ಆರೆಸ್ಸೆಸ್ ನಿಷೇಧಕ್ಕೆ ಅಕಾಲ್ ತಖ್ತ್ ಮುಖ್ಯಸ್ಥರಿಂದ ಆಗ್ರಹ

0
658

ಸನ್ಮಾರ್ಗ ವಾರ್ತೆ

ಅಮೃತಸರ್,ಅ.16: ಸಿಖ್ ಸಮುದಾಯದ ಉನ್ನತ ಸಮಿತಿ ಅಕಾಲ್ ತಕ್ತ್ ಮುಖ್ಯಸ್ಥ ಗ್ಯಾನಿ ಹರ್‍ಪರೀತ್ ಸಿಂಗ್ ಆರೆಸ್ಸೆಸನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದು ಅದು ಮುಂದಿಡುವ ಹಿಂದೂ ರಾಷ್ಟ್ರ ದೇಶದ ಹಿತಕ್ಕೆ ವಿರುದ್ಧ ಎಂದು ಹೇಳಿದರು.

ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಕುರಿತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ವಿಜಯ ದಶಮಿ ಸಂದೇಶದಲ್ಲಿ ಹೇಳಿದ್ದರು. ಆರೆಸ್ಸೆಸ್ ದೇಶ ವಿಭಜಿಸುವ ಪ್ರವೃತ್ತಿಗೆ ಹೊರಟಿದೆ ಭಾರತದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರ ಸಹಿತ ವಿವಿಧ ಧರ್ಮೀಯರಿದ್ದಾರೆ. ಜನರಲ್ಲಿ ವಿವಿಧ ಭಾಷೆಯನ್ನಾಡುವವರಿದ್ದಾರೆ. ಇಂತಹ ದೇಶವನ್ನು ಹಿಂದೂ ರಾಷ್ಟ್ರ ಮಾಡುವುದಾಗಿ ಹೇಳುವುದು ದೇಶವನ್ನು ವಿಭಜಿಸುವ ಪ್ರವೃತ್ತಿಯಾಗಿದೆ ಎಂದು ಅಕಾಲ್ ತಕ್ತ್ ಮುಖ್ಯಸ್ಥರು ಹೇಳಿದರು.

ಮೋಹನ್ ಭಾಗವತ್ ಹೇಳಿಕೆ ವಿರುದ್ಧ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಅಧ್ಯಕ್ಷ ಗೋವಿಂದ್ ಸಿಂಗ್ ಲೋಂಗೊವಾಲ್ ಕೂಡ ಮಾತಾಡಿದ್ದಾರೆ. ಕೇಂದ್ರ ಸರಕಾರ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ ಕಠಿಣ ನಿಯಂತ್ರಣ ಹೇರಿದ್ದನ್ನೂ ಅಕಾಲ್ ತಕ್ತ್ ಮುಖ್ಯಸ್ಥರು ಟೀಕಿಸಿದರು.