ಜಮ್ಮು-ಕಾಶ್ಮೀರ ಜಮಾಅತೆ ಇಸ್ಲಾಮಿಗೆ ನಿಷೇಧ ಹೇರಿದ ಕೇಂದ್ರ ಸರಕಾರ

0
891

ಹೊಸದಿಲ್ಲಿ,ಮಾ.1: ಜಮ್ಮು-ಕಾಶ್ಮೀರ ಜಮಾಅತೆ ಇಸ್ಲಾಮಿಯನ್ನು ಕೇಂದ್ರ ಸರಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ದೇಶದ್ರೋಹ-ವಿಧ್ವಂಸಕ ಚಟುವಟಿಕೆಗಳ ಹೆಸರಿನಲ್ಲಿ ನಿಷೇಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಅಧ್ಯಕ್ಷತೆಯಲ್ಲಿ ಸೇರಿದ ಭದ್ರತಾ ವಿಷಯಗಳ ಉನ್ನತ ಸಮಿತಿಯ ಸಭೆಯ ನಂತರ ಗೃಹ ಸಚಿವಾಲಯ, ಕಾನೂನು ವಿರೋಧಿ ಚಟುವಟಿಕೆಗಳನ್ನು ನಿಷೇಧ ಕಾನೂನು (ಯುಎಪಿಎ) ಪ್ರಕಾರ ಆದೇಶ ಹೊರಡಿಸಿ ಜಮಾಅತೆ ಇಸ್ಲಾಮಿಯನ್ನು ಐದು ವರ್ಷದವರೆಗೆ ನಿಷೇಧಿಸಿದೆ.

ಪ್ರತ್ಯೇಕವಾದಿ ಸಂಘಟನೆಯಾದ ಕಾಶ್ಮೀರ ಜಮಾಅತೆ ಇಸ್ಲಾಮೀ ದೇಶದಲ್ಲಿ ವಿಧ್ವಂಸಕ ಚಟುವಟಿಕೆಗಳಲ್ಲಿ ವ್ಯಸ್ತವಾಗಿದೆ. ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಬಂಧ ಬೆಳೆಸಿಕೊಂಡಿದೆ ಎಂದು ನಿಷೇಧಿಸಿ ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ. ಪೂಲ್ವಾಮ ಭಯೋತ್ಪಾದನಾ ದಾಳಿಯಲ್ಲಿ ವಿವಿಧ ಪ್ರತ್ಯೇಕವಾದಿ ಸಂಘಟನೆಗಳ ಭದ್ರತಾ ಪಡೆಗಳು ಕ್ರಮ ಜರಗಿಸುತ್ತಿದೆ. ನಂತರ ಜಮ್ಮು-ಕಾಶ್ಮೀರ ಜಮಾಅತೆ ಇಸ್ಲಾಮಿಯ ಹಲವಾರು ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿತ್ತು.