ಅರಬ್-ಯುರೋಪಿಯನ್ ಶೃಂಗಸಭೆ: 22 ಅರಬ್ ನಾಯಕರ ಪೈಕಿ 11 ಮಂದಿಯಷ್ಟೇ ಭಾಗಿ

0
981

ಈಜಿಪ್ಟಿನ ರೆಸಾರ್ಟ್ ನಗರವಾದ ಶರ್ಮ್ ಎಲ್-ಶೇಕ್ ನಲ್ಲಿ ನಡೆದ ಅರಬ್-ಯುರೋಪಿಯನ್ ಶೃಂಗಸಭೆಯಲ್ಲಿ 22 ಅರಬ್ ನಾಯಕರ ಪೈಕಿ 11 ಮಂದಿ ಮಾತ್ರ ಭಾಗವಹಿಸಿದ್ದರು ಎಂದು ಅರಬಿ 21 ವರದಿ ಮಾಡಿದೆ.

“ಭಯೋತ್ಪಾದನೆ ಮತ್ತು ಕಾನೂನುಬಾಹಿರ ವಲಸೆ” ಸೇರಿದಂತೆ ಜಾಗತಿಕ ಸವಾಲುಗಳನ್ನು ಜಂಟಿಯಾಗಿ ಎದುರಿಸುವ ಬಗ್ಗೆ ಎರಡು ದಿನಗಳ ಕಾಲ ನಡೆದ ಶೃಂಗಸಭೆ ಚರ್ಚಿಸಲಾಯಿತು.

ಹೇಳಿಕೆಯೊಂದರಲ್ಲಿ, ಈಜಿಪ್ಟ್ ವಿದೇಶಾಂಗ ಸಚಿವಾಲಯವು ಈ ರೀತಿ ಹೇಳಿಕೊಂಡಿದೆ ”ಹೂಡಿಕೆಯ” ಘೋಷಣೆಯ ಅಡಿಯಲ್ಲಿ ಈ ಶೃಂಗಸಭೆಯನ್ನು ನಡೆಸಲಾಗುತ್ತಿದೆ. ಅದು ಪ್ರದೇಶವನ್ನು ಸ್ಥಿರಗೊಳಿಸುವುದು ಹೇಗೆ, ಭಯೋತ್ಪಾದನೆಯ ಅಪಾಯಗಳನ್ನು ಎದುರಿಸುವುದು ಹೇಗೆ, ಶಾಂತಿ ಪ್ರಕ್ರಿಯೆ, ಅಕ್ರಮ ವಲಸೆ ಮತ್ತು ಯುರೋಪ್ ನ ನಿರಾಶ್ರಿತರ ಬಿಕ್ಕಟ್ಟುಗಳನ್ನು ಕೇಂದ್ರೀಕರಿಸಿ ಸಭೆ ನಡೆಸಲಾಗಿದೆ ಎಂದು ಈಜಿಪ್ಟ್ ಹೇಳಿದೆ.

ಕೃಪೆ: ಮಿಡ್ಲ್ ಈಸ್ಟ್ ಮಾನಿಟರ್