ಅಲ್ ಜಝೀರಾ ಪತ್ರಕರ್ತ ಮಹಮೂದ್ ಹುಸೈನ್ ಈಜಿಪ್ಟ್ ಜೈಲಿನಿಂದ ಬಿಡುಗಡೆ

0
6145

ಸನ್ಮಾರ್ಗ ವಾರ್ತೆ

ಈಜಿಪ್ಟ್: ಯಾವುದೇ ಔಪಚಾರಿಕ ಆರೋಪ ಹಾಗೂ ವಿಚಾರಣೆಯಿಲ್ಲದೆ ಸತತ ನಾಲ್ಕು ವರ್ಷಗಳಿಗಿಂತಲೂ ಹೆಚ್ಚು ಕಾಲ ಬಂಧನದಲ್ಲಿದ್ದ ಅಲ್ ಜಝೀರಾ ಪತ್ರಕರ್ತ ಮಹಮೂದ್ ಹುಸೇನ್ ಅವರನ್ನು ಈಜಿಪ್ಟ್ ಬಿಡುಗಡೆ ಮಾಡಿದೆ.

ಡಿಸೆಂಬರ್ 2016 ರಿಂದ ಬಂಧನದಲ್ಲಿದ್ದ ಈಜಿಪ್ಟ್ ಪ್ರಜೆಯಾದ ಹುಸೇನ್ ಅವರನ್ನು ಶನಿವಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ.

ಅಲ್ ಜಝೀರಾ ಮೀಡಿಯಾ ನೆಟ್‌ವರ್ಕ್‌ನ ಆಕ್ಟಿಂಗ್ ಡೈರೆಕ್ಟರ್ ಜನರಲ್ ಮುಸ್ತೆಫಾ ಸೌಗ್‌ರವರು, ಹುಸೇನ್ ಬಿಡುಗಡೆಯನ್ನು ಉದ್ದೇಶಿಸಿ “ಸತ್ಯದ ಒಂದು ಕ್ಷಣ ಮತ್ತು ಪತ್ರಿಕಾ ಸ್ವಾತಂತ್ರ್ಯದ ಕಡೆಗೆ ಸ್ಪೂರ್ತಿದಾಯಕ ಮೈಲಿಗಲ್ಲು” ಎಂದು ಹೇಳಿದರು.

“ಅಲ್ ಜಝೀರಾ ಮೀಡಿಯಾ ನೆಟ್ವರ್ಕ್ ಮಹಮ್ಮದ್ ಅವರ ಸ್ವಾತಂತ್ರ್ಯದ ಸುದ್ದಿಯನ್ನು ಸ್ವಾಗತಿಸುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಮಹಮೂದ್ ತಮ್ಮ ವೃತ್ತಿಯನ್ನು ನಿರ್ವಹಿಸಿದ್ದಕ್ಕಾಗಿ ಅನುಭವಿಸಿದ ಸಂಕಷ್ಟಗಳನ್ನು ಮುಂದೆ ಯಾವ ಪತ್ರಕರ್ತನೂ ಅನುಭವಿಸುವಂತಾಗದಿರಲಿ” ಎಂದು ಅವರು ಹೇಳಿದರು.