ಸೀರತ್ ಅಭಿಯಾನದ ಪ್ರಯುಕ್ತ ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಗೆ ಆಹ್ವಾನ

0
1066

ಪ್ರವಾದಿ ಮುಹಮ್ಮದ್ (ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಎಂಬ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಳ್ಳಲಾದ ಸೀರತ್ ಅಭಿಯಾನದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಗೆ ಪದವಿ ಪೂರ್ವ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ. ಭಾಷಣದ ಶೀರ್ಷಿಕೆ ” ಪ್ರವಾದಿ ಮುಹಮ್ಮದ್(ಸ) ನಾ ಕಂಡಂತೆ” ಎಂದಾಗಿದ್ದು;  ಒಂದು ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದ್ದು ಜಾತಿ-ಮತ- ಲಿಂಗ ಭೇದವಿಲ್ಲದೇ ಸ್ಪರ್ಧೆಯಲ್ಲಿ ಆಸಕ್ತ ಪ್ರಥಮ ಮತ್ತು ದ್ವಿತೀಯ ಪದವಿಪೂರ್ವ  ವಿಭಾಗದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಭಾಷಣ ಸ್ಪರ್ಧೆಗೆ ಅವಕಾಶವಿದ್ದು ಕಾಲಮಿತಿಯು 7(6+1)ನಿಮಿಷಗಳದ್ದಾಗಿರುತ್ತದೆ.
ಡಿಸೆಂಬರ್ 15 ರಂದು ಮಂಗಳೂರಿನಲ್ಲಿ ಭಾಷಣ ಸ್ಪರ್ಧೆಯು ನಡೆಯಲಿದ್ದು,
ಪ್ರಥಮ 10 ಸಾವಿರ  ನಗದು ಮತ್ತು ಪ್ರಮಾಣಪತ್ರ
•ದ್ವಿತೀಯ 7 ಸಾವಿರ ನಗದು ಮತ್ತು ಪ್ರಮಾಣಪತ್ರ ಹಾಗೂ
•ತೃತೀಯ 5 ಸಾವಿರ ನಗದು ಮತ್ತು ಪ್ರಮಾಣಪತ್ರವನ್ನು  ನೀಡಲಾಗುವುದು‌.

ಸ್ಥಳ ಮತ್ತು ಸಮಯವನ್ನು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಸ್ಪರ್ಧಾಳುಗಳ ಪ್ರಯಾಣವೆಚ್ಚವನ್ನು ಆಯೋಜಕರು ಭರಿಸಲಿದ್ದು,ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ಹಾಗೂ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಫಲಕಗಳನ್ನು ನೀಡಲಾಗುವುದು.

ಆಸಕ್ತ ವಿದ್ಯಾರ್ಥಿಗಳು ಡಿಸೆಂಬರ್ 5 ರೊಳಗೆ ತಮ್ಮ ಹೆಸರನ್ನು ಸ್ಪರ್ಧೆಗೆ ನೋಂದಾಯಿಸಿಕೊಳ್ಳಬಹುದು.
ಸ್ಪರ್ಧಾಳುಗಳಿಗೆ ಕಾಲೇಜಿನ ಗುರುತು ಪತ್ರವು ಕಡ್ಡಾಯವಾಗಿದ್ದು ಪ್ರಾಂಶುಪಾಲರ ಮೊಹರಿನೊಂದಿಗೆ ದೃಢೀಕರಿಸಲ್ಪಟ್ಟಿರಬೇಕು. ಭಾಷಣ ವಿಷಯಕ್ಕೆ ಸಂಬಂಧಿಸಿದಂತೆ  ಅಧ್ಯಯನಕ್ಕೆ  ಪೂರಕವಾದ ಪುಸ್ತಕಗಳು ಮಂಗಳೂರಿನ ಶಾಂತಿ ಪ್ರಕಾಶನದಲ್ಲಿ ಲಭ್ಯವಿದ್ದು ವಿದ್ಯಾರ್ಥಿಗಳು ಇದರಿಂದ ಪ್ರಯೋಜನ ಪಡೆದುಕೊಳ್ಳಬಹುದು.

ತೀರ್ಪುಗಾರರ ತೀರ್ಮಾನವೇ ಅಂತಿಮ.
ಹೆಸರು ನೋಂದಣಿಗೆ ಕೊನೆಯ ದಿನಾಂಕ 5.ಡಿಸೆಂಬರ್. ಸಂಪರ್ಕಿಸಿ: 9448696490,
0824- 2422785