ಶ್ರೀಲಂಕಾದಲ್ಲಿ ಮುಸ್ಲಿಂ ವಿರೋಧಿ ಕೋಮು ಗಲಭೆ: ಓರ್ವನ ಸಾವು

0
225

ಕೊಲೊಂಬೊ,ಮೇ 14: ಈಸ್ಟರ್ ಸರಣಿ ಸ್ಫೋಟದ ಬೆನ್ನಿಗೆ ಶ್ರೀಲಂಕಾದಲ್ಲಿ ಮುಸ್ಲಿಂ ವಿರೋಧಿ ಗಲಭೆ ಭುಗಿಲೆದಿದ್ದು, ಮುಸ್ಲಿಂ ಸಂಸ್ಥೆ, ಮಸೀದಿಯ ಮೇಲೆ ನಡೆದ ದಾಳಿಯಲ್ಲಿ ಗಾಯಗೊಂಡಿದ್ದ 45 ವರ್ಷದ ವ್ಯಕ್ತಿ ಪುಟ್ಟಲಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜನರ ಗುಂಪು ಈತನನ್ನು ಮಾರಕಾಯುಧ ಬಳಸಿ ಇರಿದು ಹಾಕಿತ್ತು. ಇವರು ಗಲಭೆಯಲ್ಲಿ ಕೊಲೆಯಾದ ಮೊದಲ ವ್ಯಕ್ತಿಯಾಗಿದ್ದಾರೆ. ವ್ಯಕ್ತಿಯ ಸಾವಿನ ನಂತರ ಪೊಲೀಸರು ಪ್ರದೇಶದಲ್ಲಿ ಕಫ್ರ್ಯೂ ಹೇರಿದ್ದಾರೆ.ಕಳೆದ ದಿವಸ ದೇಶದಲ್ಲಿ ಫೇಸ್‍ಬುಕ್, ವಾಟ್ಸಪ್, ಸಾಮಾಜಿಕ ಮಾಧ್ಯಮಗಳಿಗೆ ನಿಯಂತ್ರಣ ವಿಧಿಸಲಾಗಿತ್ತು.

ಕುರುನೆಗಲೆಯಲ್ಲಿ ಹಲವು ಮಸೀದಿ, ಮನೆ, ಅಂಗಡಿಗಳನ್ನು ಕೆಡವಲಾಗಿದೆ.ದಾಳಿ ನಡೆಸಿದ ದುಷ್ಕರ್ಮಿ ಯುವಕರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸೈನಿಕ ವಕ್ತಾರ ಸಮಿತ್ ಅಟ್ಟಪ್ಪಟ್ಟು ಹೇಳಿದ್ದಾರೆ. ಮುಸ್ಲಿಂ ಬಹುಸಂಖ್ಯಾತ ನಗರ ಕಿನಿಯಮದ ಅಬ್ರಾರ್ ಮಸೀದಿಯನ್ನು ರವಿವಾರ ರಾತ್ರೆ ದಾಳಿ ಮಾಡಲಾಗಿದೆ. ಕಿಟಕಿ ಬಾಗಿಲು ಮುರಿದ ದುಷ್ಕರ್ಮಿಗಳು ಮಸೀದಿಯ ಮುಂದೆ ನಿಲ್ಲಿಸಿದ್ದ ಏಳು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿರುವುದಾಗಿ ಮಸೀದಿ ಪದಾಧಿಕಾರಿಗಳು ಆರೋಪಿಸಿದ್ದಾರೆ.