ಅಲ ಹಾಲ್ ನಿರಾಶ್ರಿತ ಶಿಬಿರಕ್ಕೆ ಪೂರ್ವ ಸಿರಿಯಾದಿಂದ ಬರುತ್ತಿದ್ದ 60 ಮಕ್ಕಳ ಸಾವು: 2018 ಸಿರಿಯಾದ ಮಕ್ಕಳ ಪಾಲಿಗೆ ಭಯಾನಕ

0
594

ಇಸ್ತಾಂಬುಲ್: ಸಿರಿಯಾದಲ್ಲಿನ ನಾಗರಿಕ ಯುದ್ಧವು ಒಂಬತ್ತನೇ ವರ್ಷಕ್ಕೆ ಪ್ರವೇಶಿಸಿದಂತೆಯೇ 2018 ರಲ್ಲಿ ಸಿರಿಯಾದಲ್ಲಿ ಅತಿ ಹೆಚ್ಚಿನ ಸಾವುನೋವು ಸಂಭವಿಸಿದೆ ಎಂದು ಮಕ್ಕಳಿಗಾಗಿರುವ ವಿಶ್ವಸಂಸ್ಥೆ ಯ ಅಂಗ ಸಂಸ್ಥೆಯಾದ ಯೂನಿಸೆಫ್ ಘೋಷಿಸಿದೆ. ಎಂಟು ವರ್ಷಗಳ ಸಂಘರ್ಷದ ಸಮಯದಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಮಕ್ಕಳು ಹೆಚ್ಚು ಅಪಾಯಕ್ಕೆ ಸಿಲುಕಿದ್ದಾರೆ” ಎಂದು UNICEF ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟ್ಟ ಫೋರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2018 ರಲ್ಲಿ, 1,106 ಮಕ್ಕಳು ಸಂಘರ್ಷಕ್ಕೆ ಬಲಿಯಾದರು. “ಇದು ವಿಶ್ವಸಂಸ್ಥೆಯಿಂದ ಪರಿಶೀಲಿಸಲು ಸಾಧ್ಯವಾದ ಸಂಖ್ಯೆಗಳು ಮಾತ್ರ, ಅಂದರೆ ನಿಜವಾದ ಅಂಕಿ ಅಂಶಗಳು ಇನ್ನೂ ಹೆಚ್ಚಾಗಿವೆ” ಎಂದು ಅವರು ಹೇಳಿದರು. 2018 ರಲ್ಲಿ ಶಿಕ್ಷಣ ಮತ್ತು ಆಸ್ಪತ್ರೆಗಳ ಮೇಲೆ 262 ದಾಳಿಗಳನ್ನು ನಡೆಸಲಾಗಿದೆಯೆಂದು ಅವರು ಹೇಳಿದರು. ವಾಯುವ್ಯ ಸಿರಿಯಾದಲ್ಲಿನ ಇಡ್ಲಿಬ್ ನಲ್ಲಿನ ಪರಿಸ್ಥಿತಿ ಬಗ್ಗೆ ಅವರು ಕಳವಳವನ್ನು ವ್ಯಕ್ತಪಡಿಸಿದರು. “ಕಳೆದ ಕೆಲವು ವಾರಗಳಲ್ಲಿ 59 ಮಕ್ಕಳು ಹತ್ಯೆಗೊಳಗಾಗಿದ್ದಾರೆ. “ಮಕ್ಕಳು ಮತ್ತು ಕುಟುಂಬಗಳು ನಿರ್ಜನ ಪ್ರದೇಶವಾದ ಲಿಂಬೊದಲ್ಲಿ ವಾಸಿಸುವುದನ್ನು ಮುಂದುವರಿಸಿದ್ದಾರೆ. ಜೋರ್ಡಾನ್ ಗಡಿಯ ಬಳಿ ರುಖ್ಬಾನ್ ನಲ್ಲಿರುವ ಕುಟುಂಬಗಳ ಪರಿಸ್ಥಿತಿ ಆಹಾರ, ನೀರು, ಆಶ್ರಯ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಸೀಮಿತ ಅವಕಾಶದೊಂದಿಗೆ ಹತಾಶವಾಗಿ ಮುಂದುವರಿದಿದೆ ಎಂದು ಅವರು ಹೇಳಿದರು.

ಅಲ್ ಹಾಲ್ ಶಿಬಿರದಲ್ಲಿ ಬಿಗಡಾಯಿಸುತ್ತಿರುವ ಪರಿಸ್ಥಿತಿ

ಯೂನಿಸೆಫ್ ನ ನಿರ್ದೇಶಕರು ಈ ಮೊದಲೇ ಈಶಾನ್ಯದ ಅಲ್ ಹಾಲ್ ಶಿಬಿರದ ಹದಗೆಟ್ಟ ಪರಿಸ್ಥಿತಿ ಕುರಿತು ಎಚ್ಚರಿಸಿದ್ದರು ,ಈಗ ಅಂದಾಜು 65,000 ಕ್ಕೂ ಹೆಚ್ಚಿನ ಜನರಿಗೆ ಈ ಶಿಬಿರ ಮನೆಯಾಗಿದೆ. “ಈ ವರ್ಷದ ಜನವರಿಯಿಂದ, ಸುಮಾರು 60 ಮಕ್ಕಳು ಬಗೌಝ್ ನಿಂದ [ಪೂರ್ವ ಸಿರಿಯಾದಿಂದ ] ಈ ಶಿಬಿರಕ್ಕೆ 300 ಕಿಲೋಮೀಟರ್ ಟ್ರೆಕ್ ಪ್ರಯಾಣ ಮಾಡುವ ವೇಳೆ ಸಾವನ್ನಪ್ಪಿದ್ದಾರೆ.