ಆ ಮತ ಯಂತ್ರದಲ್ಲಿ ಕಚ್ಚಿ ತೂಗಾಡಬೇಡಿ

0
736

ಹೌದು ಆ ಯಂತ್ರದಲ್ಲಿ ಕಚ್ಚಿ ತೂಗಾಡಬೇಡಿ. ಚುನಾವಣಾ ಆಯೋಗದ ಮುಂದೆ ಹದಿನೇಳು ಪಾರ್ಟಿಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಲೆಕ್ಟ್ರಾನಿಕ್ ಮತಯಂತ್ರಗಳು ಬೇಡ, ಬ್ಯಾಲೆಟ್ ಪೇಪರ್ ಸಾಕು ಎಂದು ಹೇಳಿದೆ. ದೊಡ್ಡ ವಿಪಕ್ಷಗಳೇ ಕಾಂಗ್ರೆಸ್, ಡಿಎಂಕೆ, ಕಮ್ಯೂನಿಸ್ಟ್ ಪಾರ್ಟಿ, ತೃಣಮೂಲ ಕಾಂಗ್ರೆಸ್, ಶಿವಸೇನೆ ಹೀಗೆ ಮಂತ ಯಂತ್ರದ ವಿರುದ್ಧ ತೂಗುಕತ್ತಿ ನೇತಾಡಿಸಿದ್ದಾರೆ. ಮತ ಯಂತ್ರದ ಕುರಿತು ಕಚ್ಚಾಟವೇ ಆಗಬಹುದು. ಅವುಗಳ ಧ್ವನಿ ಅಷ್ಟು ಪ್ರಬಲವಾಗಿ ಕೇಳಿ ಬರುತ್ತಿದೆ. ಕಾರಣ ಇಲ್ಲದಿಲ್ಲ. ಇಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್‍ನಲ್ಲಿ ತರಗಿಕ ತಕಧಿ ಮಿಥೈ ಮಾಡಲು ಸಾಧ್ಯವಿದೆ ಎಂಬುದಕ್ಕೆ ಉದಾಹರಣೆಯಾಗಿ ಅನೇಕ ಮಾಧ್ಯಮ ವರದಿಗಳು ಜೊತೆಗೆ ಈ ಹಿಂದಿನ ಚುನಾವಣಾ ವೇಳೆ ಯಾರೇ ಒತ್ತಿದರೂ ಯಾವುದೇ ಪಕ್ಷಕ್ಕೆ ಒತ್ತಿದರೂ ಒಂದೇ ಪಕ್ಷಕ್ಕೆ ಹೋಗಿ ಬೀಳುವ ಅವಸ್ಥೆ ದೇಶದ ಮುಂದೆ ಬಟಾಬಯಲಾಗಿದೆ. ಆದ್ದರಿಂದಲೇ, ಕೇಂದ್ರದ ಆಡಳಿತ ಪಾಲ್ದಾರ ಶಿವಸೇನೆಗೂ ಮತಯಂತ್ರದ ಕುರಿತು ಅಸಮಾಧಾನ ಇದೆ ಎನ್ನಬಹುದು. ಯಾವುದೇ ಪಕ್ಷವು ತಮ್ಮ ವೋಟನ್ನು ಇನ್ನಾರಿಗೂ ಹೋಗಗೊಡುವಷ್ಟು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧಾರಾಳಿಯಾಗಬೇಕೆನ್ನುವ ವಾದವನ್ನು ದುರುದ್ದೇಶ ಎಂದೂ ಹೇಳಬೇಕಾಗುತ್ತದೆ. ಈವರೆಗಿನ ಎಲ್ಲ ಬೆಳವಣಿಗೆಗಳು ಇಂತಹ ಯಾವ ವಾದಕ್ಕೂ ಪೂರಕವಾಗಿ ಇರುವಂತಹದಲ್ಲ. ಅಂದರೆ ಎಲ್ಲ ಪಕ್ಷಗಳು ತಮ್ಮ ವೋಟನ್ನು ತಮ್ಮ ಬುಟ್ಟಿಯಲ್ಲೇ ಉಳಿಸಿಕೊಳ್ಳಬಯಸುತ್ತದೆ ಎಂದರ್ಥ.
ಕಳೆದ ಚುನಾವಣೆಯಲ್ಲಿ ಉತ್ತರ ಪ್ರದೇಶದ ಕೈರಾನ ಲೋಕ ಸಭಾ ಕ್ಷೇತ್ರದಲ್ಲಿ ಮತಯಂತ್ರಗಳು ವ್ಯಾಪಕವಾಗಿ ಕೆಟ್ಟು ನಿಂತವು. ವೋಟಿಂಗ್‍ಗೆ ರಶೀದಿ ನೀಡುವ ವಿವಿಪ್ಯಾಟ್ ಸಹಿತ 2056 ಮತಯಂತ್ರಗಳಲ್ಲಿ 388 ಯಂತ್ರಗಳು ಕೆಟ್ಟಿದ್ದವು ಎಂದರೆ ಅರ್ಥ ಏನು? ಇದಕ್ಕೆ ಮುಖ್ಯ ಕಾರಣವನ್ನು ಚುನಾವಣಾ ಆಯೊಗ ವಿವರಿಸಿದರೂ ಇದು ಪಕ್ಷಗಳ ಬಲಾಬಲ ನಿಗದಿಗೊಳಿಸುವ ಮತ ಗಳ ವಿಚಾರ. ಚುನಾವಣಾ ಆಯೋಗ ಹೇಳಿದೆಯೆಂದಾಕ್ಷಣ ವೋಟಿನ ಹಕ್ಕುದಾರ ಪಕ್ಷಗಳು ಅಷ್ಟೆಲ್ಲ ಧಾರಾಳಿಯಾಗಬೇಕೆಂದಲ್ಲ. ಅಂದರೆ ಅವು ತಮ್ಮ ವೋಟುಗಳನ್ನು ಕಳಕೊಳ್ಳಲು ಸಿದ್ಧವಿರುವುದಿಲ್ಲ. ಆದರೂ ಚುನಾವಣಾ ಆಯೋಗ ಅತ್ಯಂತ ಸೆಖೆ ವಾತಾವರಣ ಮತಯಂತ್ರ ಕೆಡಲು ಕಾರಣವೆನ್ನುತ್ತದೆ. ಕೇಂದ್ರ ಸರಕಾರ ಕೂಡಾ ಚುನಾವಣಾ ಆಯೋಗದ ಈ ವಾದವನ್ನು ಒಪ್ಪಿಲ್ಲ. ಯಾಕೆಂದರೆ ಸೆಖೆ ಹೆಚ್ಚಿರುವ ವೇಳೆಯೇ ಮುಂದಿನ ಚುನಾವಣೆ ನಡೆಯುವುದು. 2019ರ ಎಪ್ರಿಲ್ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ಆದ್ದರಿಂದ ತಾಪಮಾನದಿಂದ ಚುನಾವಣಾ ಯಂತ್ರಗಳು ಕೆಡುತ್ತದೆ ಎಂಬ ವಾದವನ್ನು ಕೇಂದ್ರ ಸಚಿವ ಪಿಪಿ ಚೌಧರಿ ತಳ್ಳಿಹಾಕಿದರು. ಈ ಹಿನ್ನೆಲೆಯಲ್ಲಿ ಮತಯಂತ್ರದ ಕುರಿತು ಕೆಲವು ಪಕ್ಷಗಳ ನಿಲುವುಗಳು ತುರ್ತು ಸ್ವಭಾವದ್ದೂ ಆಗಿದೆ. ಚೌಧರಿ ಯಂತ್ರ ಹಾಳಾಗಿದ್ದಕ್ಕೆ ಬದಲಿ ಕಾರಣವನ್ನು ತಿಳಿಸಿಲ್ಲ.
ಹೀಗೆ ಯಂತ್ರದಲ್ಲಿ ಕಚ್ಚಿ ತೂಗಾಡುವ ಪ್ರಕ್ರಿಯೆ ಭರದಿಂದ ಸಾಗಿದೆ. ಇನ್ನು ಮತ ಯಂತ್ರ ಬಳಕೆಯಿಂದ ಬಹಳಷ್ಟು ಪ್ರಯೋಜನ ಇದೆ ಎಂಬುದನ್ನು ನಿರಾಕರಿಸುವುದಕ್ಕೂ ಆಗುವುದಿಲ್ಲ. ಒಟ್ಟು ಮತದಾನ ಪ್ರಕ್ರಿಯೆಯ ಖರ್ಚು ಕಡಿಮೆ ಆಗುತ್ತದೆ. ಮತದಾನ ಮತ್ತು ಮತ ಎಣಿಕೆ ಬಹಳ ಸುಲಭದಲ್ಲಿ ನಡೆದು ಬಿಡುತ್ತದೆ. ಸಮಯವೂ ಕಡಿಮೆ ಸಾಕು. ಆದರೆ ಮತ ಯಾರ್ಯಾರಿಗೆ ಬೀಳುತ್ತದೆ ಎನ್ನುವುದರ ಮುಂದೆ ಯಾವ ಪಕ್ಷಗಳೂ ಈ ಕಾರಣವನ್ನು ಒಪ್ಪಿಕೊಳ್ಳಲು ಸಾಧ್ಯ ವಿಲ್ಲ. ನಾವು ಆಧುನಿಕತೆಯತ್ತ ಚಾಚಿ ಕೊಳ್ಳುವಾಗ ಹಳೆ ವ್ಯವಸ್ಥೆ ಸವಾಲೆಸೆದು ನಿಲ್ಲುವುದು ಹೀಗೆ. ಒಂದು ವೇಳೆ ಮತ ಯಂತ್ರ ಬಿಟ್ಟು ಬ್ಯಾಲೆಟ್ ಪ್ಯಾಪರ್‍ಗೆ ಹೋದರೆ ಹಳೆಯ ಕೋಟ್ಯಂತರ ಡಬ್ಬ ಗಳನ್ನುಪ್ಯಾಕ್ ಮಾಡುವ ಆ ಕಷ್ಟದ ಹಳೆಯ ದಿನಗಳು ಬಂದೇ ಬರುತ್ತವೆ. ಅಂದರೆ ಇದು ಕಳೆದ ನಮ್ಮ ಕಾಲದ ಒಂದು ರೂಪಾಯಿಯ ನೋಟಿಗೆ ಮೌಲ್ಯ ಶಕ್ತಿ ತಂದು ಕೊಟ್ಟಂತೆ ಎಂದರ್ಥ. ಹೊಸ ನೋಟಿನ ಮಾನ್ಯತೆಯನ್ನು ಕೂಡಾ ಹಳೆಯ ನೋಟುಗಳು ಹೀಗೆ ಪ್ರಶ್ನಿಸುವ ದಿನಗಳು ಮುಂದೆ ಬರಬಹುದು.
ಮತ್ತೆ ಮತ್ತೆ ಚುನಾವಣೆ ಬಂದು ಮತಯಂತ್ರಗಳಲ್ಲಿ ಸುಧಾರಣೆ ತಂದರೂ ಮತಯಂತ್ರಗಳು ಮನುಷ್ಯ ಸ್ವಭಾವಕ್ಕೆ ಹೊಂದಿಕೆಯಾಗಿಲ್ಲ. ಅಂದರೆ ಅವುಗಳ ವಿರುದ್ಧ ಮನುಷ್ಯ ಸಂಶಯ ಪ್ರಕಟಿಸುತ್ತಿದ್ದಾನೆ. ಪಕ್ಷಗಳು ಕತ್ತಿ ಮಸೆಯುತ್ತಿವೆ. ಇನ್ನು ಪಕ್ಷಗಳು ತಮ್ಮ ಸೋಲನ್ನು ಮತಯಂತ್ರಗಳ ತಲೆಗೆಕಟ್ಟಿ ಬಿಡುತ್ತವೆ ಎಂಬ ಆರೋಪಗಳನ್ನು ಕೂಡ ಕೇವಲ ಗೆದ್ದವರು ಮಾತ್ರ ಮಾಡಬಹುದು. ಇಲೆಕ್ಟ್ರಾನಿಕ್ ಯಂತ್ರದ ಮೂಲಕ ಮೋಸ ಮಾಡಲು ಯಾರಿಗೂ ಸಾಧ್ಯವಿಲ್ಲವೆಂದು ಚುನಾವಣಾ ಆಯೋಗ ವಾದಿಸಿದರೂ 2010ರಲ್ಲಿ ಬಿಬಿಸಿಯ ವೈಜ್ಞಾನಿಕ ವರದಿಗಾರ ಜೂಡಿಯಲ್ ಸಿಡಲ್ ಮತಯಂತ್ರವನ್ನು ಹೇಗೆಲ್ಲ ದುರುಪಯೋಗಿಸಬಹುದೆಂಬ ಪ್ರಯೋಗವನ್ನೇ ಮಾಡಿ ತೋರಿಸಿ ಬಿಟ್ಟರು. ಕೊನೆಗೆ ಬರುವ ಫಲಿತಾಂಶ ಗಳಲ್ಲಿ ಚಿಕ್ಕ ತಪ್ಪುಗಳಲ್ಲ ಭಾರೀ ಪ್ರಮಾದಗಳು ಆಗಿಬಿಡುತ್ತಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಬೆಟ್ಟು ಮಾಡಿ ತೋರಿಸಿತು. ಸ್ಟಾನ್‍ಫರ್ಡ್ ವಿಶ್ವವಿದ್ಯಾ ನಿಲಯದ ಪ್ರೊಫೆಸರ್ ಡೇವಿಡ್ ಬಿಲ್ ಅದಕ್ಕಿಂತ ಮೊದಲೇ ಇದನ್ನು ತೋರಿಸಿ ಕೊಟ್ಟಿದ್ದರು. ಕಂಪ್ಯೂಟರ್ ಮತಯಂತ್ರ ದಲ್ಲಿ ಪ್ರೋಗ್ರಾಮಿಂಗ್ ಎಡವಟ್ಟು, ಯಂತ್ರ ಕೆಡುವುದು, ಕೃತಕತೆ ಸೃಷ್ಟಿಸ ಬಹುದು ಎಂದರು ಅವರು. ಮತದಾನ ಸಮಯದಲ್ಲಿ ಅದೆಲ್ಲ ಸರಿಯಾಗಿಯೇ ಇದ್ದರೂ ನಂತರ ಮತ ಎಣಿಕೆ ಸಮಯ ದಲ್ಲಿ ಫಲಿತಾಂಶವನ್ನೇ ಬದಲಾಯಿಸುವ ಕ್ಲಾಕ್ ವ್ಯವಸ್ಥೆ ತರಲು ಸಾಧ್ಯ ಎಂದು ವೆರಿಫೈಡ್ ವೋಟಿಂಗ್ ಎಂಬ ಸ್ವಯಂ ಸೇವಾ ಕೂಟದ ತಜ್ಞರು ಹೇಳಿದರು. ಇಂತಹೆಲ್ಲ ವಾದವನ್ನು ಚುನಾವಣಾ ಆಯೋಗ ಎದುರಿಸುತ್ತದೆ. ಆದರೂ ಮತಯಂತ್ರವನ್ನು ಅದು ಸಮರ್ಥಿಸು ತ್ತದೆ. ಅದರಲ್ಲಿನ ಮೋಸವನ್ನು ತೋರಿಸಿಕೊಡಿ ಎಂದು ಚುನಾವಣಾ ಆಯೋಗ ಸವಾಲು ಹಾಕಿತು. ಆದರೆ ಯಾರೂ ಕೂಡಾ ಇದಕ್ಕೆ ಮುಂದಾ ಗಲಿಲ್ಲ. ಹಾಗಂತ ಅದರಲ್ಲಿ ಮೋಸ ನಡೆಯದು ಅಥವಾ ಅದು ಹಾಳಾ ಗದು ಎನ್ನುವಂತಹ ಭರವಸೆ ಯಾರಿಗೂ ಇಲ್ಲ.
ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ವಿಶ್ವಾಸಾರ್ಹತೆ ಅತಿಪ್ರಧಾನ. ಆದ್ದರಿಂದ ಎಷ್ಟು ಪ್ರಯೋಜನ ಇದ್ದರೂ ಮತ ಯಂತ್ರ ಉಪಯೋಗಿಸಲು ಹೆಚ್ಚಿನ ದೇಶಗಳು ಮುಂದಾಗಿಲ್ಲ. ಕೆಲವು ದೇಶ ಗಳು ಮತಯಂತ್ರವನ್ನೇ ನಿಷೇಧಿಸಿವೆ. ಅಂದರೆ ಓಬಿರಾಯನ ಕಾಲದ ವಿಧಾನ ವನ್ನೇ ಆಧುನಿಕ ಕಾಲದಲ್ಲಿಯೂ ನೆಚ್ಚಿಕೊಂಡಿದೆ. ಯಂತ್ರದಲ್ಲಿ ಮೋಸ ವಿಲ್ಲ, ಸರಿಯಿದೆ ಎನ್ನುವ ವಿಚಾರ ಏನೇ ಇದ್ದರೂ ಸಾರ್ವತ್ರಿಕ ಅಭಿಪ್ರಾಯ ದಲ್ಲಿ ಅದು ಬೇಡ ಎಂಬ ಮನೋ ಭಾವ ಹರಿದಾಡುತ್ತಿದೆ. ಎಲ್ಲ ಪಕ್ಷಗಳನ್ನು ಬಿಟ್ಟು ಜನರತ್ತ ನೋಡಿದರೂ ತನ್ನ
ನಿರ್ಧಾರದಿಂದ ಹಿಂದೆ ಸರಿಯಲು ಚುನಾವಣಾ ಆಯೋಗ ಮುಂದಾಗ ಬೇಕಿತ್ತು. ಚುನಾವಣಾ ಆಯೋಗ ಕೊನೆಗೂ ತನ್ನ ವಾದವನ್ನೇ ನೆಚ್ಚಿಕೊಳ್ಳು ವುದಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ವಿಶ್ವಾಸಾರ್ಹತೆ ತರಲು ಅದು ಪ್ರಯತ್ನಿಸ ಬೇಕು. ಅಂದರೆ ದೇಶ ಈ ವಿಷಯದಲ್ಲಿ ಅದರಿಂದ ಸರಿಯಾದ ನಿರ್ಧಾರ ಬರ ಬಹುದು ಎಂದು ಕಾಯುತ್ತಿದೆ.