ಟ್ರಾವೆಲ್ ಏಜೆಂಟ್ ವಂಚನೆ: ಸೌದಿಯಲ್ಲಿ 19 ಮಂದಿ ಉಮ್ರಾ ಯಾತ್ರಿಕರು

0
277

ಜಿದ್ದ,ಮೇ 15: ಟ್ರಾವೆಲ್ ಏಜಂಟ್‍ನ ವಂಚನೆಗೆ ಬಿದ್ದು ಜಿದ್ದದಲ್ಲಿ ಬಾಕಿಯಾಗಿದ್ದ ಉಮ್ರಾ ಯಾತ್ರಿಕರ ಪ್ರಯಾಣ ಸಮಸ್ಯೆ ಪರಿಹರಿಸಿ ಊರಿಗೆ ಕಳುಹಿಸಲಾಗಿದೆ. ಸೌದಿ ಅರೇಬಿಯದ ಉಮ್ರಾ ಏಜೆನ್ಸಿ ಮರಳಲು ವಿಮಾನ ಟಿಕೆಟು ಒದಗಿಸಿದೆ. ಕೇರಳದ ಪಾಲಕ್ಕಾಡಿನ ಗ್ಲೋಬಲ್ ಗೈಡ್ ಟ್ರಾವೆಲ್ಸ್‍ನ ಅಡಿಯಲ್ಲಿ ಉಮ್ರ ನಿರ್ವಹಿಸಲು ಕೇರಳದಿಂದ 84 ಮಂದಿ ಪ್ರಯಾಣಿಸಿದ್ದರು. ಯಾತ್ರಿಕರನ್ನು ಹಂತ ಹಂತವಾಗಿ ಮಕ್ಕಾಕ್ಕೆ ಕಳುಹಿಸಲಾಯಿತು. ಆದರೆ ಟ್ರಾವೆಲ್ ಏಜೆಂಟ್ ಹೊಟೇಲು ಮತ್ತು ಪ್ರಯಾಣ ವೆಚ್ಚ ಭರಿಸದ್ದರಿಂದ ಯಾತ್ರಿಕರು ಮಕ್ಕದಲ್ಲಿ ಸಿಕ್ಕಿ ಬೀಳುವಂತಾಯಿತು. ಏಜೆನ್ಸಿ ಟಿಕೆಟ್ ಕ್ಯಾನ್ಸಲ್ ಮಾಡಿ ರೀಫಂಡ್ ಮಾಡಿದ್ದರಿಂದ ಭಾರತಕ್ಕೆ ಮರಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ದೂತವಾಸ ಮತ್ತು ಹಜ್ ಉಮ್ರಾ ಸಚಿವಾಲಯ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದೆ.

ಊರಿಗೆ ಬರಬೇಕಾಗಿದ್ದ ಸುಮಾರು 64 ಮಂದಿ ಈ ಹಿಂದೆಯೇ ಸ್ವಂತ ಖರ್ಚಿನಲ್ಲಿ ಮರಳಿದ್ದರು. ಯಾತ್ರಿಕರು ಹತ್ತು ಸಾವಿರ ರೂಪಾಯಿ ಕೊಡುತ್ತೇವೆ ಎಂದು ಹೇಳಿದರು. ಮಿಕ್ಕುಳಿದ ಟಿಕೆಟಿನ ಹಣವನ್ನು ಸೌದಿ ಅರೇಬಿಯದ ಏಜೆಂಟ್ ನೀಡಿದೆ. ಬುಧವಾರ ಏಜೆಂಟ್ ವಂಚನೆಗೊಳಾಗಿ ಬಾಕಿಯಾಗಿದ್ದ 19 ಮಂದಿ ಉಮ್ರಾ ಯಾತ್ರಿಕರು ಭಾರತಕ್ಕೆ ಹೊರಟಿದ್ದಾರೆ.