ಕೆಂಪು ಕೋಟೆಯಲ್ಲಿ ಧ್ವಜ ಹಾರಿಸಿದ್ದು ಬಿಜೆಪಿಯ ದೀಪ್ ಸಿಧು ಬೆಂಬಲಿಗರು: ಭಾರತೀಯ ಕಿಸಾನ್ ಯೂನಿಯನ್ ಹೇಳಿಕೆ

0
572

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೆಂಪುಕೋಟೆಯಲ್ಲಿ ಬಿಜೆಪಿಯ ದೀಪ್ ಸಿಧು ಬೆಂಬಲಿಗರು ಧ್ವಜವನ್ನು ಹಾರಿಸಿದ್ದಾರೆ ಎಂದು ರೈತ ಸಂಘಟನೆಗಳು ತಿಳಿಸಿವೆ. ಭಾರತೀಯ ಕಿಸಾನ್ ಯೂನಿಯನ್ ಹರಿಯಾಣ ಘಟಕದ ಅಧ್ಯಕ್ಷರಾದ ಗುರ್ಮಾಮ್ ಸಿಂಗ್ ಇಂತಹ ಆರೋಪವನ್ನು ಎತ್ತಿದ್ದು ಸಿಧು ರೈತರನ್ನು ತಪ್ಪುದಾರಿಗೆಳೆದು ಅಕ್ರಮಕ್ಕೆ ಕಾರಣಕರ್ತರಾದರು ಎಂದು ಹೇಳಿದರು.

ದೀಪ್ ಸಿಧು ಮತ್ತು ಅವರ ಅನುಯಾಯಿಗಳು ಪ್ರತಿಭಟನೆಯ ವೇಳೆ ಸಮಸ್ಯೆ ಸೃಷ್ಟಿಸಿದರು ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ. ಕೆಂಪುಕೋಟೆಯ ಘಟನೆ ನಾಚಿಕೆಗೇಡಿನದ್ದು. ಹೋರಾಟದ ಆರಂಭದಲ್ಲಿ ಸಿಧು ಇರಲಿಲ್ಲ. ಆದರೆ, ನಿನ್ನೆ ನಡೆದ ಘಟನೆಯ ಜವಾಬ್ದಾರಿಯಿಂದ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೆಂಪುಕೋಟೆಯಲ್ಲಿ ನಡೆದುದರ ಬಗ್ಗೆ ವಿವರವಾದ ತನಿಖೆ ನಡೆಯಬೇಕೆಂದು ಅವರು ಆಗ್ರಹಿಸಿದರು.

ಸಿಧು ಬಿಜೆಪಿ ಏಜೆಂಟ್, ಸನ್ನಿ ಡಿಯೊಲ್‍ಗಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು ಎಂದು ರೈತ ಸಂಘಟನೆಗಳು ಆರೋಪಿಸಿವೆ. ಕಾಂಗ್ರೆಸ್ ಸಂಸದ ರಣ್‍ವೀಂದ್ ಸಿಂಗ್ ಬಿಟ್ಟು ಕೂಡ ಇದೇ ಆರೋಪವನ್ನು ಮಾಡಿದ್ದಾರೆ.