ಬಿಹಾರ ಚುನಾವಣಾ ಪ್ರಚಾರಕ್ಕೆ ಬಿಜೆಪಿ ನನ್ನ ಹಾಡು ಕದ್ದಿದೆ: ನಿರ್ಮಾಪಕ ಅನುಭವ್ ಸಿನ್ಹಾ ಆರೋಪ

0
412

ಸನ್ಮಾರ್ಗ ವಾರ್ತೆ

ಮುಂಬೈ,ಅ.19: ಬಿಹಾರದ ಚುನಾವಣೆ ಪ್ರಚಾರಕ್ಕಾಗಿ ಬಿಜೆಪಿ ತನ್ನ ಬಂಬಯ್ ಮೆನ್‍ಕಾಬ ರ್ಯಾಪ್ ಹಾಡನ್ನು ಕದ್ದಿದೆ ಎಂದು ಸಿನೆಮಾ ನಿರ್ಮಾಪಕ ಅನುಭವ್ ಸಿನ್ಹಾ ಆರೋಪಿಸಿದ್ದಾರೆ. ಮನೋಜ್ ಬಜ್‍ಪೇಯ್ ಹಾಡಿ ಅನುಭವಿಸಿದ ಹಾಡು ಬಂಬರ್ ಮೆನ್ ಕಾ ಬಾ ಆಗಿದ್ದು ಸೆಪ್ಟಂಬರಿನಲ್ಲಿ ಹೊರಬಂದಿದ್ದು, ವಲಸೆ ಕಾರ್ಮಿಕರ ಹೋರಾಟವನ್ನು ವಿವರಿಸುತ್ತಿದೆ.

ಕೆಲವು ದಿವಸದ ಮೊದಲು ಬಿಜೆಪಿಯ ಬಿಹಾರ ವಿಭಾಗ ಟ್ವಿಟರ್‍ನಲ್ಲಿ ಬಿಹಾರ್ ಮೆನ್ ಇ ಬಾ ಎಂಬ ಪ್ರಚಾರ ಹಾಡನ್ನು ಹೊರತಂದಿತ್ತು. ತನ್ನ ಹಾಡಿಗೆ ಇದು ಹೋಲುತ್ತದೆ ಎಂದು ಅನುಭವ್ ಹೇಳುತ್ತಾರೆ. ಎನ್‍ಡಿಎ ಸರಕಾರದ ಅಧೀನದಲ್ಲಿ ರಾಜ್ಯದ ಅಭಿವೃದ್ಧಿಯ ಕುರಿತು ಹಾಡಿನ ಸಾಲುಗಳಿವೆ. “ನನಗೆ ಹೇಳದೆ ನಿರ್ವಾಹವಿಲ್ಲ. ಇದನ್ನು ಹೊರಗೆ ಹೇಳದಿದ್ದರೆ ಸಮಸ್ಯೆ ಎದುರಿಸಬೇಕಾದೀತು. ನನ್ನ ಗೆಳೆಯರು ಮೌನವಾಗಿರಲು ಹೇಳಿದರು. ಆದರೆ, ಬಿಜೆಪಿ ಬಿಹಾರ ಚುನಾವಣಾ ಪ್ರಚಾರಕ್ಕೆ ಉಪಯೋಗಿಸುವ ಹಾಡು ಆರು ವಾರ ಹಿಂದೆ ಹೊರಬಂದ ಬಂಬಯ್ ಮೆನ್ ಕಾ ಬಾ ಎಂಬ ಹಾಡಿನ ಟ್ರೂ ಕಾಪಿಯಾಗಿದೆ. ಆ ಹಾಡಿನ ಶೇ. 100ರಷ್ಟು ಕಾಪಿರೈಟ್ ತನ್ನದು ಎಂದು ಅನುಭವ್ ಸಿನ್ಹ ಟ್ವೀಟ್ ಮಾಡಿದ್ದಾರೆ.

ದೇಶವನ್ನಾಳುವ ಬಿಜೆಪಿ ಕೂಡ ಈ ನಿಟ್ಟಿನ ಕಾನೂನು ಪಾಲಿಸುತ್ತಿಲ್ಲ ಇದು ಅಪಾಯಕಾರಿ ಎಂದು ಅವರು ಹೇಳಿದರು. ಯಾರೂ ಅನುಮತಿ ಕೇಳಿ ಈ ಹಾಡನ್ನು ತೆಗೆದುಕೊಂಡಿಲ್ಲ. ಕೋರ್ಟಿನಲ್ಲಿ ಕೇಸು ಹಾಕುವುದು ತನ್ನ ಶಕ್ತಿಯನ್ನು ಮೀರಿದ್ದು. ನಾನು ಬೆಂಬಲವನ್ನು ಮಾತ್ರ ಬಯಸುತ್ತೇನೆ. ಆದುದರಿಂದ ಟ್ರಾಲ್ ಮಾಡುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಅನುಭವ್ ಸಿನ್ಹಾ ಹೇಳಿದರು.

ಅನುಭವ ಸಿನ್ಹಾರ ಹಾಡು ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ ಕೂಡ ಉಪಯೋಗಿಸಿತ್ತು. ಅದರ ಕುರಿತು ಅವರು ಏನು ಹೇಳುತ್ತಾರೆ ಎಂದು ಬಿಜೆಪಿ ಪ್ರತಿಕ್ರಿಯೆ ನೀಡಿದೆ.