ಮಾಲೇಗಾಂವ್: ವಿಚಾರಣೆ ಸುಲಲಿತವಾಗಿ ಸಾಗುತ್ತಿದೆಯೇ ಖಾತ್ರಿಪಡಿಸಿ: ಮುಂಬೈ ಉಚ್ಚ ನ್ಯಾಯಾಲಯದಿಂದ ಆದೇಶ

0
957

2008 ರ ಮಾಲೇಗಾಂವ್ ಪ್ರಕರಣದಲ್ಲಿ ಹಲವಾರು ಅರ್ಜಿಗಳ ರೂಪದಲ್ಲಿ ಆರೋಪಿಗಳು ಸಲ್ಲಿಸಿದ ಅಡಚಣೆಗಳನ್ನ ತೆರವುಗೊಳಿಸಲಾಗಿದೆ ಮತ್ತು ವಿಚಾರಣೆಯು ಸುಲಲಿತವಾಗಿ ಸಾಗುತ್ತಿದೆಯೇ ಎಂಬುವುದನ್ನು ಖಾತ್ರಿಪಡಿಸುವಂತೆ ಮುಂಬೈ ಉಚ್ಚ ನ್ಯಾಯಾಲಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗೆ ಆದೇಶಿಸಿದೆ.

ನ್ಯಾಯಮೂರ್ತಿ ಎ. ಎಸ್. ಓಕಾ ಮತ್ತು ನ್ಯಾಯಮೂರ್ತಿ ಎ.ಎಸ್. ಗಡ್ಕರಿ ಅವರ ವಿಭಾಗೀಯ ಪೀಠವು ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ,ಸಮೀರ್ ಕುಲಕರ್ಣಿಯು ವಿಶೇಷ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿತಲ್ಲದೆ, ದಾಖಲಿಸಲ್ಪಟ್ಟ ಸಾಕ್ಷಿಗಳಲ್ಲಿ ಕಾಣೆಯಾದ ಹೇಳಿಕೆಗಳ ನಕಲುಗಳನ್ನು ಮತ್ತು ಅದಕ್ಕೆ ಪೂರಕವಾದ ಸಾಕ್ಷ್ಯವನ್ನು ತರಲು ಎನ್ಐಎಗೆ ಅನುಮತಿ ನೀಡಿದೆ.

2016 ರ ಎಪ್ರಿಲ್ ನಲ್ಲಿ ಕ್ರಿಮಿನಲ್ ಪ್ರೊಸಿಜರ್ ಕೋಡ್ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಲಾದ 13 ಸಾಕ್ಷಿಗಳ ಹೇಳಿಕೆಗಳನ್ನು ಮತ್ತು ಎಂಸಿಒಸಿಎ ಅಡಿಯಲ್ಲಿ ದಾಖಲಿಸಲಾದ ಎರಡು ಆರೋಪಿಗಳ ಹೇಳಿಕೆಗಳನ್ನು ಒಳಗೊಂಡ ಮೂಲ ದಾಖಲೆಗಳು ಪತ್ತೆಯಾಗಿಲ್ಲವೆಂದು ವಿಚಾರಣಾ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. 2017 ರ ಜನವರಿಯಲ್ಲಿ, ವಿಚಾರಣಾ ನ್ಯಾಯಾಲಯವು ಕಾಣೆಯಾಗಿರುವ ಪ್ರತಿಗಳ ಬದಲಾಗಿ ಲಭ್ಯವಿರುವ ಪ್ರತಿಗಳನ್ನು ದ್ವಿತೀಯ ಸಾಕ್ಷ್ಯವಾಗಿ ಬಳಸಲು ಎನ್ಐಎಯನ್ನು ಅನುಮತಿಸಿತ್ತು.

ಪ್ರಕರಣದ ಆರೋಪಿಗಳು ಹಲವು ಅರ್ಜಿಗಳನ್ನು ಸಲ್ಲಿಸಿರುವುದನ್ನು ಅವರು ಗಮನಿಸಿದ್ದಾರೆ ಮತ್ತು ಅದರಲ್ಲಿ ಸುಮಾರು 3,000 ಕ್ಕಿಂತ ಹೆಚ್ಚಿನವುಗಳನ್ನು ವಿಚಾರಣಾ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಲಾಗಿದೆ ಎಂದು ಪೀಠವು ಹೇಳಿದೆ. ನ್ಯಾಯಾಧೀಶರು ಹಲವಾರು ಅರ್ಜಿಗಳನ್ನು ಪರಿಶೀಲಿಸಬೇಕು ಮತ್ತು ಆದೇಶಗಳನ್ನು ಹೊರಡಿಸಬೇಕೆಂದು ಪೀಠವು ಹೇಳಿದೆ. ಆರೋಪಿಗಳು ಸಲ್ಲಿಸಿದ ಅರ್ಜಿಗಳು ನಿಷ್ಪ್ರಯೋಜಕವೆಂದು ಕಂಡುಕೊಂಡರೆ ವಿಶೇಷ ನ್ಯಾಯಾಧೀಶರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪೀಠವು ತಿಳಿಸಿದೆ. ಪೀಠವು ಎನ್ಐಎಗೆ “ಎಲ್ಲಾ ಅಡಚಣೆಗಳನ್ನೂ ತೆರವುಗೊಳಿಸಲಾಗಿದೆ ಮತ್ತು ವಿಚಾರಣೆಯನ್ನು ಸಲೀಸಾಗಿ ನಡೆಸಲಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ತಿಳಿಸಿದೆ.

ಹಿಂದಿನ ವಿಚಾರಣೆಗಳಲ್ಲಿ, 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನಕಲಿ ಪ್ರತಿಗಳನ್ನು ದ್ವಿತೀಯ ಸಾಕ್ಷ್ಯವಾಗಿ ಬಳಸುವುದು ಸರಿಯಲ್ಲ ಎಂದು ವಿಚಾರಣಾ ನ್ಯಾಯಾಲಯವು ಆದೇಶ ನೀಡಿತ್ತು ಎಂದು ಪೀಠವು ತಿಳಿಸಿದೆ. ಸಂಸ್ಥೆಯು ಸರಿಯಾದ ಕಾನೂನುಬದ್ಧ ಸಾಕ್ಷ್ಯವನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಬೇಕು ಎಂದು ಇದೀಗ ಪೀಠವು ತಿಳಿಸಿದೆ. “ರಾಷ್ಟ್ರೀಯ ಸಂಸ್ಥೆಯಾಗಿ, ನೀವು ತಪ್ಪನ್ನು ಸರಿಪಡಿಸಬೇಕು, ಇದು ನಿಮ್ಮ ಜವಾಬ್ದಾರಿ. ನಿಮ್ಮ ಸಂಸ್ಥೆಗಳು ತಮ್ಮನ್ನು ತಾವು ಸರಿಪಡಿಸುವುದನ್ನು ನಾವು ನಿರೀಕ್ಷಿಸಿದ್ದೇವೆ’ ಎಂದು ಪೀಠವು ಹೇಳಿದೆ ಎಂದು ದ ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.