‘ಸಹೀಹುಲ್ ಬುಖಾರಿ’ ಇಟಲಿ ಭಾಷೆಗೆ ತರ್ಜುಮೆ

0
659

ಸನ್ಮಾರ್ಗ ವಾರ್ತೆ

ದುಬೈ,ಜು.4: ಸಹೀಹುಲ್ ಬುಖಾರಿಯ ಸಂಪೂರ್ಣ ಹದೀಸ್ ಅನುವಾದ ಮೊದಲ ಬಾರಿ ಇಟಲಿ ಭಾಷೆಯಲ್ಲಾಗುತ್ತಿದೆ. ತವಸ್ಸುಲ್ ಯುರೋಪ್ ನಿದೇರ್ಶಕ ಪ್ರಮುಖ ಬರಹಗಾರ್ತಿ ಡಾ.ಸಬ್ರಿನಾ ಲೀಯ ನೇತೃತ್ವದಲ್ಲಿ ಒಂದು ವರ್ಷದ ಹಿಂದೆ ಅನುವಾದ ಕಾರ್ಯ ಮುಂದುವರಿದಿದೆ.

ಹನ್ನೊಂದು ಭಾಗಗಳು ಈಗಾಗಲೇ ಪ್ರಕಟವಾಗಿದ್ದು, 35 ಭಾಗಗಳನ್ನೊಳಗೊಂಡ 4000ಪುಟಗಳ ಗ್ರಂಥ ಮುಂದಿನ ವರ್ಷ ಆರಂಭದಲ್ಲಿ ಪೂರ್ಣಗೊಳ್ಳುವ ವಿಶ್ವಾಸವನ್ನು ಪ್ರಕಾಶಕರು ವ್ಯಕ್ತಪಡಿಸಿದ್ದಾರೆ.

ನಟ ಇನ್ನಸೆಂಟ್‍ರ ಕ್ಯಾನ್ಸರ್ ವಾರ್ಡಿನ ನಗು, ಪಾಣಕ್ಕಾಡ್ ಮುಹಮ್ಮದಲಿ ಶಿಹಾಬ್ ತಂಙಳ್‍ರ ಪುಸ್ತಕ ಸಹಿತ ಭಾರತೀಯ ಭಾಷೆಗಳ ಅನೇಕ ಗ್ರಂಥಗಳನ್ನು ಸಬ್ರೀನಾ ಇಟಲಿ ಭಾಷೆಗೆ ತರ್ಜುಮೆ ಮಾಡಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.