ನೆದಲ್ರ್ಯಾಂಡ್: ಮಸೀದಿಯ ಮುಂದೆ ಇಸ್ಲಾಮ್ ವಿರೋಧಿ ಪ್ರತಿಭಟನೆ

0
626

ಅಟ್ರಾಕ್ಟಿ: ನೆದಲ್ರ್ಯಾಂಡಿನಲ್ಲಿ ಮಸೀದಿಯ ಮುಂದೆ ಇಸ್ಲಾಮ್ ವಿರೋಧಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ತೀವ್ರ ಬಲಪಂಥೀಯ ಇಸ್ಲಾಮ್ ವಿರೋಧಿ ಸಂಘಟನೆಯಾದ ಪೆಗಿಡ್ ನೇತೃತ್ವದಲ್ಲಿ ಬುಧವಾರ ರಾತ್ರೆ ಮಸೀದಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಮಧ್ಯ ನೆದಲ್ರ್ಯಾಂಡಿನ ನಗರ ಅಟ್ರಾಕ್ಚಿಯಲ್ಲಿ ಮೊರೊಕ್ಕೊದವರು ಸ್ಥಾಪಿಸಿರುವ ಅಬೂಬಕರ್ ಸಿದ್ದೀಕ್ ಮಸೀದಿಯ ಎದುರು ಪ್ರತಿಭಟನೆ ನಡೆಯಿತು. ದೇಶದಲ್ಲಿರುವ ಇಸ್ಲಾಮೊಫೋಬಿಯದ ಭಾಗವಾಗಿ ಪ್ರತಿಭಟನೆ ನಡೆದಿದೆ.

“ಪ್ರತಿಭಟನೆಯ ನಂತರ ಇಸ್ಲಾಮ್ ವಿರೋಧಿ ಭಾಷಣಗಳು, ಸಿನೆಮಾಗಳನ್ನು ತಂಡ ಮಸೀದಿಯ ಮುಂದೆ ಪ್ರದರ್ಶಿಸಿತು. ಪ್ರತಿಭಟನೆ ನಡೆದುದರಿಂದ ಈ ಪ್ರದೇಶದಲ್ಲಿ ಪೊಲೀಸರು ಬಿಗು ಭದ್ರತೆ ಏರ್ಪಡಿಸಿದ್ದರು. ಮಸೀದಿಯ ಮುಂದೆ ಬ್ಯಾರಿಕೇಡ್ ಇಟ್ಟು ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ದುರುದ್ದೇಶದಿಂದ ಉದ್ವಿಗ್ನತೆ ಹುಟ್ಟುಹಾಕಲು ಶ್ರಮಿಸುತ್ತಿದೆ” ಎಂದು ಮಸೀದಿಯ ಪತ್ರಿಕಾ ಕಾರ್ಯದರ್ಶಿ ಜಮಾಲ್ ಹೌರಿ ಅನಂಡಲು ಪತ್ರಿಕಾ ಏಜೆನ್ಸಿಗೆ ತಿಳಿಸಿದರು. “ನಾವು ಪ್ರತಿಭಟನೆಯನ್ನು ನಿರ್ಲಕ್ಷಿಸಿದೆವು. ಇದುವೇ ಅವರಿಗೆ ನೀಡಬಹುದಾದ ಉತ್ತಮ ಉತ್ತರ” ವೆಂದು ಮಸೀದಿಯ ಪದಾಧಿಕಾರಿಗಳು ಹೇಳಿದ್ದಾರೆ.