ಏಪ್ರಿಲ್ 23- 29: ಮಂಗಳೂರು ಜಿಐಓ ದಿಂದ ಬೇಸಿಗೆ ರಜಾದಿನ ಶಿಬಿರ

0
468

‘ಅಲ್ಲಾಹನೆಡೆಗೆ ಧಾವಿಸಿರಿ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಮಂಗಳೂರು ಗರ್ಲ್ಸ್ ಇಸ್ಲಾಮಿಕ್ ಆರ್ಗನ್ನೈಝೇಷನ್ (ಜಿಐಓ) ಏಪ್ರಿಲ್ 23ರಿಂದ 29 ರವರೆಗೆ ಹೆಣ್ಣುಮಕ್ಕಳಿಗಾಗಿ ಇಸ್ಲಾಮಿ ರಜಾದಿನ ಶಿಬಿರವನ್ನು ಏರ್ಪಡಿಸಿದೆ. ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:೦೦ ಗಂಟೆಯವರೆಗೆ ಇಲ್ಲಿನ ಹಿದಾಯತ್ ಸೆಂಟರ್ ನಲ್ಲಿ ನಡೆಯಲಿರುವ ಈ ಶಿಬಿರದಲ್ಲಿ 13 ರಿಂದ 28 ವರ್ಷದೊಳಗಿನ ಹೆಣ್ಣು ಮಕ್ಕಳು ಭಾಗವಹಿಸಬಹುದು. ಶಿಬಿರ ಶುಲ್ಕ- 3೦೦ ರೂಪಾಯಿ. ಈ ಶಿಬಿರದಲ್ಲಿ ಕುರ್ ಆನ್, ಹದೀಸ್ ತರಗತಿಗಳು, ಪಿಪಿಟಿ ಪ್ರದರ್ಶನ, ನೈತಿಕ ಮೌಲ್ಯಕ್ಕೆ ಸಂಬಂಧಿಸಿದ ತರಗತಿಗಳು, ಪ್ರಭಾವಿಗಳ ಜೀವನ ವೃತ್ತಾ೦ತ, ಸ್ಪರ್ಧೆಗಳು, ಪಿಕ್ ನಿಕ್ ಮತ್ತಿತರ ವಿಶೇಷತೆಗಳು ಇವೆ. ಆಸಕ್ತರು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
8105975157, 7406511300, 9611091696