ಮಾಸ್ಕ್ ಹಾಕಲು ನಿರಾಕರಣೆ: ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿಯವರನ್ನು ಟ್ರೋಲ್ ಮಾಡಿದ ಆಮ್ ಆದ್ಮಿ

0
618

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಮಾಸ್ಕ್ ಬಳಸಲು ಪ್ರಧಾನಮಂತ್ರಿ ‌ನರೇಂದ್ರ ಮೋದಿ ನಿರಾಕರಿಸಿದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಆಮ್ ಆದ್ಮಿ ಪಾರ್ಟಿ (ಎಎಪಿ) ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ಬಳಕೆದಾರರು ಪಿಎಂ ಮೋದಿಯವರನ್ನು ಟ್ಯಾಗ್ ಮಾಡಿ, ರೀಟ್ವೀಟ್ ಮಾಡಿದ್ದಲ್ಲದೆ, ಪ್ರಧಾನಿಯವರನ್ನು ಎಂದು ಟೀಕಿಸಿದ್ದಾರೆ.

ಮಾಸ್ಕ್ ಹಾಗೂ ಇತರ ಕೈ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಯವರೊಂದಿಗೆ ಮಾತನಾಡುವ ವೀಡಿಯೊದಲ್ಲಿ ಪ್ರಧಾನಿ ಮೋದಿಯವರಿಗೆ ಅಂಗಡಿಯಾತ ಮಾಸ್ಕ್ ತೆಗೆದುಕೊಳ್ಳಿ ಎಂದು ವಿನಂತಿಸಿದರೂ ಕೂಡಾ, ನಿರಾಕರಿಸಿದ್ದಾರೆ.

ಈ ವೀಡಿಯೊದಲ್ಲಿ ಯಾವುದೇ ಮಾಸ್ಕ್ ಹಾಕದ್ದರಿಂದ ಗಮನಿಸಿದ ಆಮ್ ಆದ್ಮಿಯ ಐಟಿ ಸೆಲ್, ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡು ಮೋದಿಯವರನ್ನು ಟ್ರೋಲ್ ಮಾಡಿದ್ದಲ್ಲದೇ, ಮಾಸ್ಕ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿದ್ದು ಮಾಧ್ಯಮಗಳ ಗಮನ ಸೆಳೆಯಿತು.

ಎಎಪಿ ತನ್ನ ಟ್ವೀಟ್‌ನಲ್ಲಿ, “ಮಾಸ್ಕ್ ಧರಿಸಿ. ಮೋದಿಜಿ ಅವರಂತೆ ಆಗಬೇಡಿ. ” ಎಂದು ವೀಡಿಯೋ ದೊಂದಿಗೆ ಟ್ವೀಟ್ ಮಾಡಿದ್ದು, ಸದ್ಯ ವೈರಲ್ ಆಗಿದೆ.