ಅಮೆರಿಕ-ಅಫ್ಘಾನ್ ಜಂಟಿ ದಾಳಿಯಲ್ಲಿ ಅಲ್‍ಕಾಯಿದಾ ದಕ್ಷಿಣ ಏಷ್ಯಾ ಕಮಾಂಡರ್ ಹತ್ಯೆ- ವರದಿ

0
133

ಸನ್ಮಾರ್ಗ‌ ವಾರ್ತೆ

ಕಾಬೂಲ್,ಅ. 9:ಅಮೆರಿಕ-ಅಫ್ಘಾನ್ ಜಂಟಿ ದಾಳಿಯಲ್ಲಿ ಅಲ್‍ಕಾಯಿದಾ ದಕ್ಷಿಣ ಏಷ್ಯ ಕಮಾಂಡರ್‌ಅನ್ನು ಹತ್ಯೆಮಾಡಲಾಗಿದೆ ಎಂದು ವರದಿಯಾಗಿದೆ. ಅಲ್‍ಕಾಯಿದಾ ಇಂಡಿಯನ್ ಸಬ್‍ಕಾಂಂಟಿನೇಟಲ್ ವಿಂಗ್ ಕಮಾಂಡರ್ ಅಸಿಂ ಉಮರ್ ಅಪ್ಘಾನಿಸ್ತಾನದಲ್ಲಿ ಹತ್ಯೆಯಾದನು.

ದಕ್ಷಿಣ ಅಫ್ಘಾನಿನ ಮೂಸಾ ಕ್ವಾಲ ಜಿಲ್ಲೆಯಲ್ಲಿ ಸೆಪ್ಟಂಬರ್ 23ಕ್ಕೆ ಅಮೆರಿಕ ಸೇನೆಯ ನೇತೃತ್ವದಲ್ಲಿ ದಾಳಿ ನಡೆದಿದ್ದು ಆರು ಮಂದಿ ಅಲ್‍ಕಾಯಿದಾ ಭಯೋತ್ಪಾದಕರು ಕೊಲೆಯಾದರು, ಇವರಲ್ಲಿ ಹೆಚ್ಚಿನವರು ಪಾಕಿಸ್ತಾನದ ಪ್ರಜೆಗಳು, ಆಸಿಂ ಉಮರ್ ಕೂಡ ಪಾಕಿಸ್ತಾನದ ಪ್ರಜೆಯಾಗಿದ್ದಾನೆ. ಆದರೆ ಈತ ಭಾರತದಲ್ಲಿ ಹುಟ್ಟಿದ್ದ ಎಂದು ವರದಿಯಿದೆ ಎಂದು ಅಫ್ಘಾನ್ ರಾಷ್ಟ್ರೀಯ ಸುರಕ್ಷಾ ಏಜೆನ್ಸಿ ತಿಳಿಸಿದೆ.

ಸೆಪ್ಟಂಬರ್ 22, 23 ತಾರೀಕಿನಲ್ಲಿ ಅಮೆರಿಕದ ವಾಯುಸೇನೆಯ ಬೆಂಬಲದಲ್ಲಿ ಅಫ್ಘಾನ್ ಸೇನೆ ದಾಳಿ ಮಾಡಿತು. ಈ ದಾಳಿಯಲ್ಲಿ ಮಕ್ಕಳ ಸಹಿತ 40 ಮಂದಿ ಸಾಮಾನ್ಯ ಪ್ರಜೆಗಳು ಕೂಡ ಹತ್ಯೆಯಾದರು. ಅಸಿಂ ಉಮರ್ ಹತ್ಯೆಯ ವರದಿಯನ್ನು ತಾಲಿಬಾನ್ ತಿರಸ್ಕರಿಸಿದ್ದು, ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಮಾನ್ಯ ಪ್ರಜೆಗಳು ಕೊಲೆಯಾದರು ಮತ್ತು ಗಾಯಗೊಂಡರು. ಇದನ್ನು ಮುಚ್ಚಿಡಲು ಅಸಿಂ ಉಮರ್ ಹತ್ಯೆಯಾಗಿದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ತಾಲಿಬಾನ್ ಆರೋಪಿಸಿದೆ.