ಭಾರತೀಯ ಕಾನೂನಿಗೆ ಬದ್ಧರಾಗಿರಿ: ಟ್ವಿಟರ್‌ಗೆ ಮುನ್ನೆಚ್ಚರಿಕೆ ನೀಡಿದ ಕೇಂದ್ರ ಸರಕಾರ

0
335

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದ ಕಾನೂನ್ನು ಅನುಸರಿಸಬೇಕೆಂದು ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ವಿಟರ್‌ಗೆ ಕೇಂದ್ರ ಸರಕಾರ ಮುನ್ನೆಚ್ಚರಿಕೆ ನೀಡಿದೆ. ರೈತರ ಹೋರಾಟಕ್ಕೆ ಸಂಬಂಧಿಸಿದ ಪ್ರತಿಕ್ರಿಯಿಸಿದ್ದ ಸಾವಿರದಷ್ಟು ಖಾತೆಗಳನ್ನು ರದ್ದುಪಡಿಸಬೇಕೆಂದು ಕೇಂದ್ರ ಸರಕಾರ ಆಜ್ಞಾಪಿಸಿತ್ತು. ಅದನ್ನು ಟ್ವಿಟರ್ ತಿರಸ್ಕರಿಸಿತ್ತು. ಇದಾದ ನಂತರ ಕೇಂದ್ರ ಸರಕಾರದಿಂದ ಮುನ್ನೆಚ್ಚರಿಕೆ ಲಭಿಸಿದ್ದು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಿಸಿ ದ್ವೇಷ ಹರಡುವುದಕ್ಕೆ ಬಿಡುವುದಿಲ್ಲ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ರಾಜ್ಯಸಭೆಯಲ್ಲಿ ಹೇಳಿದರು.

ಸಾಮಾಜಿಕ ಮಾಧ್ಯಮಗಳನ್ನು ಎಲ್ಲರೂ ಗೌರವಿಸುತ್ತಾರೆ. ಜನಸಾಮಾನ್ಯರ ಧ್ವನಿ ಅದರಲ್ಲಿದೆ. ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಆದರೆ, ಸುಳ್ಳು ಸುದ್ದಿ ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಿಸಿದರೆ ಕ್ರಮ ಜರಗಿಸಬೇಕಾಗುತ್ತದೆ ಎಂದು ರವಿಶಂಕರ್ ಹೇಳಿದರು. ನಕಲಿ ವಾರ್ತೆ, ವಿವರಗಳು ಪ್ರಚಾರ ಮಾಡುವುದನ್ನು ಗುರುತಿಸಲು ವ್ಯವಸ್ಥೆ ಇದೆ. ಟ್ವಿಟರ್, ಫೇಸ್‍ಬುಕ್, ವಾಟ್ಸಪ್, ಲಿಂಕಂಡ್‍ಇನ್ ಯಾವುದೇ ಇದ್ದರೂ ಭಾರತೀಯ ಕಾನೂನುಗಳನ್ನು ಅನುಸರಿಸಬೇಕೆಂದು ಅವರು ಹೇಳಿದರು.