ರಿಲಯನ್ಸ್ ವಿರುದ್ಧ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿದ ಅಮೆಜಾನ್

0
185

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಫೆ.19: ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರಿಯ ವಿರುದ್ಧ ಅಮೆಜಾನ್ ಸುಪ್ರೀಂಕೋರ್ಟಿನ ಬಾಗಿಲು ತಟ್ಟಿದೆ. ರಿಲಯನ್ಸ್ ಮತ್ತು ಫ್ಯೂಚರ್ ಗ್ರೂಪ್ ನಡುವೆ ನಡೆದಿರುವ ವ್ಯವಹಾರವನ್ನು ತಡೆಯಬೇಕೆಂದು ಅದು ಸುಪ್ರೀಂಕೋರ್ಟಿನಲ್ಲಿ ಆಗ್ರಹಿಸುತ್ತಿದೆ. ಈ ವ್ಯವಹಾರಕ್ಕೆ ದಿಲ್ಲಿ ಹೈಕೋರ್ಟಿನ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿತ್ತು. ಅದನ್ನು ವಿಭಾಗೀಯ ಪೀಠ ತೆರವು ಗೊಳಿಸಿತ್ತು.

ಎರಡು ಕಂಪೆನಿಗಳ ನಡುವೆ ಒಪ್ಪಂದದಲ್ಲಿ ಕಾಂಪಿಟೇಶನ್ ಕಮೀಶನ್ ಮತ್ತು ಸೆಬಿಯಲ್ಲಿ ಪ್ರಕರಣ ಮುಂದುವರಿಸಲು ಹೈಕೋರ್ಟಿನ ಅನುಮತಿ ಸಿಕ್ಕಿತ್ತು. ಆದರೆ, ಇದು ಮಧ್ಯಕಾಲೀನ ತೀರ್ಪು ಎಂದು ಪ್ರಕರಣ ಫೆಬ್ರುವರಿ 26ಕ್ಕೆ ವಿಚಾರಣೆಗೆ ಬರಲಿದೆ ಎಂದು ಕೋರ್ಟು ತಿಳಿಸಿತ್ತು. ರಿಲಯನ್ಸ್ ಶೇರು ಮಾರಾಟದ ಫ್ಯೂಚರ್ ಗ್ರೂಪ್ ತೀರ್ಮಾನ ತಮ್ಮೊಂದಿಗಿನ ಒಪ್ಪಂದ ಉಲ್ಲಂಘನೆಯಾಗಿದೆ ಎಂದು ಅಮೆಜಾನ್ ವಾದಿಸುತ್ತಿದೆ.

ವ್ಯವಹಾರದ ವಿರುದ್ಧ ಸಿಂಗಾಪುರದಲ್ಲಿ ವಿವಾದ ಪರಿಹಾರ ಕೋರ್ಟಿನ ಆದೇಶವಿದೆ ಎಂದು ಅಮೆಜಾನ್ ವಾದಿಸುತ್ತಿದ್ದು, ಇದು ಒಪ್ಪಂದಕ್ಕೆ ಅನ್ವಯಿಸಬೇಕಾಗಿದೆ ಎಂದು ಅಮೆಜಾನ್ ಆಗ್ರಹಿಸುತ್ತಿದೆ.