಾರ ಒಪ್ಪಿಕೊಂಡಿಲ್ಲ.

ಸಹರನಾಪುರದಿಂದ ಮೀರತ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆ ತಂದ 18 ಗ್ರಾಮಸ್ಥರು ರಾತ್ರೆಯೆ ಅಸುನೀಗಿದ್ದು ಈ ಕುರಿತು ಜಿಲ್ಲಾಡಳಿತ ಕೂಡ ಅನುಮೋದಿಸಿದೆ. ರವಿವಾರ ಮೃತಪಟ್ಟವರ ಸಂಖ್ಯೆ, ಉಮಾಹಿಯಲ್ಲಿ 14 ಮಂದಿ, ಸಲೆಂ ಪುರದಲ್ಲಿ 9, ತಾಜಪುರದಲ್ಲಿ 5, ಕೊಲಕಿಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ಶರಬತ್‍ಪುರದಲ್ಲಿ 3 ಮಂದಿ, ಬಡೆಡಿ ಗುರ್ಜರಿನಲ್ಲಿ 4, ಖಜೂರಿ ಅಕ್ಬರ್‍ಪುರದಲ್ಲಿ 2 ಮಂದಿ, ಪಟೇಡ್ ನಲ್ಲಿ ಒಬ್ಬರು, ಬಡೊಲಿಯಲ್ಲಿ 3 ಮಂದಿ ಕೊನೆಯುಸಿರೆಳೆದರು. ಗಾಗಲ ಹೆಡಿಯಲ್ಲಿ ಒಬ್ಬರು, ಕಮಾಲಿಯಲ್ಲಿ ಒಬ್ಬರು, ದೇವ್‍ಬಂದಿನ ನಾಫೆಪುರದಲ್ಲಿ 2, ಶಿಪುರದಲ್ಲಿ 4, ಖೋಡಮುಗಲ್‍ನಲ್ಲಿ ನಾಲ್ಕು ಮಂದಿ ಅಸುನೀಗಿದ್ದಾರೆ. ಢಂಕೊವಾಲಿಯಲ್ಲಿ ಒಬ್ಬರು, ಬಿಲಾಸಪುರದಲ್ಲಿ ಒಬ್ಬರು. ಗಡೊರಾದಲ್ಲಿ ಒಬ್ಬರು, ಮೊಹಿದ್ದಿನ್‍ಪುರದಲ್ಲಿ ಒಬ್ಬರು ತಲ್ಹೆಡಿ ಖುರ್ದ್‍ನಲ್ಲಿ ಒಬ್ಬರು ಸತ್ತಿದ್ದಾರೆ.

ಭೀಮ ಆದ್ಮಿಯ ಪ್ರಮುಖ ಚಂದ್ರಶೇಖರ್‍ ರವರು ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಎಸ್‍ಎಸ್‍ಪಿ ಮತ್ತು ಸಿಒಗಳ ವಿರುದ್ಧ ರಾಷ್ಟ್ರೀಯ ಸುರಕ್ಷಾ ಕಾನೂನು ಪ್ರಕಾರ ಕ್ರಮ ಜರಗಿಸಬೇಕೆಂದು ಆಗ್ರಹಿಸಿದ್ದಾರೆ. ಮೃತರ ಕುಟಂಬಕ್ಕೆ ತಲಾ 25 ಲಕ್ಷ ರೂಪಾಯಿ ನಷ್ಟಪರಿಹಾರ ಮತ್ತು ಸರಕಾರಿ ನೌಕರಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ತಮ್ಮ ಬೇಡಿಕೆ ಈಡೇರದಿದ್ದರೆ ಜಿಲ್ಲಾಡಳಿತದ ಮುಂದೆ ಧರಣಿ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.