ದೇಶದಲ್ಲಿ ಎಲ್ಲರಿಗೂ ಉಚಿತ ಕೊರೋನ ವ್ಯಾಕ್ಸಿನ್ ಪಡೆಯುವ ಹಕ್ಕಿದೆ- ಸಿಎಂ ಕೇಜ್ರಿವಾಲ್

0
382

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.24: ಕೊರೋನ ವೈರಸ್ ಪ್ರತಿರೋಧ ವ್ಯಾಕ್ಸಿನ್ ತಯಾರಾದರೆ ಅದನ್ನು ಎಲ್ಲ ಭಾರತೀಯರಿಗೂ ಉಚಿತವಾಗಿ ಲಭ್ಯಗೊಳಿಸಬೇಕೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದರು.

ಬಿಹಾರ ಚುನಾವಣೆಯಲ್ಲಿ ಬಿಜೆಪಿಗೆ ವೋಟು ಹಾಕಿದರೆ ರಾಜ್ಯದಲ್ಲಿ ಜನರಿಗೆ ಉಚಿತವಾಗಿ ವ್ಯಾಕ್ಸಿನ್ ಲಭ್ಯಗೊಳಿಸಲಾಗುವುದು ಎಂದು ಬಿಜೆಪಿ ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಕೇಜ್ರಿವಾಲ್ ಎಲ್ಲರಿಗೂ ಉಚಿತ ವ್ಯಾಕ್ಸಿನ್ ಲಭ್ಯಗೊಳಿಸಬೇಕೆಂದರು.

ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತ ಕೊರೋನ ವೈರಸ್ ವ್ಯಾಕ್ಸಿನ್ ಲಭ್ಯಗೊಳಿಸಲಾಗುವುದು ಇದು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಮೊದಲ ಭರವಸೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದರು. ಇದರ ವಿರುದ್ಧ ಪ್ರತಿಪಕ್ಷಗಳು ಒಟ್ಟಾಗಿ ರಂಗಪ್ರವೇಶಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದು ಚರ್ಚೆಯಾಗುತ್ತಿದೆ.

ಬಿಜೆಪಿಗೆ ಮತ ಹಾಕದಿದ್ದರೆ ಭಾರತೀಯರಿಗೆ ಉಚಿತ ವ್ಯಾಕ್ಸಿನ್ ಸಿಗುವುದಿಲ್ಲವೇ ಎಂಬುದಾಗಿ ಕೇಜ್ರಿವಾಲ್ ಈ ಹಿಂದೆ ಪ್ರಶ್ನಿಸಿದ್ದರು.