ಅಕ್ಬರ್ ಹತ್ಯೆ ಹೇಗಾಯಿತು, ಊರವರು ಏನು ಹೇಳುತ್ತಾರೆ: ದಿ ವಯರ್ ಪ್ರತ್ಯಕ್ಷ ವರದಿ

0
1290

ವರದಿ :ಶ್ರುತಿ ಜೈನ್


ಕೊಲ್ಗಾಂವ್, ಹರ್ಯಾಣ: ರಾಜಸ್ತಾನದ ಆಲ್ವಾರ್ ನಲ್ಲಿ ಗೋರಕ್ಷಕರಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದವರಲ್ಲಿ ಅಕ್ಬರ್ ಖಾನ್ (28) ಮೂರನೆಯ ವ್ಯಕ್ತಿ. ರೈತ ವೃತ್ತಿಯಲ್ಲಿರುವ ಅಕ್ಬರ್ ಸಾವಿನ ಸುತ್ತ ಹಲವು ಊಹಾಪೋಹಗಳು ಮನೆ ಮಾಡಿದ್ದರೂ ಕೂಡ ಪ್ರಾಥಮಿಕ ತನಿಖೆಗಳು ಈಗಾಗಲೇ ಚುರುಕುಗೊಂಡಿವೆ. ರಾತ್ರಿ ಹೊತ್ತು ತಮ್ಮ ಹೊಲಗಳ ನಡುವೆ ಹಾದಿ ನಿರ್ಮಿಸಿದ್ದ ಹಸುಗಳ ಹಾಗೂ ಮಾನವರ ಹೆಜ್ಜೆ ಗುರುತುಗಳು ಅಲ್ಲಿನ ಗ್ರಾಮಸ್ಥರನ್ನು ನೆನೆಗೂದಿಗೆ ತಳ್ಳಿದ್ದುದ್ದರಿಂದ ಅಕ್ರಮ ಗೋಸಾಗಣೆ ಮಾಡತ್ತಿರುವುದಾಗಿ ಸಂಶಯಗೊಂಡು ಈ ಕುರಿತು ಗೋರಕ್ಷಕರಿಗೆ ಮಾಹಿತಿ ನೀಡಲಾಗಿತ್ತು. ಈ ಮಾಹಿತಿಯು ರೈತ ಹಾಗೂ ಹೈನುಗಾರ ವೃತ್ತಿಯನ್ನು ಮಾಡುತ್ತಿದ್ದ ಅಕ್ಬರ್ ಖಾನ್ ರವರ ಜೀವಕ್ಕೆ ಕುತ್ತು ತರುವುದೆಂದು ಅವರು ಊಹಿಸಿರಲಿಕ್ಕಿಲ್ಲ.

ಲಾಲ್ವಂಡಿಯ ಜನರ ಊಹೆಗಳ ಪ್ರಕಾರ ರಾತ್ರಿ ಹೊತ್ತು ಮಾಡುತ್ತಿರುವ “ಹಸುಗಳ ಹಾಗೂ ಮಾನವರ ಹೆಜ್ಜೆ ಗುರುತುಗಳು ಅಕ್ರಮ ಗೋಸಾಗಾಟದ್ದಾಗಿದ್ದು, ಇದು ಮುಸ್ಲಿಮರ ಕೃತ್ಯ, ಅವರು ಹಸುಗಳನ್ನು ಮಾಂಸಕ್ಕಾಗುಯೇ ಕೊಲ್ಲುತ್ತಿದ್ದಾರೆ” ಎಂಬ ಭಾವನೆಯು ಮನೆ ಮಾಡಿತ್ತು. ದೆಹಲಿಯ 125 ಕಿಲೋ ಮೀಟರ್ ದೂರದಲ್ಲಿರುವ ಬರೇಲಿಯಲ್ಲಿ ಈ ಸಂಶಯಗಳು ಮೊಳಕೆಯೊಡೆಯುತ್ತಿರುವುದು ವಿಶ್ವ ಹಿಂದು ಪರಿಷದ್ ಕಿವಿಗೂ ಬಿತ್ತು. ಇದರ ಪರಿಣಾಮ ಅಕ್ಬರ್‍ ನ ಹತ್ಯೆ.

ದಿ ವಯರ್ ಜೊತೆಗೆ ಮಾತನಾಡಿದ ಲಾಲ್ವಾಡಿಯ ಹೊಲದ ಮಾಲಿಕರು ತಮ್ಮ ಹೊಲಗಳ ನಡುವೆ ಹಸುಗಳು ಮತ್ತು ಮನುಷ್ಯರು ನಡೆದು ಹೋಗುತ್ತಿರುವ ಕಾಲು ದಾರಿಗಳ ಕುರಿತು ಗೋ ರಕ್ಷಕರಿಗೆ ಮಾಹಿತಿ ನೀಡಿದ್ದರು. ರೈತರಿಗೆ ಇದು ಜಾನುವಾರುಗಳ ಕಳ್ಳಸಾಗಾಣಿಕೆಯ ಕೃತ್ಯ ಎಂಬ ಬಲವಾದ ಸಂಶಯವಿತ್ತು.
“ ಅವರು ಹದಿನಾಲ್ಕು ದಿನಗಳಿಂದ ನಮ್ಮ ಹೊಲಗಳ ನಡುವೆ ಹಸುಗಳನ್ನು ಕೊಂಡುಹೋಗುತ್ತಿದ್ದರು. ಹೊಲದಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿ ಅವರು ಹಸುಗಳನ್ನು ಕೊಂಡೊಯ್ಯುತ್ತಿದ್ದರು.º ಹಲವು ದಿನಗಳಿಂದ ಹೊಲದ ನಡುವೆ ಕಾಲು ದಾರಿ ನಿರ್ಮಾಣವಾಗಿತ್ತಾದರೂ ಅವರನ್ನು ತಡೆದು ನಿಲ್ಲಿಸಿ ಪ್ರಶ್ನಿಸುವ ಧೈರ್ಯ ಯಾರಲ್ಲೂ ಇರಲಿಲ್ಲ” ಎಂದು ಸ್ಥಳೀಯರಾದ ಗಜ ರಾಜ್ ಯಾದವ್ ಹೇಳುತ್ತಾರೆ. ಇನ್ನೋರ್ವ ಗ್ರಾಮಸ್ಥರು ಹಾಗೂ ಅಕ್ಬರ್ ಮೇಲೆ ಗುಂಪು ಥಳಿತ ನಡೆದ ಹೊಲದ ಮಾಲಿಕ ಹೇಳುವ ಪ್ರಕಾರ “ಆದುದರಿಂದಲೇ ನಾವು ಗೋ ರಕ್ಷಕರಿಗೆ ಮಾಹಿತಿ ನೀಡಿದ್ದೆವು. ಯಾಕೆಂದರೆ ದನಗಳ್ಳರನ್ನು ಹಿಡಿಯಲು ನಮ್ಮ ಹೊಲದ ಗಡಿಗಳೇ ಕೊನೆಯವುಗಳು. ನಮ್ಮ ಹೊಲಗಳ ನಂತರ ಮುಸ್ಲಿಮರ ಹೊಲಗಳಿವೆ. ಅವರು ಅಲ್ಲಿ ಬಹಿರಂಗವಾಗಿ ಮಾಂಸ ಮಾರಾಟ ಗೈದರೂ ಅದನ್ನು ನಿಮಗೆ ಪ್ರಶ್ನಿಸುವ ಅಧಿಕಾರವಿರುವುದಿಲ್ಲ” ಎನ್ನುತ್ತಾರೆ.

ದನಗಳನ್ನು ಕೊಂಡೊಯ್ಯುತ್ತಿರುವವರು ಮುಹಮ್ಮದಿಯನ್ನರು ಹೌದೋ ಅಲ್ಲವೋ ಎಂಬುದನ್ನು ತಿಳಿಯಲು ಗೋ ರಕ್ಷಕರು ನಮ್ಮ ಹೊಲಗಳ ನಡುವೆ ಕಾದು ಕುಳಿತರು. ಕಾನ್ಪುರ್ ನಿಂದ ಎರಡು ಹಸುಗಳನ್ನು ಹಿಡಿದುಕೊಂಡು ತನ್ನ ಹಳ್ಳಿಯತ್ತ ಹೆಜ್ಜೆ ಹಾಕುತ್ತಿದ್ದ ಅಕ್ಬರ್ ಗಾಗಲಿ ಆತನ ಗೆಳೆಯ ಅಸ್ಲಮ್ ಗಾಗಲಿ ಇದಾವುದರ ಪರಿವೆಯೇ ಇರಲಿಲ್ಲ. ‘ನಮ್ಮ ಹೊಲಗಳ ನಡುವಿನಿಂದ ಹಸುಗಳನ್ನು ಕೊಂಡೊಯ್ಯುತ್ತಿದ್ದ ಅಕ್ಬರ್ ನನ್ನು ಕಾದು ಕುಳಿತ ಗೋರಕ್ಷಕರು ಹಿಗ್ಗಾಮುಗ್ಗಾ ಥಳಿಸಲಾರಂಭಿಸಿದರು. ದನಗಳ್ಳತನದ ಕುರಿತು ಪೋಲಿಸರಿಗೆ ಮಾಹಿತಿ ನೀಡುವಷ್ಟು ಸಮಯ ಅಕ್ಬರ್ ಜೀವಂತವಿದ್ದರು. ಪೋಲಿಸರು ನಂತರ ಆತನನ್ನು ತಮ್ಮ ಜೀಪಿನಲ್ಲಿ ಕೂರಿಸುವಾಗಲೂ ಆತ ಜೀವಂತವಿದ್ದನು. ಆದರೆ ನಂತರ ಆತ ಸಾವನ್ನಪ್ಪಿದನು’ ಎಂದು ಯಾದವ್ ಹೇಳುತ್ತಾರೆ. ಆದರೆ ಅಸ್ಲಮ್ ಹೇಗೋ ಅವರ ಕೈಯಿಂದ ತಪ್ಪಿಸಿಕೊಂಡು ಮುಂಜಾವಿನ ವೇಳೆ ಕೊಲ್ಗಾಂವ್ ತಲುಪಿದರು.
ಆದರೆ ವಾಸ್ತವಿಕತೆಯನ್ನು ಗಮನಿಸುವಾಗ ಅಕ್ಬರ್ ನನ್ನು ಥಳಿಸಿದ ಗೋ ರಕ್ಷಕರ ಗುಂಪು ಆತ ಪೋಲಿಸ್ ಗಾಡಿಯಲ್ಲಿ ಸಾವನ್ನಪ್ಪಿರುವುದರಿಂದ ಅದನ್ನು ಪೋಲಿಸರ ತಲೆಗೆ ಕಟ್ಟಿ ತಾವು ನಿರಪರಾಧಿಗಳು ಎಂಬುದನ್ನು ಸಾಬೀತು ಪಡಿಸಲು ಯತ್ನಿಸುತ್ತಿದ್ದಾರೆ.

ರಾಮಗ್ರಹದ ವಿಶ್ವ ಹಿಂದು ಪರಿಷದ್ ನ ಗೋ ರಕ್ಷಕ್ ಸೆಲ್ ನ ಮುಖಂಡರಾದ ನವಲ್ ಕಿಶೋರ್ ಶರ್ಮಾ ಪೋಲಿಸರಿಗೆ ನಡೆದ ಘಟನೆಯನ್ನು ತಿಳಿಸಿದ್ದರಾದರೂ ತದನಂತರ ಸ್ಥಳೀಯರ ಸಹಾಯದಿಂದ ಅಕ್ಬರ್‍ ನ ಬಟ್ಟೆಗಳನ್ನು ಬದಲಾಯಿಸಿರುವುದಾಗಿ ಹೇಳಿದ್ದಾರೆ. ಇದಲ್ಲದೇ ಪೋಲಿಸರ ಜೀಪಿನಲ್ಲಿ ಕುಳಿತಾಗ ಅಕ್ಬರ್ ಸರಿಯಾಗಿಯೇ ಇದ್ದರು. ಅವರ ಮೇಲೇ ಯಾವುದೇ ರೀತಿಯ ಗಾಯಗೊಂಡ ಗುರುತುಗಳಿರಲಿಲ್ಲ ಎಂಬುದನ್ನು ತಿಳಿಸಲು ಮತ್ತು ಆತನ ಮೇಲೆ ಹಲ್ಲೆ ನಡೆಸಿಲ್ಲವೆಂಬುದಾಗಿ ಬಿಂಬಿಸಲು ಅಕ್ಬರ್ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಆದರೆ ಈ ಮಾಹಿತಿ ನೀಡಿದ ಅವರೇ ಅದನ್ನು ತದನಂತರ ನಿರಾಕರಿಸಿದ್ದಾರಲ್ಲದೇ ಅಕ್ಬರ್ ನನ್ನು ಸ್ಥಳೀಯ ಪೋಲಿಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಆದರೆ ಆತನ್ನು ಸುಮಾರು ನಾಲ್ಕು ಗಂಟೆಯ ಮುಂಜಾವಿನ ವೇಳೆ ಆಸ್ಪತ್ರೆಗೆ ಕರೆತರಲಾಯ್ತು ಎನ್ನುತ್ತಾರೆ.
ಅಕ್ಬರ್ ಗೆ ಚಿಕಿತ್ಸೆ ಕೊಡಿಸುವ ಮುಂಚೆ ಎರಡು ಹಸುಗಳನ್ನು ಗೋಶಾಲೆಗಳಿಗೆ ಸಾಗಿಸಲಾಗಿರುವ ಕುರಿತು ಪೋಲಿಸರು ಒಪ್ಪಿಕೊಂಡಿದ್ದಾರಾದರೂ ಅಕ್ಬರನ ಮೈ ಮೇಲಿದ್ದ ಕೆಸರನ್ನು ತೊಳೆದುದರ ಕುರಿತಾಗಲಿ ಆತನ ಬಟ್ಟೆಗಳನ್ನು ಬದಲಾಯಿಸಿರುವುದರ ಕುರಿತಾಗಲಿ ಸಮ್ಮತಿ ಸೂಚಿಸಿಲ್ಲ.

ಇದಲ್ಲದೇ ಅಕ್ಬರ್ ನನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ, ಪೋಲಿಸ್ ಠಾಣೆಗೆ ಕರೆದೊಯ್ದಿಲ್ಲ. ಕಟ್ಟು ಕತೆಗಳನ್ನು ಕಟ್ಟುವವರು ಕಟ್ಟಿಕೊಳ್ಳಲಿ ಎಂದು ಸಬ್ ಇನ್ಸೆಕ್ಟರ್ ಸುಭಾಷ್ ಚಂದ್ರ ಹೇಳುತ್ತಾರೆ. ಆದರೆ ರಾಮಗ್ರಹ್ ಸ್ಥಳೀಯ ಹೆಲ್ತ್ ಸೆಂಟರ್ ನಲ್ಲಿ ಅಕ್ಬರನನ್ನು ಕರೆ ತರುವಾಗ ಆತ ಅದಾಗಲೇ ಸಾವನ್ನಪ್ಪಿದ್ದನು ಎಂದು ಡಾ.ಹಸನ್ ಅಲಿ ಖಾನ್ ಹೇಳುತ್ತಾರೆ. ಅಕ್ಬರ್ ನನ್ನು ಆಸ್ಪತ್ರೆಗೆ ಕರೆತಂದಾಗ ನಾಲ್ಕು ಗಂಟೆಯಾಗಿತ್ತು. ನನಗೆ ಪೋಸ್ಟ್ ಮಾರ್ಟಮ್ ಮಾಡಲು ಹೇಳಲಾಯ್ತಾದರೆ ಅದನ್ನು ಆಲ್ವಾರ್ ನಲ್ಲಿ ಮಾಡಲಾಗುತ್ತದೆ ಎಂದು ನಾನು ತಿಳಿಸಿದೆ. ಅಕ್ಬರ್ ನನ್ನು ಪರೀಕ್ಷಿಸುವಾಗ ಆತನ ಬಟ್ಟೆಗಳು ಒಣಗಿದ್ದವು. ಆತನ ಬಟ್ಟೆಗಳ ಮೇಲೆ ಹಲ್ಲೆಯ ಯಾವುದೇ ಗುರುತುಗಳು ಸಿಗುತ್ತಿರಲಿಲ್ಲ. ಆತನ ಬಟ್ಟೆಗಳನ್ನು ಬದಲಾಯಿಸಿ ಬೇರೆ ಬಟ್ಟೆಗಳನ್ನು ತೊಡಿಸಲಾಗಿದೆ ಎಂಬುದು ಇದರಿಂದ ತಿಳಿಯಬಹುದು ಎಂದು ಡಾ. ಖಾನ್ ತಿಳಿಸಿದ್ದಾರೆ.

ಅಕ್ಬರ್ ಕುಟುಂಬಕ್ಕೆ ಆತನ ಮರಣದ ಕುರಿತು ಸುದ್ದಿಯನ್ನು ಬೆಳಿಗ್ಗೆ ಏಳು ಗಂಟೆಗೆ ತಿಳಿಸಲಾಯ್ತು ಎಂದು ಆತನ ಸಂಬಂಧಿಕರಲ್ಲೋರ್ವರಾದ ಹಾರೂನ್ ಖಾನ್ ತಿಳಿಸಿದ್ದಾರೆ.
“ಅಕ್ಬರ್ ನ ಶರೀರವನ್ನು ಅಂತ್ಯಕ್ರಿಯೆಯ ವೇಳೆ ಸ್ನಾನ ಮಾಡಿಸುವಾಗ ಆತನ ಕೈ , ಕಾಲು ಹಾಗೂ ಆತನ ಕುತ್ತಿಗೆಯ ಎಲುಬುಗಳು ಮೂರು ನಾಲ್ಕು ಕಡೆಗಳಲ್ಲಿ ಮುರಿದಿರುವುದನ್ನು ನಾವು ಗಮನಿಸಿದ್ದೇವೆ. ಆತನನ್ನು ಅವರು ಅತಿ ಭೀಕರವಾಗಿ ಥಳಿಸಿ ಸಾಯಲು ಬಿಟ್ಟಿದ್ದಾರೆ” ಎನ್ನುತ್ತಾರೆ.

ಅಲ್ಲಿಂದ ತಪ್ಪಿಸಿ ಕೊಂಡು ಪಾರಾಗಿ ಬಂದ ಅಸ್ಲಮ್ ಪೋಲಿಸರಿಗೆ ಹೇಳಿಕೆಯನ್ನು ನೀಡಿದ್ದಾನಾದರೆ ವರದಿಗಾರರ ಬಳಿ ಹೇಳಿಕೆ ನೀಡಿಲ್ಲ. ಅಕ್ಬರ್ ನ ಭೀಕರ ಸಾವಿನ ನಂತರ ಆತ ಜನರೊಂದಿಗೆ ಕಡಿಮೆ ಮಾತನಾಡುತ್ತಾನೆ. ಆತ ಈಗಲೂ ಭಯಭೀತನಾಗಿಯೇ ಇದ್ದಾನೆ. ಅಕ್ಬರ್ ನನ್ನು ಒಂಟಿಯಾಗಿಸಿ ಓಡಿ ಬಂದ ಮೇಲೆ ಆತ ಸಾವನ್ನಪ್ಪಿದ್ದನ್ನು ತಿಳಿದು ಈಗಲೂ ಆತ ಭಯಭೀತನಾಗದ್ದಾನೆ” ಎಂದು ಅಕ್ಬರ್ ನ ಅಳಿಯ ಉಮರ್ ಮುಹಮ್ಮದ್ ತಿಳಿಸಿದ್ದಾರೆ.
ಟ್ರಿಬ್ಯೂನ್ ಅಸ್ಲಮ್ ನನ್ನು ಗುರುಗಾಂವ್ ನಲ್ಲಿ ಭೇಟಿಯಾಗುವಲ್ಲಿ ಯಶಸ್ವಿಯಾಯಿತಲ್ಲದೇ ಅಕ್ಬರ್ ನನ್ನು ಥಳಿಸಿದ ಗುಂಪಿಗೆ ಸ್ಥಳೀಯ ಬಿಜೆಪಿ ಎಮ್ ಎಲ್ ಎ ಆದ ಗ್ಯಾನ್ ದೇವ್ ಅಹುಜಾರವರ ಬೆಂಬಲವಿದೆ ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಅಹುಜಾ ಬಹಿರಂಗವಾಗಿ ಪ್ರೋತ್ಸಾಹ ಹಲ್ಲೆಕೋರರಿಗೆ ನೀಡಿರುವುದು ಇದಕ್ಕೆ ಪುಷ್ಟಿ ನೀಡಿದೆ.