ಮುಸ್ಲಿಮರಿಗೆ ಹೆಚ್ಚು ಟಿಕೆಟು ನೀಡದಂತೆ ಅಖಿಲೇಶ್ ಯಾದವ್ ನೋಡಿಕೊಂಡರು- ಮಾಯಾವತಿ

0
473

ಲಕ್ನೊ, ಜೂ. 24: ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ ಅಖಿಲೇಶ್‍ ರ ವಿರುದ್ಧ ಕಟು ಟೀಕಾ ಪ್ರಹಾರ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟು ಹೆಚ್ಚು ನೀಡುವುದು ಬಯಸುತ್ತಿರಲಿಲ್ಲ. ಇದರಿಂದ ವೋಟು ಧ್ರುವೀಕರಣಗೊಂಡು ಬಿಜೆಪಿಗೆ ಲಾಭವಾಗುತ್ತದೆ ಎಂದು ಅವರು ಹೇಳುತ್ತಿದ್ದರು. ಈ ನಿಲುವಿನಿಂದಾಗಿ ಬಿಸ್‍ಎಪಿ ಸಮಾಜವಾದಿ ಪಕ್ಷದ ನಡುವಿನ ಸಖ್ಯದ ಎಲ್ಲ ದಾರಿ ಮುಚ್ಚಿಹೋಗಿದೆ ಎಂದು ಮಾಯಾವತಿ ಹೇಳಿದ್ದಾರೆ.

ಮಾಯಾವತಿ ಸಮಾಜವಾದಿ ಪಾರ್ಟಿಯೊಂದಿನ ಸಖ್ಯ ಮುರಿದ ಕುರಿತ ಕಾರಣಗಳನ್ನು ಲಕ್ನೊದಲ್ಲಿ ನಡೆದ ಬಿಎಸ್‍ಪಿ ರಾಷ್ಟ್ರೀಯ ಬೈಠಕ್‍ನಲ್ಲಿ ಒಂದೊಂದಾಗಿ ಬಿಡಿಸಿಟ್ಟರು. ಮೇ 23ರ ಮತ ಎಣಿಕೆಯ ದಿನ ಅಖಿಲೇಶ್ ಫೋನ್ ಮಾಡಿದ್ದರು. ನಂತರ ಅವರು ಸಖ್ಯ ಮುರಿದುಕೊಂಡ ಜೂನ್ 3 ತಾರೀಕಿನವರೆಗೆ ಫೋನ್ ಮಾಡಿಲ್ಲ. ಅಖಿಲೇಶ್ ಮುಸ್ಲಿಮರಿಗೆ ಹೆಚ್ಚು ಟಿಕೆಟು ನೀಡಬಾರದೆಂದು ಹೇಳಿದರು. ಆದರೆ ಮುಸ್ಲಿಮರಿಗೆ ಹೆಚ್ಚು ಟಿಕೆಟು ಕೊಟ್ಟರೆ ಸಖ್ಯಕ್ಕೆ ಹೆಚ್ಚು ಪ್ರಯೋಜನವಾಗಬಹುದು ಎಂದು ತಾನು ಹೇಳಿದ್ದೆ ಎಂದು ಮಾಯಾವತಿ ಹೇಳಿದರು.

ಅವರು ಲೋಕಸಭಾ ಚುನಾವಣೆಯ ಸೋಲಿನ ಎಲ್ಲ ಹೊಣೆಯನ್ನು ಸಮಾಜವಾದಿ ಪಾರ್ಟಿಯ ತಲೆಗೆ ಹೊರಿಸಿದ್ದಾರೆ. ಯಾದವರು ಸಖ್ಯಕ್ಕೆ ಮತಹಾಕಿಲ್ಲ. ಒಳಗೊಳಗೆ ಮೋಸ ನಡೆಯುತ್ತಿತ್ತು. ಅವರ ವಿರುದ್ಧ ಅಖಿಲೇಶ್ ಯಾವುದೇ ಕ್ರಮವನ್ನು ಜರಗಿಸಲಿಲ್ಲ. ಒಂದು ವೇಳೆ ಯಾದವರ ಓಟುಗಳು ಸಿಕ್ಕಿದ್ದರೆ ಸಮಾಜವಾದಿ ಪಾರ್ಟಿ ಬದಾಯೂ, ಫಿರೋಝಾಬಾದ್ ಮತ್ತು ಕನೌಜ್‍ನಲ್ಲಿ ಸೋಲಲು ಸಾಧ್ಯವಿರಲಿಲ್ಲ. ಯಾದವರ ಹೆಚ್ಚಿನ ಮತಗಳು ಬಿಜೆಪಿಗೆ ವಲಸೆ ಹೋಗಿದೆ ಎಂದು ಮಾಯಾವತಿ ಹೇಳಿದರು.