ಅನಿಲ್ ಅಂಬಾನಿ ತಪ್ಪಿತಸ್ಥ; ಎರಿಕ್ಸನ್‍ಗೆ 450 ಕೋಟಿ ರೂ. ನೀಡಬೇಕು, ತಪ್ಪಿದರೆ 3 ತಿಂಗಳು ಜೈಲು -ಸುಪ್ರೀಂಕೋರ್ಟು

0
681

ಹೊಸದಿಲ್ಲಿ: ಸ್ವೀಡಿಶ್ ಕಂಪೆನಿ ಎರಿಕ್ಸನ್ ಕೋರ್ಟು ನಿಂದೆ ಪ್ರಕರಣದಲ್ಲಿ ರಿಲಯನ್ಸ್ ಕಮ್ಯುನಿಕೇಶನ್ ಚೇರ್‍ಮೆನ್ ಅನಿಲ್ ಅಂಬಾನಿ ತಪ್ಪಿತಸ್ಠ ಎಂದು ಸುಪ್ರೀಂಕೋರ್ಟು ಹೇಳಿದೆ. ನಾಲ್ಕು ವಾರಗಳೊಳಗೆ ಎರಿಕ್ಸನ್‍ಗೆ 450 ಕೋಟಿ ರೂಪಾಯಿ ನೀಡಬೇಕು. ಇಲ್ಲದಿದ್ದರೆ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ಕೋರ್ಟು ತೀರ್ಪು ನೀಡಿದೆ.

ಇದೇವೇಳೆ ಅನಿಲ್ ಅಂಬಾನಿ ತಿರಸ್ಕಾರದಿಂದ ವರ್ತಿಸಿದ್ದಾರೆ. ಇದನ್ನು ಬೆಟ್ಟು ಮಾಡಿದ ಕೋರ್ಟು ಒಂದು ಕೋಟಿರೂಪಾಯಿ ಸುಪ್ರೀಂಕೋರ್ಟಿನ ರಿಜಿಸ್ಟ್ರಿಗೆ ಪಾವತಿಸಬೇಕೆಂದು ಸೂಚಿಸಿದೆ. ಮೊಬೈಲ್ ಫೋನ್ ಉಪಕರಣಗಳನ್ನು ನಿರ್ಮಿಸಿ ಕೊಟ್ಟಿರುವ ಎರಿಕ್ಸನ್ ಕಂಪೆನಿಗೆ ಬಾಕಿ ಉಳಿಸಿದ 453 ಕೋಟಿರೂಪಾಯಿ ಬಡ್ಡಿ ಸಹಿತ 550 ಕೋಟಿರೂಪಾಯಿ ಡಿಸೆಂಬರ್ 15ರೊಳಗೆ ಪಾವತಿಸಬೇಕೆಂದು ಕಳೆದ ಅಕ್ಟೋಬರ್‍ನಲ್ಲಿ ಸುಪ್ರೀಂಕೋರ್ಟು ಆದೇಶ ಹೊರಡಿಸಿತ್ತು. ಕೋರ್ಟು ತೀರ್ಪು ಜಾರಿಗೊಂಡಿಲ್ಲ ಎಂದು ಸೂಚಿಸಿ ಎರಿಕ್ಸನ್ ಕಂಪೆನಿ ಪುನಃ ಸುಪ್ರೀಂಕೋರ್ಟಿನ ಮೊರೆ ಹೋಗಿತ್ತು.