ಭ್ರಷ್ಟಾಚಾರ: ಅಲ್ಜೀರಿಯದ ಇಬ್ಬರು ಮಾಜಿ ಪ್ರಧಾನಿಗಳಿಗೆ ಶಿಕ್ಷೆ

0
491

ಸನ್ಮಾರ್ಗ ವಾರ್ತೆ-

ಅಲ್ಜಿಯರ್ಸ್, ಡಿ. 11: ಅಲ್ಜೀರಿಯದ ಭ್ರಷ್ಟಾಚಾರದ ಪ್ರಕರಣದಲ್ಲಿ ಇಬ್ಬರು ಮಾಜಿ ಪ್ರಧಾನಿಗಳಿಗೆ ಕೋರ್ಟಿನಲ್ಲಿ ಶಿಕ್ಷೆಯಾಗಿದೆ. ಅಹ್ಮದ್ ಔಯಾಹಿಯರಿಗೆ ಹದಿನೈದು ವರ್ಷ ಜೈಲು, 16000 ಡಾಲರ್ ದಂಡ ವಿಧಿಸಲಾಗಿದೆ. ಅಬ್ದುಲ್ ಮಾಲಿಕ್ ಸೆಲ್ಲಾಲ್‍ರಿಗೆ 12 ವರ್ಷ ಜೈಲು, 8000 ಡಾಲರ್ ದಂಡ ವಿಧಿಸಿ ತೀರ್ಪು ಬಂದಿದೆ. ಇಬ್ಬರೂ ಅಲ್ಜೀರಿಯದ ಮಾಜಿ ಪ್ರಧಾನಿಗಳಾಗಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿದ ದೇಶದ ಸಂವಿಧಾನವನ್ನು ಪುನರ್ರಚಿಸಬೇಕೆಂದು ಹೋರಾಟ ಮಾಡಿದವರಿಗೆ ಈ ರೀತಿ ಗೆಲುವು ಸಿಕ್ಕಂತಾಗಿದ್ದು ಅಲ್ಜೀರಿಯದಲ್ಲಿ 20 ವರ್ಷ ಅಬ್ದುಲ್ ಅಝೀಝ್ ಭುತಪ್ಲಿಕರ ಸರಕಾರ ಇತ್ತು.

ಅವರ ರಾಜೀನಾಮೆ ಬಳಿಕ ಇತ್ತೀಚೆಗೆ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಅದರ ಬೆನ್ನಿಗೆ ಕೋರ್ಟು ತೀರ್ಪು ಪ್ರಕಟವಾಗಿದೆ . ಶಿಕ್ಷೆಗೆ ಗುರಿಯಾದವರು ಬೂತಪ್ಲಿಕರ ಅನುಯಾಯಿಗಳಾಗಿದ್ದಾರೆ. ಫ್ರಾನ್ಸಿನಿಂದ ಅಲ್ಜೀರಿಯ 1962ರಲ್ಲಿ ಸ್ವತಂತ್ರಗೊಂಡಿತ್ತು. ಇದಾದ ಬಳಿಕ ಮೊದಲ ಬಾರಿ ಅಲ್ಜೀರಿಯ ಕೋರ್ಟಿನಲ್ಲಿ ವಿಚಾರಣೆ ನಡೆದಿದೆ. ಕಾರು ನಿರ್ಮಾಣ ಕಂಪೆನಿಯೊಂದಿಗೆ ಸೇರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಇಬ್ಬರು ಮಾಜಿ ಪ್ರಧಾನಿಗಳ ವಿರುದ್ಧ ವಿಚಾರಣೆ ನಡೆದಿತ್ತು.