ಆಧಾರ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ

0
555

ಹೊಸದಿಲ್ಲಿ, ಜೂ. 25: ಆಧಾರ್ ತಿದ್ದು ಪಡಿ ಮಸೂದೆ 2019 ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಆಧಾರ್ ತಿದ್ದುಪಡಿ ಮಸೂದೆ ಮಂಡಿಸಿದ್ದಾರೆ. ಸಂಸದ ಪ್ರೇಮಚಂದ್ರನ್ ಮಸೂದೆಯನ್ನು ವಿರೋಧಿಸಿದ್ದು ಹಲವು ಪ್ರಶ್ನೆಗಳನ್ನು ಎತ್ತಿದರು. ಇದಕ್ಕೆ ಉತ್ತರಿಸಿದ ಮಂತ್ರಿ ಆಧಾರ್ ಖಾಸಗಿತನವನ್ನು ಉಲ್ಲಂಘಿಸುವುದಿಲ್ಲ. ಇದು ದೇಶದ ಹಿತಕ್ಕೆ ಅನುಸಾರವಾಗಿದೆ ಎಂದು ಹೇಳಿದರು.

ಮಾನದಂಡಗಳನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ಸಹಿತ ಹೊಸ ನಿರ್ದೇಶನಗಳು ತಿದ್ದುಪಡಿಯಲ್ಲಿದೆ. ಆಧಾರ್ ಪಡೆದ ಮಗುವಿಗೆ ಹದಿನೆಂಟು ವಯಸ್ಸಾದಾಗ ಸ್ವಂತ ತೀರ್ಮಾನ ಪ್ರಕಾರ ಬಯೊಮೆಟ್ರಿಕ್ ಐಡಿ ಯೋಜನೆಯಿಂದ ಹೊರ ಹೋಗುವ ಅವಕಾಶವನ್ನು ತಿದ್ದುಪಡಿಯಲ್ಲಿ ಕಲ್ಪಿಸಲಾಗಿದೆ.