ಫೆಲೆಸ್ತೀನ್: ಬಂಧಿತ ಮತ್ತು ಹುತಾತ್ಮ ಕುಟುಂಬಗಳ ಮಾಸಿಕ ಪಾವತಿಯನ್ನು ಕಡಿತಗೊಳಿಸಿದ ಅಬ್ಬಾಸ್ ಆಡಳಿತ: ಕಡಿತಗೊಳಿಸಲ್ಪಟ್ಟವರಲ್ಲಿ ಹೆಚ್ಚಿನವರು ಹಮಾಸ್ ಬೆಂಬಲಿಗರು!

0
302

ವರದಿ: ನೂರ್ ಅಬು ಆಯಿಷಾ

ಗಾಝ ನಗರ: ಸ್ಥಳೀಯ ಮೂಲಗಳ ಪ್ರಕಾರ, ರಮಲ್ಲಾ ಕೇಂದ್ರಿತ ಅಬ್ಬಾಸ್ ರ ಫೆಲೆಸ್ತೀನ್ ಸರಕಾರವು ಹುತಾತ್ಮರು ಮತ್ತು ಇಸ್ರೇಲ್ ನಿಂದ ಬಂಧನಕ್ಕೊಳಗಾಗಿ ಜೈಲಿನಲ್ಲಿರುವವರ ಕುಟುಂಬಗಳ ಮಾಸಿಕ ಪಾವತಿಯನ್ನು ಕಡಿಮೆ ಮಾಡಿದೆ.

ಇಸ್ಲಾಮೀ ಜಿಹಾದ್ ಆಂದೋಲನದ ವಕ್ತಾರರಾದ ದಾವೂದ್ ಶಿಹಾಬ್ ಹೀಗೆ ಹೇಳುತ್ತಾರೆ :” ಹುತಾತ್ಮರ, ಖೈದಿಗಳ, ಮಾಜಿ ಕೈದಿಗಳ ಮತ್ತು ನಾಗರಿಕ ಸೇವಕರ [ಗಾಝದಲ್ಲಿ ] ಕುಟುಂಬಗಳ ಪಾವತಿಯನ್ನು ಕಡಿತಗೊಳಿಸುವುದು ಫೆಲೆಸ್ತೀನ್ ನ ವಿರುದ್ಧದ ಅಪರಾಧವಾಗಿದೆ.”

ಹಲವಾರು ಫೆಲೆಸ್ತೀನ್ ಬಣಗಳು (ಮತ್ತು ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ರ ಗಾಝ ನಗರದಲ್ಲಿರುವ ಮನೆಯಲ್ಲಿ ) ಆಯೋಜಿಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ “ನಮ್ಮ ಕೈದಿಗಳನ್ನು [ಇಸ್ರೇಲ್ ಜೈಲಿನಲ್ಲಿ] ರಾಜಕೀಯ ಅಂಕ -ಗಳಿಕೆಗೆ ಬಳಸಿಕೊಳ್ಳಬಾರದು” ಎಂದು ಶಿಹಾಬ್ ಒತ್ತಿ ಹೇಳಿದರು.

ಖೈದಿಗಳು ಮತ್ತು ಹುತಾತ್ಮರ ಕುಟುಂಬಗಳಿಗೆ ಧನಸಹಾಯವನ್ನು ಕಡಿಮೆಗೊಳಿಸುವ ಅಬ್ಬಾಸ್ ಅವರ ನಿರ್ಧಾರ, “ನಿರ್ದಿಷ್ಟವಾಗಿ ಫೆಲೆಸ್ತೀನ್ ಜನರನ್ನು ಮತ್ತು ಆಕ್ರಮಣಕ್ಕೆ ವಿರುದ್ಧವಾಗಿ ಅವರ ಹೋರಾಟವನ್ನು ಗುರಿಯಾಗಿರಿಸಿದೆ” ಎಂದು ಅವರು ಹೇಳಿದರು.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಇತರ ಬಣಗಳ ನಾಯಕರು “ಫೆಲೆಸ್ತೀನ್ ಜನರ ಮೂಲಭೂತ ತತ್ವಗಳು ಮತ್ತು ನೈತಿಕತೆಗಳನ್ನು ವಿರೋಧಿಸುತ್ತದೆ ” ಹಾಗಾಗಿ ಈ ಕ್ರಮವನ್ನುತಿರಸ್ಕರಿಸಬೇಕೆಂದು ಒತ್ತಾಯಿಸಿದರು.

ಫೇಲಸ್ತೀನ್ ಎನ್ ಜಿ ಓ ಆದ ಅಲ್-ದಾಮಿರ್ ಸಂಘವು ಹಮಾಸ್ ಆಡಳಿತ ನಡೆಸುತ್ತಿರುವ ಗಾಝ ಪಟ್ಟಿಯಲ್ಲಿ 5,000 ಕ್ಕಿಂತ ಹೆಚ್ಚು ನಾಗರಿಕ ಸೇವಕರ ವೇತನವನ್ನು ರಮಾಲ್ಲಾ ಸರಕಾರವು ಕಡಿತಗೊಳಿಸಿದೆ ಎಂದು ಹೇಳಿದೆ.

ಎನ್ ಜಿ ಓ ಪ್ರಕಾರ, ಈ ಕ್ರಮವು “ರಾಜಕೀಯ ಪ್ರೇರಿತ” ವಾಗಿದ್ದು ಹೀಗೆ ವೇತನ ನಿರಾಕರಿಸಲ್ಪಟ್ಟವರಲ್ಲಿ ಹಲವಾರು ಹಮಾಸ್ ನೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ.