ಇಸ್ರೇಲ್‌ನೊಂದಿಗೆ ಸಂಬಂಧ: UAE ಪುಸ್ತಕ ಅವಾರ್ಡ್ ಬಹಿಷ್ಕರಿಸಿದ ಅರಬ್ ಬರಹಗಾರರು

0
436

ಸನ್ಮಾರ್ಗ ವಾರ್ತೆ

ಅಬುಧಾಬಿ: ಇಸ್ರೇಲಿನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕುದುರಿಸಿಕೊಂಡಿರುವ ಯುಎಇಯ ಕ್ರಮವನ್ನು ಪ್ರತಿಭಟಿಸಿ ಯುಎಇಯ ಪುಸ್ತಕ ಪ್ರಶಸ್ತಿಗಳನ್ನು ಅರಬ್ ಬರಹಗಾರರು ತಿರಸ್ಕರಿಸಿದ್ದಾರೆ. ಅಂತಾರಾಷ್ಟ್ರೀಯ ಅರಬ್ ಸಾಹಿತ್ಯ ಪ್ರಶಸ್ತಿ ಪ್ರೈಝ್ ಪಾರ್ ಅರಬಿಕ್ ಫಿಕ್ಷನ್(ಐಪಿಎಎಫ್) ಮತ್ತು ಶೇಖ್ ಝಾಯಿದ್ ಪುಸ್ತಕ ಅವಾರ್ಡನ್ನು ಹಲವು ಅರಬ್ ಬರಹಗಾರರು ಬಹಿಷ್ಕರಿಸಿದ್ದಾರೆ. ಅಬುಧಾಬಿ ಸಾಂಸ್ಕೃತಿಕ, ಟೂರಿಸಂ ಸಚಿವಾಲಯ ಅವಾರ್ಡ್‌ಗೆ ಹಣಕಾಸು ಸೌಲಭ್ಯವನ್ನು ಒದಗಿಸುತ್ತದೆ ಎಂಬುದಾಗಿ ಮಿಡ್ಲೀಸ್ಟ್ ಮಾನಿಟರ್ ವರದಿ ಮಾಡಿದೆ.

ಮಾಜಿ ಐಪಿಎಫ್ ಪ್ರಶಸ್ತಿಗೆ ಪಾತ್ರರಾದವರು, ಜ್ಯೂರಿ ಸದಸ್ಯರು, ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡದುಕೊಂಡ ಬರಹಗಾರರು ಕಾರ್ಯಕ್ರಮ ಬಹಿಷ್ಕರಿಸಲು ಕರೆ ನೀಡಿದ್ದಾರೆ. ಯುಎಇಯಿಂದ ಪ್ರಶಸ್ತಿ ಸಮಿತಿಗೆ ಧನ ಸಹಾಯ ಪಡೆಯುವುದನ್ನು ನಿಲ್ಲಿಸಬೇಕೆಂದು ಕಾರ್ಯಕ್ರಮದ ಟ್ರಸ್ಟಿಗಳಿಗೆ ಬರಹಗಾರರು ಆಗ್ರಹಿಸಿದ್ದಾರೆ.