ಭಾರತದ ಫೈಟರ್ ಜೆಟ್ ಉರುಳಿಸಿದ ಪಾಕಿಸ್ತಾನ: ಇಬ್ಬರು ಪೈಲಟ್‍ಗಳ ಬಂಧನ-ಪಾಕಿಸ್ತಾನದ ವೀಡಿಯೊ

0
884

ಪಾಕ್ ಆಕ್ರಮಿತ ಕಾಶ್ಮೀರ: ಭಾರತದ ಮಿಗ್ 21 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದೇವೆ. ಇಬ್ಬರು ಪೈಲಟ್‍ಗಳನ್ನು ಬಂಧಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಬುಧವಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಘಟನೆ ನಡೆದಿದೆ.

ಒಂದು ವಿಮಾನ ಪಾಕ್ ಆಕ್ರಮಿತ ಕಾಶ್ಮೀರದ ಕೊಹಿ ರತ ಸೆಕ್ಟರ್‍ನಲ್ಲಿ ಹೊಡೆದುರುಳಿಸಲಾಗಿದೆ. ಇನ್ನೊಂದು ಭಾರತ ಅಧೀನ ಕಾಶ್ಮೀರದ ಬುಡ್‍ಗನ್ ಪ್ರದೇಶದಲ್ಲಿ ಹೊಡೆದುರುಳಿಸಲಾಗಿದೆ ಎಂದಿದೆ.

ಭಾರತದ ಇಬ್ಬರು ಪೈಲಟ್‍ಗಳನ್ನು ಬಂಧಿಸಲಾಗಿದ್ದು ಒಬ್ಬರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮೇಜರ್ ಜನರಲ್ ಆಸಿಫ್ ಗಫೂರ್ ಹೇಳಿದ್ದಾರೆ. ಭಾರತೀಯ ಪೈಲಟ್‍ ಒಬ್ಬರನ್ನು ಅಭಿನಂದನ್ ಎಂದು ಗುರುತಿಸಲಾಗಿದ್ದು ಅವರ ಸರ್ವಿಸ್ ನಂಬರ್ 27981 ಆಗಿದೆ ಎಂದು ಪಾಕಿಸ್ತಾನ ಮೂಲದ ವರದಿಗಳು ತಿಳಿಸಿವೆ.