ಪ್ರೊ. ಜಮಾಲುದ್ದೀನ್ ಹಿಂದಿಯವರಿಗೆ ಪಿಎಚ್‌ಡಿ‌ ಪದವಿ

0
856

ಸನ್ಮಾರ್ಗ ವಾರ್ತೆ

ಮಣಿಪಾಲ: ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)ಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಹಿರಿಯ ಸಹ ಪ್ರಾಧ್ಯಾಪಕರಾಗಿರುವ ಶ್ರೀ ಜಮಾಲುದ್ದೀನ್ ಹಿಂದಿ (33)ಯವರು ನಾಲ್ಕು ವರ್ಷಗಳ ಕಾಲ ನಡೆಸಿದ (2016-2020) ಸಂಶೋಧನೆಗೆ (Hardness related characteristics of precipitation hardened Al-7075-cast-iron metal matrix composites) ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ) ವಿಶ್ವ ವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು (PhD) ನೀಡಿದೆ. ಇವರು ತಮ್ಮ ಸಂಶೋಧನೆಯನ್ನು ಡಾಕ್ಟರ್ ಅಚ್ಯುತ ಕಿಣಿ ಮತ್ತು ಡಾಕ್ಟರ್ ಸತ್ಯಶಂಕರ್ ಶರ್ಮಾ ರವರ ಮಾರ್ಗದರ್ಶನದಲ್ಲಿ ಕೈಗೊಂಡಿರುತ್ತಾರೆ. ದಿವಂಗತ ಇಬ್ರಾಹಿಮ್ ಸಈದ್ (ಸ್ಥಾಪಕ ಸಂಪಾದಕರು, ಸನ್ಮಾರ್ಗ ವಾರಪತ್ರಿಕೆ) ಮತ್ತು ಆಯಿಶಾ ದಂಪತಿಗಳ ಕಿರಿಯ ಪುತ್ರರಾಗಿರುವ ಇವರು ಪ್ರಸ್ತುತ ಮಣಿಪಾಲದಲ್ಲಿ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ.