ಸೌದಿ ಮಂತ್ರಿಯ ಇರಾನ್ ವಿರೋಧಿ ಭಾಷಣ: ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿಯಿಂದ ಸೋರಿಕೆ!

0
564

ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಕಚೇರಿ ಈ ವಾರದ ವಾರ್ಸವ್  ಸಮ್ಮೇಳನದಲ್ಲಿ ಮುಚ್ಚಿದ ಬಾಗಿಲುಗಳ ಹಿಂದೆ ಸೌದಿ ವಿದೇಶಾಂಗ ಸಚಿವ ಅದಿಲ್ ಅಲ್-ಜುಬೈರ್ ಮಾಡಿದ ಭಾಷಣದ ವಿಡಿಯೋವನ್ನು ಸೋರಿಕೆ ಮಾಡಿದೆ.

ವೀಡಿಯೋದಲ್ಲಿ – ಒಂದು ಮೊಬೈಲ್ ಕ್ಯಾಮರಾ ಮೂಲಕ  ತೆಗೆಯಲಾದ-ಅಲ್-ಜುಬಿರ್ ಹೇಳುತ್ತಾರೆ “ಇರಾನ್ ನ ಅಸ್ಥಿರತೆಯ ಚಟುವಟಿಕೆಗಳು  ಪ್ರದೇಶವನ್ನು ಸಂಘಟಿಸಲು ಕಷ್ಟಕರವಾಗುತ್ತವೆ” ಎಂದು ನ್ಯೂ ಖಲೀಜ್ ವರದಿ ಮಾಡಿದೆ.

ಮೊದಲು ನೇತನ್ಯಾಹು ಅವರ ಯು ಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿ ಶೀಘ್ರವೇ ಅಳಿಸಿದ ವೀಡಿಯೋದಲ್ಲಿ  ಅಲ್-ಜುಬೈರ್ ಹೇಳುತ್ತಾರೆ : “ಇರಾನಿನ ಆಡಳಿತವು ನೈತಿಕತೆಯನ್ನು ಹೊಂದಿಲ್ಲ ಏಕೆಂದರೆ ಅದು ರಾಜತಾಂತ್ರಿಕರನ್ನು ಗುರಿಯಾಗಿಟ್ಟುಕೊಂಡು ದೂತಾವಾಸಗಳನ್ನು ಸ್ಫೋಟಿಸುತ್ತದೆ.” ಅವರು ಯಾರು ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಗೆ  ಪ್ಯಾಲೇಸ್ಟಿನಿಯನ್ ಬಣಗಳನ್ನು ಬೆಂಬಲಿಸುತ್ತಿದ್ದಾರೆಂದು ಆಲೋಚಿಸುತ್ತಾ ಮುಂದುವರೆದರು, ನಂತರ ಉತ್ತರಿಸಿದರು: “ಇರಾನ್ ಅನೇಕ ಅರಬ್ ದೇಶಗಳಲ್ಲಿ ಪರಿಸ್ಥಿತಿಯನ್ನು ಅಸ್ಥಿರಗೊಳಿಸುತ್ತದೆ.”

ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಸ್ತಾಂತರಿಸಿರುವ “ಭಯೋತ್ಪಾದಕ ಗುಂಪುಗಳು ಸ್ವೀಕಾರಾರ್ಹವಲ್ಲ” ಎಂದು ಸೌದಿ ಅಧಿಕಾರಿ ಹೇಳಿದ್ದಾರೆ.ಯೆಮೆನ್ ನಲ್ಲಿ  ಇರಾನ್ ಬೆಂಬಲಿತ ಹೂತಿ ಬಂಡುಕೋರರು ಸೌದಿ ಅರೇಬಿಯಾ ಕಡೆಗೆ 200 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಪ್ರಯೋಗಿಸಿದ್ದಾರೆ ಎಂದು ತಿಳಿಸಿದರು.

ಈ ಮಧ್ಯೆ , ಬಹ್ರೇನಿ ವಿದೇಶಾಂಗ ಸಚಿವ ಖಾಲಿದ್ ಬಿನ್ ಅಹ್ಮದ್ ಅಲ್ ಖಲೀಫಾ ಅವರು “ಇರಾನಿನ ಬೆದರಿಕೆ”ಯು “ಈ ಸಮಯದಲ್ಲಿ ಪ್ಯಾಲಸ್ತೀನಿ ಕಾರಣಕ್ಕಿಂತ ಹೆಚ್ಚು ಅಪಾಯಕಾರಿ ಮತ್ತು ಮುಖ್ಯವಾದುದು” ಎಂದು ಹೇಳಿದರು.

ಸಿರಿಯಾದಲ್ಲಿ ಇಸ್ರೇಲಿ ವೈಮಾನಿಕ ದಾಳಿಯ  ಬಗ್ಗೆ ಮಾತನಾಡುತ್ತಾ,ಅರಬ್ ಸಂಯುಕ್ತ ಸಂಸ್ಥಾನ(ಯುಎಇ)ಯ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಜಾಯೆದ್ ಅಲ್-ನಹ್ಯಾನ್ ಹೇಳಿದರು: “ಸವಾಲುಗಳನ್ನು ಎದುರಿಸುವ ಯಾವುದೇ ರಾಜ್ಯಕ್ಕೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕಿದೆ.”

ಕೃಪೆ: ಮಿಡಲ್ ಈಸ್ಟ್ ಮಾನಿಟರ್
ಕನ್ನಡಕ್ಕೆ: ಆಯಿಷತುಲ್ ಅಫೀಫ