ಅಪರಾಧಿಯಿಂದ ಇಮಾಮ್ ಉಪಸ್ಥಿತಿಗೆ ಮನವಿ: ಧಾರ್ಮಿಕ ಹಕ್ಕಿನ ಆಧಾರದಲ್ಲಿ ಮರಣದಂಡನೆಯನ್ನು ತಡೆಹಿಡಿದ ಅಮೇರಿಕಾ

0
202
FILE - This undated file photo from the Alabama Department of Corrections shows inmate Dominique Ray. A federal appeals court has stayed the execution of Ray, a Muslim inmate in Alabama who says the state is violating his religious rights by not allowing an imam at his lethal injection. The 11th U.S Circuit Court of Appeals granted the stay Wednesday, Feb. 6, 2019, a day before the scheduled lethal injection of Ray.(Alabama Department of Corrections via AP, File)

ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯಾಯಾಲಯವು ಫೆಬ್ರವರಿ 7 ರ ಗುರುವಾರದಂದು ನಡೆಯಬೇಕಿದ್ದ ಅಲಬಾಮಾದ ಮುಸ್ಲಿಮ್ ಅಪರಾಧಿಯ ಮರಣದಂಡನೆಯನ್ನು ತಡೆಹಿಡಿದಿದೆ. ಅಪರಾಧಿಯು ತನ್ನ ಮರಣದ ಸಮಯದಲ್ಲಿ ಇಮಾಮ್ ಅಸ್ತಿತ್ವದಲ್ಲಿರಲು ಅವಕಾಶ ನೀಡುವುದನ್ನು ನಿರಾಕರಿಸುವ ಮೂಲಕ ದೇಶವು ನನ್ನ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ಮನವಿ ಸಲ್ಲಿಸಿದ್ದನು. ಈ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಆತನ ಮರಣದಂಡನೆಯನ್ನು ತಡೆಹಿಡಿದಿದೆ.

ಅಪರಾಧಿ ಡೊಮಿನಿಕ್ ರೇ (42 ), 23 ವರ್ಷಗಳ ಹಿಂದೆ 15 ವರ್ಷ ವಯಸ್ಸಿನ ಬಾಲಕಿಯನ್ನು ಹತ್ಯೆಗೈದಕ್ಕಾಗಿ ಮಾರಣಾಂತಿ ಲಿಥೇಲ್ ಚುಚ್ಚುಮದ್ದನ್ನು ನೀಡುವ ಮೂಲಕ ಮರಣದಂಡನೆ ನೀಡಬೇಕೆಂದು ಙಯಾಯಾಲಯವು ತೀರ್ಪು ನೀಡಿತ್ತು. ಒಂದು ದಿನದ ಮೊದಲು ಫೆ.6ರ ಬುಧವಾರದಂದು ಅಮೆರಿಕದ 11 ನೇ ಸರ್ಕ್ಯೂಟ್ ನ್ಯಾಯಾಲಯ ಅನಿರ್ದಿಷ್ಟಾವಧಿ ವಾಸ್ತವ್ಯವನ್ನು ನೀಡಲಾಗಿದೆ ಎಂದು ತೀರ್ಪು ನೀಡಿದೆ.

ಮೂವರು ನ್ಯಾಯಾಧೀಶರ ಸಮಿತಿಯು “ಧಾರ್ಮಿಕ ಹಕ್ಕುಗಳನ್ನು ನಿರ್ವಹಿಸುವ U.S. ಸಂವಿಧಾನದ ಮೊದಲ ತಿದ್ದುಪಡಿಯ ಸ್ಥಾಪನೆಯ ಷರತ್ತು ಅಲಬಾಮಾದಲ್ಲಿ ಉಲ್ಲಂಘನೆಯಾಗುವಂತೆ ಕಾಣಿಸುತ್ತಿದೆಯೆಂದು ಬರೆದು ಬುಧವಾರ ಮರಣದಂಡನೆಯನ್ನು ತಡೆಹಿಡಿಯಿತು”.

ಅಲಬಾಮಾ ತಿದ್ದುಪಡಿ ನಿಗಮವು , ತನ್ನ ಮರಣದಂಡನೆಯಲ್ಲಿ ತನ್ನ ಇಮಾಮ್ ರ ಉಪಸ್ಥಿತಿಯ ಕುರಿತು ರೇ ಕೋರಿಕೆಯನ್ನು ನಿರಾಕರಿಸಿದೆ, ಕೇವಲ ತಿದ್ದುಪಡಿ ನಿಗಮದ ನೌಕರರು ಮಾತ್ರ ಮರಣದಂಡನೆ ಕೊಠಡಿಯಲ್ಲಿ ಇರಬಹುದೆಂದು ರಾಜ್ಯ ನ್ಯಾಯಾಲಯದಲ್ಲಿ ತಿಳಿಸಿದೆ.

ರಾಜ್ಯ ನಿಯಮದ ಪ್ರಕಾರ, ಇಲಾಖೆಯಿಂದ ನೇಮಕಗೊಂಡ ಜೈಲು ಪಾದ್ರಿ ಮಾತ್ರ ಮರಣದಂಡನೆಯಲ್ಲಿ ಉಪಸ್ಥಿತರಿರುತ್ತಾರೆ . ಆದರೆ ಇತರ ಆಧ್ಯಾತ್ಮಿಕ ಸಲಹೆಗಾರರು ವೀಕ್ಷಣೆ ಕೊಠಡಿಯಿಂದ ಮರಣದಂಡನೆಗೆ ಸಾಕ್ಷಿಯಾಗಬೇಕು.

ಅಲಬಾಮದ ಸೆಲ್ಮಾದ ತನ್ನ ಮನೆಯಿಂದ ಕಣ್ಮರೆಯಾದ 15 ವರ್ಷ ವಯಸ್ಸಿನ ಟಿಫಾನಿ ಹಾರ್ವಿಲ್ ಎಂಬ ಬಾಲಕಿಯನ್ನು ಇರಿದು ಕೊಂದ ಆರೋಪದಲ್ಲಿ ಜುಲೈ 1995 ರಲ್ಲಿ ರೇ ಯನ್ನು ಬಂಧಿಸಲಾಗಿತ್ತು. ಒಂದು ತಿಂಗಳ ನಂತರ ಬಾಲಕಿಯ ಮೃತದೇಹವನ್ನು ಒಂದು ಜಮೀನಿನಲ್ಲಿ ಪತ್ತೆ ಮಾಡಲಾಗಿತ್ತು.

ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್