ಮಸೂದ್ ಅಝರ್‌ನನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಲು ಜಾಗತಿಕ ಸಮುದಾಯದ ಬೆಂಬಲ ತನಗಿದೆ- ಭಾರತ

0
97

ಹೊಸದಿಲ್ಲಿ,ಮಾ.16: ಜೈಷೆ ಮುಹಮ್ಮದ್ ಮುಖಂಡ ಮಸೂದ್ ಅಝರ್‍ನನ್ನು ವಿಶ್ವಸಂಸ್ಥೆ ಭಯೋತ್ಪಾದನಾ ಪಟ್ಟಿಗೆ ಸೇರಿಸುವುದಕ್ಕೆ ಸಂಬಂಧಿಸಿ ಜಾಗತಿಕ ಸಮುದಾಯ ತಮ್ಮನ್ನು ಬೆಂಬಲಿಸುತ್ತಿದೆ ಎಂದು ಭಾರತ ಹೇಳಿದೆ. ಭಯೋತ್ಪಾದಕ ಪಟ್ಟಿಗೆ ಅಝರ್‍ನನ್ನು ಸೇರಿಸುವುದಕ್ಕೆ ಪ್ರಯತ್ನಗಳು ಮುಂದುವರಿಯುತ್ತಿದೆ. ಈ ವಿಷಯದಲ್ಲಿ ಭಾರತ ಸಹನೆ ವಹಿಸಲಿದೆ ಎಂದು ಉನ್ನತ ಅಧಿಕಾರಿಗಳನ್ನು ಉದ್ಧರಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಭಯೋತ್ಪಾದನೆ ಚೀನಕ್ಕೂ ಬೆದರಿಕೆಯಾಗಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದನಾ ಸಂಘಟನೆಗಳು ಇವೆ ಎಂದು ಚೀನಕ್ಕೂ ಗೊತ್ತಿದೆ. ಪಾಕಿಸ್ತಾನದೊಂದಿಗೆ ಹಲವು ಸಮಸ್ಯೆಗಳನ್ನು ಚೀನಾ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಮಸೂದ್ ಅಝರ್‍ನನ್ನು ವಿಶ್ವಸಂಸ್ಥೆಯ ಭಯೋತ್ಪಾದನಾ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಯತ್ನವನ್ನು ಚೀನಾ ವೀಟೊ ಪ್ರಯೋಗಿಸಿ ನಾಲ್ಕನೇ ಬಾರಿ ತಡೆದಿದೆ.